Vijayasiri News
ಜಿಲ್ಲೆಗಳುತಾಲ್ಲೂಕು ಸುದ್ದಿನಮ್ಮೂರ ಸುದ್ದಿರಾಜಕೀಯವಿಜಯನಗರಹರಪನಹಳ್ಳಿ ಸುದ್ದಿ

ರಸಗೊಬ್ಬರದ ಕೃತಕ ಅಭಾವ ಸೃಷ್ಟಿ; ಬಿಜೆಪಿ ಆರೋಪ, ರೈತರ ನೆರವಿಗೆ ಧಾವಿಸದ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ: ಲಿಂಬ್ಯಾನಾಯ್ಕ್

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಮುAಗಾರು ಮಳೆ ಸಕಾಲದಲ್ಲಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತಾಪಿ ಸಮುದಾಯ ಈಗಾಗಲೇ ಬಿತ್ತನೆ ಮಾಡಿರುವ ಫಸಲಿಗೆ ರಸಗೊಬ್ಬರದ ಕೊರತೆಯ ಪರಿಣಾಮ, ಇಳುವರಿ ಕುಂಠಿತಗೊಳ್ಳುವ ಆತಂಕ ಎದುರಾಗಿದೆ. ರೈತರ ನೆರವಿಗೆ ಬಾರದ ಸರ್ಕಾರ ಅದೊಂದು ಸರ್ಕಾರವೇ?. ರಾಜ್ಯದ ಇಂಥಹ ಸರ್ಕಾರ ತೊಲಗುವಂತಾಗಲಿ ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಘಟಕದ ಕಾರ್ಯದರ್ಶಿ ಎಸ್.ಪಿ. ಲಿಂಬ್ಯಾನಾಯ್ಕ್ ಕಿಡಿಕಾರಿದರು.
ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ಅಧಿಕ ಮಳೆಯಿಂದಾದ ತೇವಾಂಶದ ಹೆಚ್ಚಳಕ್ಕೆ ಬೆಳವಣಿಗೆಯಲ್ಲಿ ಕುಂಠಿತಗೊAಡಿವೆ. ಬೆಳೆದ ಬೆಳೆಯನ್ನು ರಕ್ಷಿಸಬೇಕಾದರೇ, ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರವನ್ನು ಮೇಲ್ಗೊಬ್ಬರವನ್ನಾಗಿ ಕೊಡಲೇಬೇಕಾಗಿದೆ. ಇಲ್ಲವಾದಲ್ಲಿ, ಬೆಳೆ ಸಂಪೂರ್ಣ ಹಾನಿಗೊಳಗಾಗಲಿದೆ. ಸಾಲ- ಸೋಲ ಮಾಡಿ, ಭೂಮಿಯಲ್ಲಿ ಬೆಳೆದುನಿಂತಿರುವ ಬೆಳೆ, ಕಣ್ಮುಂದೆಯೇ, ಕಮರಿ ಹೋಗುತ್ತಿರುವ ಹಿನ್ನೆಲೆಯಲ್ಲಿ ರೈತ ಸಮುದಾಯದಲ್ಲಿ ಆತಂಕ ಮನೆಮಾಡಿದೆ. ಇನ್ನೊಂದೆಡೆ, ಮಾಡಿದ ಸಾಲವೂ ಬೆಟ್ಟದಷ್ಟು ಬೆಳೆಯುತ್ತಿದೆ. ಹೀಗಾಗಿ, ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಕಾಲದಲ್ಲಿ ರಸಗೊಬ್ಬರ ಪೂರೈಸಬೇಕಾದ ಸರ್ಕಾರ, ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿದೆ. ಇಂಥಹ ಸರ್ಕಾರ ರಾಜ್ಯದ ಜನತೆಗೆ ಬೇಕಾ? ಯಾವ ಪುರುಷಾರ್ಥಕ್ಕೆ ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಬೇಕು? ಎಂದು ನಗರದ ತೆಲುಗರ ಓಣಿಯ ರಾಮಮಂದಿರ ಸಮೀಪದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
ರಾಜ್ಯದ ಹಲವು ಕಡೆಗಳಲ್ಲಿ ಪೂರೈಕೆಯಾದ ಬೀಜಗಳ ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಲಾದ ಬೀಜಗಳು ಮೊಳಕೆಯೊಡೆಯುವ ಹಂತದಲ್ಲಿಯೇ ಕೊಳತೆಹೋಗಿವೆ. ಇನ್ನೊಂದೆಡೆ ನಕಲಿ ಕ್ರಿಮಿನಾಶಕದ ಪೂರೈಕೆಯೂ ಯಾರ ಅಳುಕು ಇಲ್ಲದೇ ನಡೆದಿದೆ. ಈಗ, ರಸಗೊಬ್ಬರಕ್ಕಾಗಿ ಪರದಾಟ ನಡೆದಿದೆ. ರೈತವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಹಾಗೂ ರೈತಾಪಿ ಕುಟುಂಬಗಳ ಮೇಲೆ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರ ಕೂಡಲೇ ಅಧಿಕಾರ ಬಿಟ್ಟು ತೊಲಗಲಿ ಎಂದು ಲಿಂಬ್ಯಾನಾಯ್ಕ ಅವರು ಕಿಡಿಕಾರಿದರು.
ರಾಜ್ಯದ ಬೇಡಿಕೆಗಿಂತಲೂ ಅಧಿಕ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಸಕಾಲದಲ್ಲಿ ರಸಗೊಬ್ಬರ ಪೂರೈಕೆ ಮಾಡಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಕೈಲಾಗದವರು ಮೈ ಪರಿಚಿಕೊಂಡ ಎಂಬAತೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಕಡೆ ಬೆರಳುತೋರುವ ಮೂಲಕ, ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಲಿಂಬ್ಯಾನಾಯ್ಕ ಹರಿಹಾಯ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ. ಲಕ್ಷö್ಮಣ ಮಾತನಾಡಿ, ರಾಜ್ಯದಲ್ಲಿ ರಸಾಯನಿಕ ಗೊಬ್ಬರಗಳ ಕೃತಕ ಅಭಾವವನ್ನು ಸೃಷ್ಟಿಮಾಡಲಾಗಿದೆ. ಆ ಮೂಲಕ ರೈತರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸರ್ಕಾರ ಕೇವಲ ಕಮಿಷನ್ ದಂಧೆಯಲ್ಲಿ ಲೇವಾದೇವಿಗೆ ಇಳಿದಿದೆ. ಸಚಿವರು ಮತ್ತು ಆಡಳಿತರೂಢ ಸರ್ಕಾರದ ಶಾಸಕರು ಹಳೆ ಕಲ್ಲುಗಳಿಗೆ ಹೊಸಬಿಲ್‌ಗಳನ್ನು ಬರೆಯುವ ಮೂಲಕ ಸರ್ಕಾರದ ಅನುದಾನವನ್ನು ಕಬಳಿಕೆ ಮಾಡುವಲ್ಲಿ ನಿರತರಾಗಿದ್ದಾರೆ. ಒಟ್ಟಾರೆಯಾಗಿ ರಾಜ್ಯವನ್ನು ದಿವಾಳಿ ಮಾಡಿದ ಶ್ರೇಯಸ್ಸು, ಕೀರ್ತಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಆರೋಪಿಸಿದರು.
ರಾಜ್ಯ ಸಹಕಾರಿ ಸೌಹಾರ್ದ ಮಹಾಮಂಡಲದ ಅಧ್ಯಕ್ಷ ಜಿ. ನಂಜನಗೌಡ, ವಕೀಲರಾದ ಆರುಂಡಿ ನಾಗರಾಜ, ಮೈದೂರು ಮಲ್ಲಿಕಾರ್ಜುನ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಕಣವಿಹಳ್ಳಿ ಮಂಜುನಾಥ, ಓಂಕಾರಗೌಡ, ಚನ್ನನಗೌಡ, ಎಲ್. ಮಂಜ್ಯಾನಾಯ್ಕ್, ಸಿದ್ದನಗೌಡ, ಲಿಂಬ್ಯಾನಾಯ್ಕ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Related posts

|| ನ್ಯಾ. ನಾಗಮೋಹನದಾಸ್ ವರದಿ ಅನುಷ್ಠಾನ ಬೇಡ: ಸ್ವಾಮೀಜಿ|| ಅವೈಜ್ಞಾನಿಕ ವರದಿ ಜಾರಿಗೆ ಮುಂದಾದರೆ ಸಮುದಾಯದ ಶಾಪಕ್ಕೆ ಗುರಿಯಾಗಬೇಕಾದೀತು: ಸೇವಾಲಾಲ್ ಸ್ವಾಮೀಜಿ ಎಚ್ಚರಿಕೆ

Vijayasiri News

ಸುಜಲಾನ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಕತ್ತರಿ; ಬದುಕಿಗೆ ಇಲ್ಲವೇ ಇಲ್ಲ ಇಲ್ಲಿ ಖಾತರಿ…!!! |ಹರಪನಹಳ್ಳಿ: ಪವನ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಾರ್ಮಿಕರಿಗೆ ಕಾರ್ಯಭಾರದ ಅಧಿಕ ಹೊರೆ |

Vijayasiri News

ಹರಪನಹಳ್ಳಿ: ಆ. 21ರಂದು ನಗರ ಮತ್ತು ವಿವಿಧೆಡೆ ವಿದ್ಯುತ್ ನಿಲುಗಡೆ

Vijayasiri News

ಹರಪನಹಳ್ಳಿಯಲ್ಲಿ ಬಿಜೆಪಿಯ ಹರ್ ಘರ್ ತಿರಂಗಾ ಅಭಿಯಾನ

Vijayasiri News

ಅಣಜಿಗೆರೆ ಗ್ರಾಮದಲ್ಲಿ ರಕ್ತದಾನ ಶಿಬಿರ

admin

ಪಂಚಾಯ್ತಿ ಆಡಳಿತದ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಕಲುಷಿತ ನೀರು ಪೂರೈಕೆ; ಸಾಂಕ್ರಾಮಿಕ ರೋಗದ ಆತಂಕದಲ್ಲಿ ಗ್ರಾಮಸ್ಥರು…!

Vijayasiri News
error: Content is protected !!