Vijayasiri News
ಒಕ್ಕಲುತನಹಾವೇರಿ

ಬ್ಯಾಡಗಿ: ಬೆಳೆಯಲ್ಲಿ ನಿಯಂತ್ರಣಕ್ಕೆ ಬಾರದ ಕಳೆ, ಮೆಕ್ಕೆಜೋಳದ ಬೆಳೆಯಲ್ಲಿ ಮಹಾಮಾರಿ ‘ಮುಳ್ಳುಸಜ್ಜೆ’ ಕಳೆ: ಕಂಗಾಲಾದ ಅನ್ನದಾತ

ಟಿಪ್ಪುಸುಲ್ತಾನ ಹುಲಮನಿ.
ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ

ಬ್ಯಾಡಗಿ :ಬ್ಯಾಡಗಿ ತಾಲೂಕು ಸೇರಿದಂತೆ ಜಿಲ್ಲೆಯ ಸಾವಿರಾರು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು, ಮುಳ್ಳುಸಜ್ಜೆ ಎಂಬ ಮಹಾಮಾರಿ ‘ಕಳೆ’ ಮುಂಗಾರು ಬಿತ್ತನೆ ಸಮಯದಲ್ಲಿ ಅಡ್ಡಿಯಾಗಿ ಈಗ ಆಳೆತ್ತರದಲ್ಲಿ ಬೆಳೆದಿದೆ. ಯಾವುದೇ ಕಳೆನಾಶಕಕ್ಕೂ ನಿಯಂತ್ರಣಕ್ಕೆ ಬಾರದೇ ಬೆಳೆಯೆತ್ತರೆಕ್ಕೆ ಬೆಳೆದು ನಿಂತು ರೈತರ ಬದುಕಿನಲ್ಲಿ ಮಗ್ಗಲು ಮುಳ್ಳಾಗಿ ಪರಿಣಮಿಸಿದ ಪರಿಣಾಮ, ಅನ್ನದಾತ ಈಗ ಅಕ್ಷರಶಃ ಕಂಗಾಲಾಗಿದ್ದಾನೆ.
ಕಳೆದ ಜೂನ ತಿಂಗಳಲ್ಲಿ ಮುಂಗಾರು ಸಮೃದ್ಧವಾಗಿ ಸುರಿದ ಬೆನ್ನಲ್ಲೇ ಕೃಷಿ ಚಟುವಟಿಕೆ ಗರಿಗೆದರಿತ್ತು. 20ರಿಂದ 25ದಿನಗಳಿಂದ ವ್ಯಾಪಕ ಬಿತ್ತನೆ ನಡೆದಿತ್ತು. ಮೊಳಕೆಯೊಡೆದು ಚೋಟುದ್ದ ಬೆಳೆದ ಮೆಕ್ಕೆಜೋಳದ ಸಸಿಯೊಂದಿಗೆ ಮುಳ್ಳುಸಜ್ಜೆಯೂ ಕೂಡ ಸ್ಪರ್ಧೆಗೆ ಬಿದ್ದು ಹುಲುಸಾಗಿ ಬೆಳೆದು ಈಗ ರೈತರ ನಿದ್ದೆಗೆಡಿಸಿದೆ.
ಹೂ ಆರಳುವ ಮುನ್ನವೆ ಕೀಳಬೆಕು: ಗರಿ ಬಿಚ್ಚುವ ಹಂತದಲ್ಲಿ ಮೆಕ್ಕೆಜೋಳದ ಸಸಿಗಳನ್ನೇ ಹೋಲುವ ಮುಳ್ಳುಸಜ್ಜೆ ನಿಯಂತ್ರಣವೇ ಒಂದು ದೊಡ್ಡಸವಾಲಾಗಿದೆ. ಹಲವು ರೈತರು ಈಗಾಗಲೇ ಕಳೆನಾಶಕ ಸಿಂಪಡಿಸಿ, ಅದರ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಕಳೆನಾಶಕಕ್ಕೂ ನಿಯಂತ್ರಣದ ಭರವಸೆ ಕಡಿಮೆ. ಕೆಲ ರೈತರು ಕುಂಟೆ ಹೊಡೆದು ಸಾಲುಗಳ ಮಧ್ಯದ ಕಳೆ ನಿರ್ಮೂಲನೆಗೆ ಮುಂದಾಗಿದ್ದಾರೆ. ಆದರೆ, ಬೆಳೆಯೊಂದಿಗೆ ಸಾಲುಗಳಲ್ಲಿ ಬೆಳೆಯುವ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಹೂ ಆಗುವ ಮುನ್ನವೇ ಸ್ವತ: ಕೈಯಿಂದ ಕಿತ್ತು ಹೊರಹಾಕಬೇಕು ಅಂದಾಗ ಮಾತ್ರ ಎರಡ್ಮೂರು ವರ್ಷಗಳಲ್ಲಿ ನಿಯಂತ್ರಣದಲ್ಲಿ ಬರುತ್ತದೆ.
ಕಳೆ ಕಿಳಲು ಬರುತ್ತಿಲ್ಲ ಕೂಲಿ ಕಾರ್ಮಿಕರು: ಆರಂಭದಲ್ಲಿ ಮುಳ್ಳುಸಜ್ಜೆ ನಿರ್ಮೂಲನೆ ಮಾಡದಿದ್ದರೆ ಮೆಕ್ಕೆಜೋಳದೊಂದಿಗೆ ಪೈಪೋಟಿಗೆ ಬಿದ್ದಂತೆ ಬೆಳೆಯುತ್ತದೆ. ಕಾಂಡದಲ್ಲಿನ ಸಣ್ಣ ಮುಳ್ಳುಗಳು ಕೊಯ್ಲಿನ ವೇಳೆ ಕಿರಿಕಿರಿ ಉಂಟು ಮಾಡುತ್ತವೆ. ಕೆಲ ಕೂಲಿ ಕಾರ್ಮಿಕರು ಮುಳ್ಳುಸಜ್ಜೆ ಇದ್ದ ಕಡೆ ಕೆಲಸಕ್ಕೆ ಬರಲು ನಿರಾಕರಿಸುತ್ತಾರೆ. ಸದ್ಯ ಸಾಂಪ್ರದಾಯಿಕ ಕಳೆಗಿಂತ ಮುಳ್ಳುಸಜ್ಜೆಯೇ ತಲೆನೋವು ಉಂಟುಮಾಡಿದೆ.
ಏಕ ಬೆಳೆ ಪದ್ದತಿಯೇ ಮುಳ್ಳಾಗಿದೆ: ಮುಳ್ಳುಸಜ್ಜೆ ಕಳೆಯ ವ್ಯಾಪಕತೆಗೆ ಏಕಬೆಳೆ ಪದ್ದತಿಯೇ ಕಾರಣ. ಬೆಳೆ ಪರಿವರ್ತನೆಗೆ ರೈತರು ಸಂಕಲ್ಪ ಮಾಡಬೇಕು. ಕಳೆದೊಂದು ದಶಕದ ಹಿಂದೆ ಸಾವಿ, ನವಣೆ, ಜೋಳ, ತೊಗರಿ, ಗುರೆಳ್ಳು, ಎಳ್ಳು, ಸಾಸವೆ, ಶೇಂಗಾ, ಹತ್ತಿ, ಅಲಸಂದಿ, ಹೆಸರು, ಉದ್ದು, ರಾಗಿ, ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಪ್ರತಿ ವರ್ಷ ವಿವಿಧ ಬೆಳೆಯನ್ನು ಬೆಳೆಯುವುದರಿಂದ ಕಳೆನಾಶವಾಗುತಿತ್ತು. ಮೊದಲ 30 ದಿನಗಳಲ್ಲಿ ಕಳೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ಹತ್ತಿ ಬೆಳೆ ಸೇರಿದಂತೆ ವಿವಿಧ ಬೆಳೆಯನ್ನು ಬಿತ್ತನೆ ಮಾಡುತ್ತಿದ್ದರು. ಇದರಿಂದ ಕಳೆಯಿಂದ ಮುಕ್ತಿ ಹೊಂದಿದ್ದರು. ಅಲ್ಲದೇ ಮುಳ್ಳುಸಜ್ಜೆ ಪ್ರವೇಶ ಇರಲಿಲ್ಲ. ಕಳೆದೊಂದು ದಶಕದಿಂದ ಒಂದೆ ಬೆಳೆಯನ್ನು ಬೆಳೆಯುತ್ತಿರುವುದರಿಂದ ಕಾಲಕಾಲಕ್ಕೆ ಸಣ್ಣ ಕುಂಟಿ (ಎಡೆ) ಹರಗುತಿದ್ದರು. ಇದರಿಂದ ಕಳೆನಾಶವಾಗುತಿತ್ತು. ಈಗ ಮುಳ್ಳು ಸಜ್ಜೆ ಮಹಾಮಾರಿಯಾಗಿ ಕಾಡುತಿದ್ದು. ಇದರಿಂದ ಇಳುವರಿ ಕುಸಿತವಾಗುವುದು ನಿಶ್ಚಿತವಾಗಿದೆ.
ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಏಕಬೆಳೆ ಪದ್ಧತಿಯಾಗಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಕಾಲದಲ್ಲಿ ಬೆಳೆಯುತ್ತಿದ್ದು, ಇದರಿಂದ ಮುಳ್ಳುಸಜ್ಜೆ ಕಳೆಯ ಹಾವಳಿ ಹೆಚ್ಚಾಗಿದೆ. ಮುಳ್ಳು ಸಜ್ಜೆ ಹತೋಟಿ ಮಾಡಲು ರೈತರು ಬೆಳೆ ಪರಿವರ್ತನೆಯನ್ನು ಅಳವಡಿಸಿಕೊಳ್ಳಬೇಕು.

Related posts

ಪ್ರಥಮಪೂಜಿತ ವಿಘ್ನೇಶ್ವರನ ಉತ್ಸವಕ್ಕೆ ಕ್ಷಣಗಣನೆ, ಬ್ಯಾಡಗಿ: ಕಲಾವಿದರ ಕೈಚಳಕದಲ್ಲಿ ಅರಳಿರುವ ಅಲಂಕಾರಿಕ ಗಣೇಶಮೂರ್ತಿಗಳು

Vijayasiri News

ಬ್ಯಾಡಗಿ: ಸಂಕಷ್ಟಕ್ಕೆ ಸಿಲುಕಿದ ರೈತಾಪಿ ಸಮುದಾಯ, ಕಾಡುಹಂದಿಗಳ ದಾಳಿ; ಕಾಳುಕಟ್ಟುವ ಹಂತದಲ್ಲಿದ್ದ ಗೋವಿನಜೋಳ ಬೆಳೆ ನಾಶ

Vijayasiri News

ಇಳುವರಿ ಕುಂಠಿತಗೊಳ್ಳುವ ಭೀತಿಯಲ್ಲಿ ರೈತಾಪಿ ಸಮುದಾಯ; ಯೂರಿಯಾ ರಸಗೊಬ್ಬರ ಕೊರತೆ; ಅನ್ನದಾತರ ಪರದಾಟ…

Vijayasiri News

ಬ್ಯಾಡಗಿ: ಖಾಸಗೀ ಬಸ್ ಉರುಳಿ ಇಬ್ಬರು ಪ್ರಯಾಣಿಕರ ಸಾವು, ಆರು ಜನರಿಗೆ ಗಂಭೀರ ಗಾಯ

Vijayasiri News

ಬ್ಯಾಡಗಿ: ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತಾಪಿ ಸಮುದಾಯದ ಬದುಕನ್ನು ಹಸನಾಗಿಸಲು ಕಂಕಣಬದ್ಧ: ಶಾಸಕ ಶಿವಣ್ಣವರ

Vijayasiri News

ಬ್ಯಾಡಗಿ|| ಸಮ ಸಮಾಜದ ಸಾಮಾಜಿಕ ವ್ಯವಸ್ಥೆಗೆ ನುಲಿಯ ಚಂದಯ್ಯ ಬದುಕು; ಬರಹ ಸಾರ್ವಕಾಲಿಕ ಮಾದರಿ: ಶಾಸಕ ಶಿವಣ್ಣವರ

Vijayasiri News
error: Content is protected !!