ವಿಜಯಸಿರಿನ್ಯೂಸ್ಗೆ ಸ್ವಾಗತ
ತಮ್ಮೊಂದಿಗೆ…
ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಿರಿವಂತಿಕೆಯನ್ನು ತನ್ನ ಒಡಲಾಳದಲ್ಲಿಟ್ಟುಕೊಂಡಿರುವ ವಿಶಿಷ್ಟ ಹಾಗೂ ವಿಭಿನ್ನವಾದ ನೆಲಮೂಲ ಸಂಸ್ಕೃತಿಯ ನನ್ನೂರು ಹರಪನಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ‘ವಿಜಯಸಿರಿನ್ಯೂಸ್.ಕಾಂ’ ಎಂಬ ಈ ವಿನೂತನ ಡಿಜಿಟಲ್ ಮಾಧ್ಯಮವನ್ನು ಆರಂಭಿಸಲಾಗಿದೆ.
ನನ್ನೂರಿನ ಸುದ್ದಿಗಳು ಪ್ರಪಂಚದಾದ್ಯಂತ ಪಸರಿಸಬೇಕು ಎಂಬ ಆಲೋಚನೆಯ ಹಿನ್ನೆಲೆಯಲ್ಲಿ ಈ ‘ವಿಜಯಸಿರಿನ್ಯೂಸ್.ಕಾಂ’ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆಗಳು ಸೇರಿದಂತೆ ರಾಜ್ಯದ ಪ್ರತಿಷ್ಠಿತ ಪ್ರಜಾವಾಣಿ ಪತ್ರಿಕೆಯಲ್ಲಿ ಅರ್ಧದಶಕಕ್ಕೂ ಅಧಿಕ ಕಾಲ ಹರಪನಹಳ್ಳಿ ಭಾಗದ ವರದಿಗಾರನಾಗಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿ ಹೊರಬಂದಿದ್ದೇನೆ.
ಜತೆಗೆ, ಗದಗ, ದಾವಣಗೆರೆ ಸೇರಿದಂತೆ ನಾಡಿನ ವಿವಿಧ ಭಾಗದಲ್ಲಿ ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಪತ್ರಿಕೋದ್ಯಮ ವೃತ್ತಿಗೆ ಈಗ ಇಪ್ಪತೈದರ ಹರೆಯ; ಬರೋಬ್ಬರಿ ಕಾಲು ಶತಮಾನದ ಅನುಭವ.

ವಿಭಿನ್ನವಾಗಿ ಸುದ್ದಿಯನ್ನು ಕೊಡಬೇಕು, ಜತೆಗೆ, ಆ ಸುದ್ದಿಗಳು ಪ್ರಪಂಚದಾದ್ಯಂತ ಸದ್ದು ಮಾಡಬೇಕು ಎಂಬ ಹಂಬಲ. ಅದರ ಭಾಗವಾಗಿ ಈಗಾಗಲೇ, ವಿಜಯಸಿರಿನ್ಯೂಸ್ ಹೆಸರಿನ ಯೂಟ್ಯೂಬ್ ಚಾನೆಲ್ ಆರಂಭಿಸಲಾಗಿದೆ.
ಈಗ, ಅದೇ ಹೆಸರಿನಲ್ಲಿ ಮತ್ತಷ್ಟು ಹೊಸತನದೊಂದಿಗೆ ವೆಬ್ಸೈಟ್ ಆರಂಭಿಸಿದ್ದೇವೆ.
ನೆನಪಿರಲಿ; ‘ಹಣ ಪಡೆದು ಸುದ್ದಿ ಮಾಡುವ ಹವ್ಯಾಸ; ಅಭ್ಯಾಸ’ ಈ ಎರಡು ಜಾಯಮಾನವನ್ನು ನಾನು ಅಳವಡಿಸಿಕೊಂಡಿಲ್ಲ.
ನಮ್ಮೂರನ್ನು, ನಮ್ಮ ಜಿಲ್ಲೆಯನ್ನು ಮತ್ತಷ್ಟು ಸುತ್ತಬೇಕು, ಇಲ್ಲಿನ ವೈವಿದ್ಯಮಯ ಸಂಗತಿಗಳನ್ನು ಲೋಕಕ್ಕೆಲ್ಲ ತಿಳಿಸಬೇಕು ಎಂಬ ಅದಮ್ಯ ಆಕಾಂಕ್ಷೆ, ತಳಮಳ ನನ್ನದು. ಇದಕ್ಕಿಂತಲೂ ಹೊಸತನಗಳನ್ನು ಅಳವಡಿಸಿಕೊಳ್ಳುವಂತಿದ್ದರೇ, ಸಲಹೆ ನೀಡಿ ಎಂದು ವಿನಂತಿಸುತ್ತ, ವಿಜಯಸಿರಿನ್ಯೂಸ್.ಕಾಂ ವಾಟ್ಸಪ್ ಸಂಖ್ಯೆ: 9449921636 ಇಲ್ಲವೇ ಈಮೇಲ್: vijayasirinewsv@gmail.com ಸಂಪರ್ಕಿಸಿ. ತಮ್ಮ ಸ್ನೇಹ, ವಿಶ್ವಾಸ ನನಗೆ ಅತ್ಯಮೂಲ್ಯ. ಮುಖಾಮುಖಿಯಾದಾಗ ಒಂದಿಷ್ಟು ಮಾತನಾಡೋಣ ಎಂದು ಹೇಳುತ್ತಾ, ಹರಪನಹಳ್ಳಿ ಭಾಗದ ಸುದ್ದಿಯೂ ಸೇರಿದಂತೆ ವಿಜಯನಗರ ಜಿಲ್ಲೆಯ ಸುದ್ದಿಗಳಿಗೆ ‘ವಿಜಯಸಿರಿನ್ಯೂಸ್.ಕಾಂ’ ಓದುವ ಮೂಲಕ ನಮ್ಮನ್ನು ಬೆಂಬಲಿಸಿ ಎಂಬ ಆಶಯಗೊಂದಿಗೆ…..

ಮಂಜುನಾಥ ಯಲ್ಲಾಪುರದ
ಸಂಪಾದಕರು
ವಿಜಯಸಿರಿನ್ಯೂಸ್.ಕಾಂ
C/O ಬಸವರಾಜ ಸಂಗಪ್ಪನವರ್ ವಕೀಲರು,
ತರಳಬಾಳು ಕಲ್ಯಾಣಮಂಟಪ ಹಿಂಭಾಗ, ಹೊಸಪೇಟೆ ರಸ್ತೆ
ಹರಪನಹಳ್ಳಿ- 583131
ಮೊ: 9449921636
Email: vijayasirinewsv@gmail.com
ಸೋಷಿಯಲ್ ಮೀಡಿಯಾದಲ್ಲಿ ವಿಜಯಸಿರಿನ್ಯೂಸ್

