Vijayasiri News
ಜಿಲ್ಲೆಗಳುರಾಯಚೂರು

ಸಿರವಾರ: ಬುದ್ದಿನ್ನಿ ಚಿನ್ನದಗಣಿ ಪ್ರದೇಶಕ್ಕೆ ತಹಶೀಲ್ದಾರ್ ಪವಾರ್ ಭೇಟಿ, ವೀಕ್ಷಣೆ

ವಿಜಯಸಿರಿನ್ಯೂಸ್.ಕಾಂ/ಸಿರವಾರ
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ನೂತನ ತಹಶೀಲ್ದಾರ್ ಅಶೋಕ್ ಪವಾರ್ ಅವರು ತಾಲ್ಲೂಕಿನ ಹೀರಾಳಬುದ್ದಿನ್ನಿ ಚಿನ್ನದಗಣಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ತಹಶೀಲ್ದಾರ್ ಅಶೋಕ್ ಪವಾರ್ ಅವರನ್ನು ಭೇಟಿ ಮಾಡಿ, ಬುದ್ದಿನ್ನಿ ಚಿನ್ನದಗಣಿ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ವಾಸಿಸುತ್ತಿರುವ ಕುಟುಂಬದ ಬಹುತೇಕ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ, ಮನೆಗಳು ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ, ಜೀವಭಯದಲ್ಲಿಯೇ ಬದುಕು ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಗಲಿನಲ್ಲಿ ಹೇಗೋ ಕಾಲ ಹಾಕುತ್ತೇವೆ. ಆದರೆ, ರಾತ್ರಿಯ ಕತ್ತಲು ಆವರಿಸುತ್ತಿದ್ದಂತಿಯೇ ಇಡೀ ಮನೆಮಂದಿಗೆಲ್ಲಾ ಆತಂಕವೂ ಸುತ್ತಿಕೊಂಡಿರುತ್ತದೆ. ಯಾವಾಗ ಬೇಕಾದರೂ, ವಾಸಿಸುವ ಮನೆಗಳು ಕುಸಿಯುವ ಭೀತಿ ನಮ್ಮನ್ನು ಆವರಿಸುತ್ತಿದೆ. ಹೀಗಾಗಿ, ಕೂಡಲೇ ಗ್ರಾಮವನ್ನು ಸುಸಜ್ಜಿತ ಪ್ರದೇಶಕ್ಕೆ ಸ್ಥಳಾಂತರಿಸುAತೆ ತಹಶೀಲ್ದಾರ್ ಅಶೋಕ್ ಪವಾರ್ ಅವರಿಗೆ ಅಹವಾಲು ಸಲ್ಲಿಸಿದರು.
ಗಣಿಗಾರಿಕೆಗೆ ಆರಂಭವಾಗಿರುವುದು ನಮ್ಮ ಗ್ರಾಮದಲ್ಲಿಯೇ. ಅದರ ವ್ಯತಿರಿಕ್ತ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಜತೆಗೆ, ತಲೆ ತಲಾಂತರಗಳಿAದಲೂ ನಾವು ವಾಸಿಸುವ ಮನೆ, ಮಠಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ, ಸ್ಥಳೀಯ ಸಂತ್ರಸ್ತರಾದ ನಮ್ಮ ಮಕ್ಕಳಿಗೆ ಉದ್ಯೋಗಾವಕಾಶವನ್ನು ಕಂಪೆನಿಯಲ್ಲಿ ಕಲ್ಪಿಸುವ ಮೂಲಕ ನಿರುದ್ಯೋಗ ನಿವಾರಣೆಗಾಗಿ, ಕಂಪೆನಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆಯೂ ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬಳಿಕ, ಹೀರಾ ಬುದ್ದಿನ್ನಿ ಚಿನ್ನದಗಣಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ತಹಶೀಲ್ದಾರ್ ಅವರು, ಗ್ರಾಮಸ್ಥರ ಮನವಿಗೆ ಸಂಬAಧಿಸಿದAತೆ ಚರ್ಚಿಸಿದರು. ಆದ್ಯತೆಯ ಮೇರೆಗೆ ಕೂಡಲೇ, ಗ್ರಾಮದಲ್ಲಿ ಗ್ರಾಮಸಭೆ ನಡೆಸುವ ಮೂಲಕ ಗ್ರಾಮದ ಸ್ಥಳಾಂತರಕ್ಕೆ ಸಂಬAಧಿಸಿದAತೆ ಪ್ರಕ್ರಿಯೆ ಆರಂಭಿಸಲು ಸೂಚಿಸಿದರು. ಜತೆಗೆ, ಗಣಿಗಾರಿಕೆಗೆ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ಪ್ರಸ್ತಾವನೆಯ ಕಡತಗಳನ್ನು ತುರ್ತಾಗಿ ಸಲ್ಲಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜತೆಗೆ, ಗಣಿಗಾರಿಕೆಗೆ ಸಂಬAಧಿಸಿದAತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕಂಪೆನಿಯ ಸಂಪನ್ಮೂಲ ಅಧಿಕಾರಿ ಸುರೇಶ ಹಟ್ಟಿ, ಗ್ರಾಮದ ಮುಖಂಡರಾದ ಶಿವಪ್ಪ, ಬಸನಗೌಡ, ಮಹೇಶ, ದುರುಗಣ್ಣ ಇತರರು ಇದ್ದರು.

Related posts

ಹೊರಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಮನವಿ ಒಂಭತ್ತು ತಿಂಗಳಿನಿಂದಲೂ ಕೈಸೇರದ ವೇತನ; ಬೀದಿಗೆ ಬಿದ್ದ ಕಾರ್ಮಿಕರ ಬದುಕು: ನಿಯೋಗದ ಆಕ್ರೋಶ

admin

||ವಿಜಯನಗರ: ಸಿಪಿಐ ಪಕ್ಷದ 2ನೇ ಜಿಲ್ಲಾ ಸಮ್ಮೇಳನ|| ಮತೀಯವಾದ ಮತ್ತು ಭಾವನಾತ್ಮಕ ವಿಷಯಗಳೇ ಬಿಜೆಪಿ ಮೂಲಮಂತ್ರ: ಡಾ. ಸಿದ್ಧನಗೌಡ ಪಾಟೀಲ್

Vijayasiri News

ಕೊನ್ನಾಪುರ ಚೌಡೇಶ್ವರಿದೇವಿ ಕಾಪಾಡಮ್ಮ…ಈ ದೇವಸ್ಥಾನಕ್ಕೆ ತಲುಪಲು ರಸ್ತೆಯೋ… ಇಲ್ಲವೇ ಕೆಸರು ಗದ್ದೆಯೋ…?

admin

ಬಳ್ಳಾರಿ: ಆ. 10ಕ್ಕೆ ಡಾ.ರಾಜಶೇಖರ ನೀರಮಾನ್ವಿ ಅವರ ಬರಹಗಳ ಕುರಿತ ಸಂವಾದ

Vijayasiri News

||ಅರಸೀಕೆರೆ: ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ|| ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆಟೋಟ ಅತ್ಯಗತ್ಯ: ಜೆ. ಪದ್ಮಲತಾ

Vijayasiri News

ರಸಗೊಬ್ಬರದ ಕೃತಕ ಅಭಾವ ಸೃಷ್ಟಿ; ಬಿಜೆಪಿ ಆರೋಪ, ರೈತರ ನೆರವಿಗೆ ಧಾವಿಸದ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ: ಲಿಂಬ್ಯಾನಾಯ್ಕ್

Vijayasiri News
error: Content is protected !!