Vijayasiri News
ಜಿಲ್ಲೆಗಳು

ಹೂವಿನಹಡಗಲಿಯಲ್ಲಿ ಸಿಪಿಐ ಪಕ್ಷದ ನಾಲ್ಕನೇ ತಾಲ್ಲೂಕು ಸಮ್ಮೇಳನಕ್ಕೆ ಚಾಲನೆ, ದುಡಿಯುವ ವರ್ಗದ ಹಿತ ಕಾಯುವಲ್ಲಿ ಸರ್ಕಾರಗಳು ವೈಫಲ್ಯವಾಗಿವೆ: ಎಚ್.ಎಂ. ಸಂತೋಷ್ ಆರೋಪ

ವಿಜಯಸಿರಿನ್ಯೂಸ್.ಕಾಂ/ಹೂವಿನಹಡಗಲಿ
ದೇಶದಲ್ಲಿ ದುಡಿಯುವ ಶ್ರಮಿಕ ವರ್ಗದ ಹಿತ ಕಾಪಾಡುವಲ್ಲಿ ಆಳುವ ಸರ್ಕಾರಗಳು ವೈಫಲ್ಯವಾಗಿವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ವಿಜಯನಗರ ಜಿಲ್ಲಾ ಉಸ್ತುವಾರ ಎಚ್.ಎಂ. ಸಂತೋಷ್ ಆರೋಪಿಸಿದರು.
ಶನಿವಾರ ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ತಾಲ್ಲೂಕು ಘಟಕದ ನಾಲ್ಕನೇ ಸಮ್ಮೇಳನಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
ಜನಸಾಮಾನ್ಯರ ಹಾಗೂ ಶ್ರಮಿಕ ಸಮುದಾಯ ಮತಗಳ ಮೂಲಕ ಆಯ್ಕೆಯಾದ ಸರ್ಕಾರಗಳು, ಅಧಿಕಾರದ ಮೇಲೆ ವಿರಾಜಮಾನರಾಗುತ್ತಿದ್ದಂತಿಯೇ, ಅವರ ಶ್ರೇಯೋಭಿವೃದ್ಧಿಗಾಗಿ ಯೋಜನೆ ರೂಪಿಸುವ ಬದಲು, ಧನಿಕರ, ಉಳ್ಳವರ ಹಾಗೂ ಬಂಡವಾಳಶಾಹಿ ಪರವಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಶ್ರಮಿಕ ಹಾಗೂ ಜನಸಾಮಾನ್ಯರನ್ನು ವಂಚಿಸುತ್ತಲೇ ನಡೆದಿವೆ. ಅವರ ಬದುಕಿಗೆ ಪೂರಕವಾದ ಹಾಗೂ ಅವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿವೆ. ಜನಸಾಮಾನ್ಯನ ಸಂಕಷ್ಟಗಳನ್ನು ನಿವಾರಿಸುವಲ್ಲಿ ಜನಪ್ರತಿನಿಧಿಗಳಿಂದ ಸಾಧ್ಯವಾಗದಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಸಂತೋಷ್ ಅವರು, ಅಂಥಹ ಜನಸಾಮಾನ್ಯನ ನೋವುಗಳಿಗೆ, ನ್ಯಾಯಯುತ ಹಕ್ಕುಗಳಿಗೆ ಭಾರತ ಕಮ್ಯುನಿಸ್ಟ್ ಪಕ್ಷ ನಿರಂತರವಾದ ಹೋರಾಟಗಳನ್ನು ನಡೆಸಲಿದೆ ಎಂದರು.
ಕೇAದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿನೀತಿಯಿಂದಾಗಿ, ದೈನಂದಿನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇದರಿಂದಾಗಿ, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬದುಕು ನಡೆಸುವುದೇ ದುಸ್ತರವಾಗಿದೆ. ಜತೆಗೆ, ದುಡಿಯುವ ವರ್ಗದ ಯುವಜನ ಔದ್ಯೋಗಿಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳು ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಎಂದು ಸಂತೋಷ್ ಅವರು ಕಳವಳ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ವೀರಣ್ಣ ಅವರು ಮಾತನಾಡಿ, ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ಸೋತುಹೋಗಿವೆ. ಗ್ಯಾರಂಟಿ ಯೋಜನೆಗಳ ಭ್ರಮೆಯಲ್ಲಿ ಸರ್ಕಾರ ತೇಲಾಡುತ್ತಿದೆ ಎಂದು ದೂರಿದ ಅವರು, ಇಂಥಹ ಪಕ್ಷಗಳಿಗೆ ತಕ್ಕಪಾಠ ಕಲಿಸುವ ನಿಟ್ಟಿನಲ್ಲಿ ಮುಂದಿನ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ, ವ್ಯವಸ್ಥೆಯಲ್ಲಿ ಬದಲಾವಣಗೆ ಮುಂದಾಗಲಾಗುವುದು ಎಂದರು.
ಎಐಟಿಯುಸಿ ತಾಲ್ಲೂಕು ಅಧ್ಯಕ್ಷೆ ಬಿ. ಜಯಲಕ್ಷಿ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ತಯಾರಕರ ಸಂಘದ ಜಿಲ್ಲಾಘಟಕದ ಅಧ್ಯಕ್ಷೆ ಎಚ್. ಅನುಸೂಯಾ, ಪಕ್ಷದ ಕೊಟ್ಟೂರು ತಾಲ್ಲೂಕು ಕಾರ್ಯದರ್ಶಿ ಕೆ. ರೇಣುಕಮ್ಮ, ಹರಪನಹಳ್ಳಿ ತಾಲ್ಲೂಕು ಘಟಕದ ಕಾರ್ಯದರ್ಶಿ ರಮೇಶ್‌ನಾಯ್ಕ್, ಹಗರಿಬೊಮ್ಮನಹಳ್ಳಿ ತಾಲ್ಲೂಕು ಘಟಕದ ಕಾರ್ಯದರ್ಶಿ ಗಂಗಾಧರ, ಮುಖಂಡರಾದ ಬಸವರಾಜ ಸಂಶಿ, ಸವಿತಾ ಹರವಿ, ಜಂಗ್ಲಿಸಾಬ್, ಪಿ. ಕವಿತಾ, ಡಿ. ಮುಕುಂದಗೌಡ, ಎಚ್. ದಂಡೆಮ್ಮ, ವಿಜಯನಾಯ್ಕ್, ತೋಟಯ್ಯ
ಪಕ್ಷದ ತಾಲ್ಲೂಕು ಘಟಕದ ಕಾರ್ಯದರ್ಶಿ ಹಲಗಿ ಸುರೇಶ್ ಅಧ್ಯಕ್ಷತೆವಹಿಸಿದ್ದರು. ಇಪ್ಟಾ ಸಂಘಟನೆಯ ಎ.ಡಿ. ದ್ವಾರಕೀಶ್, ಚಮನ್‌ಸಾಬ್ ಹಾಗೂ ನಾಗರಾಜ್ ಕೋಟಿಹಾಳ್ ತಂಡ ಕ್ರಾಂತಿಗೀತೆ ಹಾಡಿದರು.

Related posts

||ವಿಜಯನಗರ: ಸಿಪಿಐ ಪಕ್ಷದ 2ನೇ ಜಿಲ್ಲಾ ಸಮ್ಮೇಳನ|| ಮತೀಯವಾದ ಮತ್ತು ಭಾವನಾತ್ಮಕ ವಿಷಯಗಳೇ ಬಿಜೆಪಿ ಮೂಲಮಂತ್ರ: ಡಾ. ಸಿದ್ಧನಗೌಡ ಪಾಟೀಲ್

Vijayasiri News

ಬಳ್ಳಾರಿ: ಆ. 10ಕ್ಕೆ ಡಾ.ರಾಜಶೇಖರ ನೀರಮಾನ್ವಿ ಅವರ ಬರಹಗಳ ಕುರಿತ ಸಂವಾದ

Vijayasiri News

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News

ಸಿರವಾರ: ಬುದ್ದಿನ್ನಿ ಚಿನ್ನದಗಣಿ ಪ್ರದೇಶಕ್ಕೆ ತಹಶೀಲ್ದಾರ್ ಪವಾರ್ ಭೇಟಿ, ವೀಕ್ಷಣೆ

Vijayasiri News

ಸಿರವಾರ: ರೈತರ ಧರಣಿ ನಿರ್ಲಕ್ಷ್ಯತೆ ಖಂಡಿಸಿ ಉಪವಾಸ ಸತ್ಯಾಗ್ರಹ

Vijayasiri News

ಹರಪನಹಳ್ಳಿ: ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ, ಅಪರಾಧಮುಕ್ತ ಸಮಾಜ ಕಟ್ಟುವಿಕೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಎಸ್‌ಪಿ ಜಾಹ್ನವಿ

Vijayasiri News
error: Content is protected !!