Vijayasiri News
ಜಿಲ್ಲೆಗಳುಬಳ್ಳಾರಿ

ಬಳ್ಳಾರಿ: ಆ. 10ಕ್ಕೆ ಡಾ.ರಾಜಶೇಖರ ನೀರಮಾನ್ವಿ ಅವರ ಬರಹಗಳ ಕುರಿತ ಸಂವಾದ

ವಿಜಯಸಿರಿನ್ಯೂಸ್.ಕಾಂ/ಬಳ್ಳಾರಿ
ಕನ್ನಡ ಸಾಹಿತ್ಯಲೋಕದ ಹೆಸರಾಂತ ಲೇಖಕ, ಪ್ರಮುಖ ಕಥೆಗಾರ ಡಾ. ರಾಜಶೇಖರ ನೀರಮಾನ್ವಿ ಅವರ ಬದುಕು, ಬರಹಗಳ ಕುರಿತ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ ಆ. 10ರಂದು ಬಳ್ಳಾರಿ ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಹಾಗೂ ಲೋಹಿಯಾ ಪ್ರಕಾಶದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮಕ್ಕೆ ಕವಯಿತ್ರಿ ಸವಿತಾ ನಾಗಭೂಷಣ ಅವರು ಚಾಲನೆ ನೀಡುವರು ಎಂದು ಪ್ರಕಟಣೆ ತಿಳಿಸಿದೆ.
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಎಚ್.ಆರ್. ಸುಜಾತಾ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಚಿಂತಕ ಡಾ. ರಾಜೇಂದ್ರ ಚೆನ್ನಿ, ಲೇಖಕರಾದ ಡಾ. ಅಮರೇಶ ನುಗಡೋಣಿ, ಡಾ. ಪಿ. ಭಾರತಿದೇವಿ ಹಾಗೂ ಡಾ. ಚಿದಾನಂದ ಸಾಲಿ ಅವರು, ಡಾ. ನೀರಮಾನ್ವಿ ಅವರ ಕಥೆಗಳ ಕುರಿತು ಮಾತನಾಡುವರು.
ಸರ್ವಮಂಗಳಾ ನೀರಮಾನ್ವಿ ಅವರ ಉಪಸ್ಥಿತಿಯಲ್ಲಿ ನಡೆಯುವ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದ ಬರಹಗಾರರಾದ ಬಸವಪ್ರಭು ಪಾಟೀಲ್ ಬೆಟ್ಟದೂರು, ದಸ್ತಗೀರಸಾಬ್ ದಿನ್ನಿ, ಸುಧಾ ಚಿದಾನಂದಗೌಡ, ಕೆ. ಭುವನೇಶ್, ನೂರುಜಹಾನ್, ದಯಾನಂದ ಕಿನ್ನಾಳ್, ಶಿವಲಿಂಗಪ್ಪ ಹಂದಿಹಾಳ್, ವೀರೇಂದ್ರ ರಾವಿಹಾಳ್, ವೇಣು ಜಾಲಿಬೆಂಚಿ, ಸಿದ್ದರಾಮ ಕಲ್ಮಠ, ಅನಿಲ್ ಗುನ್ನಾಪುರ, ದಿವ್ಯಾ ಕೆ.ಎಸ್., ರವಿ ಹಂಪಿ, ಡಬ್ಲೂ. ಬಸವರಾಜ, ಟಿ.ಎಸ್. ಗೊರವರ, ಮಾರ್ಲಬಂಡಿ ರಂಗಸ್ವಾಮಿ, ರಾಣಿ ಸುಲೇಮಾನ್, ಮಹಾಂತೇಶ್ ನವಲಕಲ್, ಜಾಜಿ ದೇವೇಂದ್ರಪ್ಪ, ಸುಖಲತಾ ಸುನೀಲ್, ಕೆ. ಶರಣಬಸವ ಗುಡದಿನ್ನಿ, ಸಂಪಿಗೆ ನಾಗರಾಜ, ಜ್ಯೋತಿ ಪಟೇಲ್, ವೆಂಕಟೇಶ ಉಪ್ಪಾರ, ಪ್ರವೀಣ್‌ಕುಮಾರ್ ಜಿ, ಪ್ರವರ ಕೊಟ್ಟೂರು, ಮುದಿರಾಜ ಬಾಣದ ಅಜೇಯ್ ಬಣಕಾರ್ ಸೇರಿದಂತೆ ಹಲವು ಬರಹಗಾರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ. ಪತ್ರಕರ್ತ ಚಂದ್ರಕಾಂತ ವಡ್ಡು ಅವರು ಸಮಾರೋಪ ಭಾಷಣ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಿರವಾರ: ಬುದ್ದಿನ್ನಿ ಚಿನ್ನದಗಣಿ ಪ್ರದೇಶಕ್ಕೆ ತಹಶೀಲ್ದಾರ್ ಪವಾರ್ ಭೇಟಿ, ವೀಕ್ಷಣೆ

Vijayasiri News

ರಸಗೊಬ್ಬರದ ಕೃತಕ ಅಭಾವ ಸೃಷ್ಟಿ; ಬಿಜೆಪಿ ಆರೋಪ, ರೈತರ ನೆರವಿಗೆ ಧಾವಿಸದ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ: ಲಿಂಬ್ಯಾನಾಯ್ಕ್

Vijayasiri News

|| ವಲಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭ || ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವ ಹೆಚ್ಚಾಗಲಿ: ವೈ.ಡಿ. ಲಕ್ಷ್ಮೀದೇವಿ ಅಣ್ಣಪ್ಪ

Vijayasiri News

ಹೊರಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಮನವಿ ಒಂಭತ್ತು ತಿಂಗಳಿನಿಂದಲೂ ಕೈಸೇರದ ವೇತನ; ಬೀದಿಗೆ ಬಿದ್ದ ಕಾರ್ಮಿಕರ ಬದುಕು: ನಿಯೋಗದ ಆಕ್ರೋಶ

admin

ಹರಪನಹಳ್ಳಿ: ನಗರದ ಎಚ್‌ಪಿಎಸ್ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ಭವಿಷ್ಯದ ಬದುಕಿನ ಮಾರ್ಗದರ್ಶಕರಾದ ಪೋಷಕರು- ಗುರುಗಳು ನಮಗೆ ಆದರ್ಶರಾಗಬೇಕಿದೆ: ಡಾ. ಶಿವಕುಮಾರ್

Vijayasiri News

ಹೂವಿನಹಡಗಲಿಯಲ್ಲಿ ಸಿಪಿಐ ಪಕ್ಷದ ನಾಲ್ಕನೇ ತಾಲ್ಲೂಕು ಸಮ್ಮೇಳನಕ್ಕೆ ಚಾಲನೆ, ದುಡಿಯುವ ವರ್ಗದ ಹಿತ ಕಾಯುವಲ್ಲಿ ಸರ್ಕಾರಗಳು ವೈಫಲ್ಯವಾಗಿವೆ: ಎಚ್.ಎಂ. ಸಂತೋಷ್ ಆರೋಪ

Vijayasiri News
error: Content is protected !!