Vijayasiri News
ಜಿಲ್ಲೆಗಳುತಾಲ್ಲೂಕು ಸುದ್ದಿವಿಜಯನಗರಹರಪನಹಳ್ಳಿ ಸುದ್ದಿ

ಹರಪನಹಳ್ಳಿ: ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ, ಅಪರಾಧಮುಕ್ತ ಸಮಾಜ ಕಟ್ಟುವಿಕೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಎಸ್‌ಪಿ ಜಾಹ್ನವಿ

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಇರುವ ಭಯ ಹಾಗೂ ಆತಂಕವನ್ನು ಹೋಗಲಾಡಿಸುವ ಮೂಲಕ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವ ಹಿನ್ನೆಲೆಯಲ್ಲಿ ಮತ್ತು ಇಲಾಖೆಯನ್ನು ಜನಸ್ನೇಹಿಯನ್ನಾಗಿ ಜಾರಿಮಾಡುವ ನಿಟ್ಟಿನಲ್ಲಿ ಇಲಾಖೆ ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಹೇಳಿದರು.
ಸೋಮವಾರ ನಗರದ ತರಳಬಾಳು ಕಲ್ಯಾಣಮಂಟಪದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ಉತ್ತಮ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಕಾರ್ಯಕ್ರಮದ ಉದ್ದೇಶ. ಹೀಗಾಗಿ, ಸಾರ್ವಜನಿಕರು, ಪೊಲೀಸ್ ಸಿಬ್ಬಂದಿಯೊAದಿಗೆ ಕೈಜೋಡಿಸುವ ಮೂಲಕ ತೆರೆಮರೆಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ಜತೆಗೆ, ಸೈಬರ್ ವಂಚನೆ ಮಾತ್ರವಲ್ಲದೇ ಯಾವುದೇ ಅಪರಾಧಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಬೇಕು. ಆ ಮೂಲಕ ಅಪರಾಧಮುಕ್ತ ಸಮಾಜ ನಿರ್ಮಿಸಲು ಸಹಕಾರ ನೀಡಬೇಕು. ಮಾಹಿತಿ ನೀಡಿದರೆ ನಮಗೂ ತೊಂದರೆಯಾಗಬಹುದು ಎಂಬ ಭಯ ಬೇಡ, ಮಾಹಿತಿ ನೀಡಿದವರನ್ನ ಯಾವುದೇ ಕಾರಣಕ್ಕೂ ತೊಂದರೆ ಸಿಲುಕಿಸುವುದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಅವರು ಭರವಸೆ ನೀಡಿದರು.

ಡಿವೈಎಸ್‌ಪಿ ವೆಂಕಟಪ್ಪನಾಯಕ ಅವರು ಮಾತನಾಡಿ, ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಾನಸಿಕ ಕಿರುಕುಳ, ಮಾದಕವಸ್ತುಗಳ ಕಳ್ಳಸಾಗಾಣಿಕೆ, ಜೂಜಾಟ ಸೇರಿದಂತೆ ಎಲ್ಲಾ ಬಗೆಯ ಕಾನೂನುಬಾಹಿರ ಕೃತ್ಯಗಳ ಕುರಿತು ತಕ್ಷಣ ಮಾಹಿತಿ ಒದಗಿಸಿದರೆ, ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗುವ ಮೂಲಕ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಜತೆಗೆ, ಅನುಮಾನಸ್ಪದ ವ್ಯಕ್ತಗಳ ಸಂಚಾರದ ಕುರಿತು, ಇಲಾಖೆಯೊಂದಿಗೆ ಮಾಹಿತಿ ಹಂಚಿಕೊಳ್ಳಿ, ಇದರಿಂದ ಸಂಭವನೀಯ ಕೃತ್ಯಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಅವರು ಮಾತನಾಡಿ, ಎಷ್ಟೋ ಅಪರಾಧಿಕ ಕೃತ್ಯಗಳ ಸುಳಿವುಗಳು ಸಾರ್ವಜನಿಕರಿಗೆ ಮಾಹಿತಿ ಇದ್ದರೂ ಸಹ, ಅದರ ಉಸಾಬರೀ ನಮಗೇಕೆ ಎಂಬ ಉದಾಸೀನತೆ ನಮ್ಮಲ್ಲಿದೆ. ಹೀಗಾಗಿ, ಅಂಥಹ ಕೃತ್ಯಗಳು ಮತ್ತಷ್ಟು ಬೆಳೆಯಲು ನಾವೇ ಕಾರಣರಾಗಿದ್ದೇವೆ. ಹೀಗಾಗಿ, ಪೊಲೀಸ್ ಇಲಾಖೆ ಅನುಷ್ಠಾನಗೊಳಿಸಿರುವ ಮನೆ- ಮನೆಗೆ ಪೊಲೀಸ್ ಕಾರ್ಯಕ್ರಮದ ಮೂಲಕ ಅಪರಾಧ ಕೃತ್ಯಗಳ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳುವ ಮೂಲಕ ಸಂಭವನೀಯ ಅಪರಾಧಗಳನ್ನು ತಡೆಯಲು ನಾವು ಸಹಕಾರ ನೀಡಬೇಕಾಗಿದೆ. ಆ ಮೂಲಕ ಶಾಂತಿ, ನೆಮ್ಮದಿಯ ಸಮಾಜ ನಿರ್ಮಾಣದಲ್ಲಿ ನಾವು ಭಾಗಿದಾರರಾಗಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್ ಅವರ ನೇತೃತ್ವದಲ್ಲಿ ವಕೀಲರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಅವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಸಿಪಿಐ ಮಹಾಂತೇಶ್ ಸಜ್ಜನ್, ಹೂವಿನಹಡಗಲಿ ವೃತ್ತದ ಸಿಪಿಐ ದೀಪಕ್ ಬೂಸರೆಡ್ಡಿ, ಹರಪನಹಳ್ಳಿ ಠಾಣೆಯ ಪಿಎಸ್‌ಐ ಶಂಭುಲಿAಗ ಹಿರೇಮಠ್, ಹಲುವಾಗಲು ಠಾಣೆಯ ಪಿಎಸ್‌ಐ ಕಿರಣ್‌ಕುಮಾರ್, ಹಲುವಾಗಲು ಠಾಣೆಯ ಪಿಎಸ್‌ಐ ರಂಗಯ್ಯ, ವಕೀಲರಾದ ಮಂಜುನಾಥ, ಜೆ. ಸೀಮಾ, ತಿರುಮಲ, ಮುಖಂಡರಾದ ಎಚ್. ವಸಂತಪ್ಪ, ಹುಲಿಕಟ್ಟೆ ಚಂದ್ರಪ್ಪ, ಮೈದೂರು ರಾಮಣ್ಣ, ಶ್ರೀಕಾಂತ್ ಸೇರಿದಂತೆ ಇತರರು ಇದ್ದರು.

Related posts

ಹೂವಿನಹಡಗಲಿಯಲ್ಲಿ ಸಿಪಿಐ ಪಕ್ಷದ ನಾಲ್ಕನೇ ತಾಲ್ಲೂಕು ಸಮ್ಮೇಳನಕ್ಕೆ ಚಾಲನೆ, ದುಡಿಯುವ ವರ್ಗದ ಹಿತ ಕಾಯುವಲ್ಲಿ ಸರ್ಕಾರಗಳು ವೈಫಲ್ಯವಾಗಿವೆ: ಎಚ್.ಎಂ. ಸಂತೋಷ್ ಆರೋಪ

Vijayasiri News

|| ಕೋಡಿಬಿದ್ದ ಕಲ್ಲಹಳ್ಳಿ ಕೆರೆ|| ಹರಪನಹಳ್ಳಿ: ಧಾರಾಕಾರ ಮಳೆ, ಮೈದುಂಬಿ ಹರಿಯುತ್ತಿವೆ ಕೆರೆ-ಕಟ್ಟೆಗಳು

Vijayasiri News

ಹರಪನಹಳ್ಳಿ || ಬೆಳೆ ನಾಶಪಡಿಸಿದ ಅರಣ್ಯ ಇಲಾಖೆ; ಬೀದಿಗೆ ಬಿದ್ದ ಬುಡಕಟ್ಟು ಕುಟುಂಬಗಳ ಬದುಕು…!

Vijayasiri News

ಹರಪನಹಳ್ಳಿ: ಆ. 21ರಂದು ನಗರ ಮತ್ತು ವಿವಿಧೆಡೆ ವಿದ್ಯುತ್ ನಿಲುಗಡೆ

Vijayasiri News

ಒಕ್ಕಲುತನ ಪರಂಪರೆಯ ವಿಶಿಷ್ಟ ಉತ್ಸವ, ಭೂಲೋಕಕ್ಕೆ ಮಳೆ ತರಿಸುವ ಮಹಾದೇವ ನಮ್ಮ ಈ ಜೋಕುಮಾರಸ್ವಾಮಿ.

Vijayasiri News

ಆಹಾ… ರಸ್ತೆಯೇ…? ಏನೀದು ನಿನ್ನ ಅವ್ಯವಸ್ಥೆ…!! ಇದು ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ, ಯಾಮಾರಿದರೆ ‘ಯಮನ’ ಸವಾರಿ…!!!

Vijayasiri News
error: Content is protected !!