Vijayasiri News
ನಮ್ಮೂರ ಸುದ್ದಿಹರಪನಹಳ್ಳಿ ಸುದ್ದಿ

|| ತೆಲಿಗಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ || ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾನ ಶಿಕ್ಷಣದಿಂದ ಮಾತ್ರ ಮಗುವಿನ ಸಮಗ್ರ ಬೆಳವಣಿಗೆ ಸಾಧ್ಯ


ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಪಠ್ಯದ ಜತೆ ಜತೆಗೆ, ಪಠ್ಯೇತರ ಚಟುವಟಿಕೆಗಳ ಶಿಕ್ಷಣವನ್ನು ನೀಡಿದಾಗ ಮಾತ್ರ, ಮಗುವಿನ ಸಮಗ್ರ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ಟಿ. ಭರತ್ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮನ್ವಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಶಕ್ತ ಶೈಕ್ಷಣಿಕ ಸಾಲಿನ ತೆಲಿಗಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶೈಕ್ಷಣಿಕ ಪರಿಮಿತಿಯಲ್ಲಿ ನಿರ್ದಿಷ್ಟ ಆಟೋಟಗಳನ್ನು ಮಾತ್ರ ಅಳವಡಿಸಿಕೊಳ್ಳಲಾಗಿದೆ. ಆದರೆ, ಅದರಾಚೆ ಇನ್ನೂ ಹಲವು ಆಟಗಳು ನಮ್ಮ ನಡುವೆ ಇವೆ. ಇಲಾಖೆಯ ಮಾರ್ಗಸೂಚಿಯ ಜತೆಗೆ, ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅಂಥಹ ಆಟಗಳಿಗೂ ಅವಕಾಶ ಕಲ್ಪಿಸುವ ಮೂಲಕ ಮಕ್ಕಳ ವಿಕಸನಕ್ಕೆ ಮುಂದಾಗಬೇಕಾದ ಅನಿವಾರ್ಯತೆಯೂ ಇದೆ. ಜತೆಗೆ, ಒಂದು ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಭಾವೈಕ್ಯತೆ ಬೆಸುಗೆಯಂತಿದ್ದ ಆಟಗಳನ್ನು ಉಳಿಸಿ; ಬೆಳೆಸಬೇಕಾದ ಜರೂರಿದೆ ಎಂದು ಭರತ್ ಹೇಳಿದರು.


ಸರ್ಕಾರ ಕ್ರೀಡೆಗಳಿಗೆ ಸಾಕಷ್ಟು ಪ್ರೋತ್ಸಾಹ, ಅನುದಾನ ಹಾಗೂ ಸೌಕರ್ಯಗಳನ್ನು ಒದಗಿಸುತ್ತಿದೆ. ಹೀಗಾಗಿ, ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಮೂಲಕ ಕ್ರೀಡೆಗಳಲ್ಲಿ ಭಾಗಿಯಾಗುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಆಟೋಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವುದರಿಂದ ನಮ್ಮಲ್ಲಿ ನಾಯಕತ್ವದ ಗುಣ, ಕೌಶಲ್ಯತನ ಬೆಳವಣಿಗೆಯಾಗುತ್ತದೆ. ಇಲ್ಲಿ ಸೋಲು, ಗೆಲುವಿಗಿಂತ ಭಾಗಿಯಾಗುವನೇ ಮಹಾಶೂರ. ಇಂದಿನ ಸೋಲು ನಾಳಿನ ಗೆಲುವಿಗೆ ಸೋಪಾನ ಎಂಬುದನ್ನು ನಾವು ಮರೆಯಬಾರದು ಎಂದು ಭರತ್ ಹೇಳಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ. ಷಣ್ಮುಖಪ್ಪ ಅವರು ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಶಿಕ್ಷಣ, ಬದುಕಿಗೆ ಅಗತ್ಯವಾದ ಜ್ಞಾನಾರ್ಜನೆ ನೀಡಿದರೆ, ಆಟದ ಮೈದಾನದಲ್ಲಿ ಪಡೆಯುವ ಕ್ರೀಡಾಶಿಕ್ಷಣ ಜೀವನದ ಕೌಶಲ್ಯವನ್ನು ನಮಗೆ ಧಾರೆ ಎರೆಯುತ್ತದೆ. ಮಕ್ಕಳ ಸರ್ವತೋಮುಖ ವಿಕಸನಕ್ಕೆ ದೈಹಿಕಶಿಕ್ಷಣ ಅತ್ಯಗತ್ಯ ಎಂದರು.
ಆಟೋಟಗಳಿಗೆ ಯಾವುದೇ ಜಾತಿ, ಧರ್ಮಗಳ ಕಟ್ಟುಪಾಡುಗಳು ಇರುವುದಿಲ್ಲ. ಇಲ್ಲಿ ಎಲ್ಲರೂ ಸರಿಸಮಾನರು. ಕೌಶಲ್ಯ ಹಾಗೂ ಆಟದ ಪಟ್ಟುಗಳನ್ನು ಬಲ್ಲ ಪ್ರವೀಣರು ವಿಜಯದಮಾಲೆಯನ್ನು ಧರಿಸಲು ಸಾಧ್ಯವಾಗುತ್ತದೆ. ಆಟದ ಮೈದಾನ ಎಂಬುದು ಏಕತೆಯನ್ನು ಸಾರುವ ಅಂಕಣ ಎಂದು ಷಣ್ಮುಖಪ್ಪ ಅವರು ವಿಶ್ಲೇಷಿಸಿದರು.
ಇದಕ್ಕೂ ಮುನ್ನ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಕ್ರೀಡಾಜ್ಯೋತಿಯನ್ನು ಪಿ.ಟಿ. ಭರತ್ ಬೆಳಗಿಸಿದರು, ಜತೆಗೆ, ಧ್ವಜಾರೋಹಣವನ್ನು ನೆರೆವೇರಿಸಿದರು.
ಲಕ್ಷಿö್ಮÃಪುರ ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕಿ ಪ್ರತಿಭಾ ಸಿ.ಎಂ. ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ವಿವಿಧ ಶಾಲೆಗಳ ಕ್ರೀಡಾಪಟುಗಳು ನಡೆಸಿದ ಪಥಸಂಚಲನವನ್ನು ವಲಯ ಸಂಚಾಲಕ ಲಕ್ಯಾನಾಯ್ಕ್ ನಡೆಸಿಕೊಟ್ಟರು.
ಕ್ರೀಡಾಕೂಟದಲ್ಲಿ ವಲಯದ ಆತಿಥೇಯ ಲಕ್ಷಿö್ಮÃಪುರ ಸೇರಿದಂತೆ ಸಿಂಗ್ರಿಹಳ್ಳಿ, ತೆಲಿಗಿ, ಶಿವಪುರ, ದುಗ್ಗಾವತಿ, ಗುಂಡಗತ್ತಿ, ತಲುವಾಗಲು, ಹಿರೇಮೇಗಳಗೆರೆ, ಚಿಕ್ಕಮೇಗಳಗೆರೆ ಹಾಗೂ ಮಾಚಿಹಳ್ಳಿ ತಾಂಡದ ಸೇರಿದಂತೆ ೧೦ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಅರಸೀಕೆರೆ ಠಾಣೆಯ ಪಿಎಸ್‌ಐ ವಿಜಯಕೃಷ್ಣ, ಎಎಸ್‌ಐ ಪೀಕ್ಯಾನಾಯ್ಕ್, ಗುರುರಾಜ್, ಶಿವಪ್ರಕಾಶ್, ವಿಷ್ಣು, ಮುಖ್ಯೋಪಾಧ್ಯಾಯ ರವಿ. ಕೆ. ಉಪನ್ಯಾಸಕ ರಾಮಚಂದ್ರಪ್ಪ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಜ್, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಭಾಗಿಯಾಗಿದ್ದರು.

Related posts

ಹರಪನಹಳ್ಳಿಯಲ್ಲಿ ಬಿಜೆಪಿಯ ಹರ್ ಘರ್ ತಿರಂಗಾ ಅಭಿಯಾನ

Vijayasiri News

ಹರಪನಹಳ್ಳಿ: ವಾಲ್ಮೀಕಿನಾಯಕ ಸಮಾಜದ ನೌಕರರ ಸಂಘದ ಆಶ್ರಯದಲ್ಲಿ ಪ್ರತಿಭಾಪುರಸ್ಕಾರ, ಸಾಂದಾರ್ಭಿಕ ಸನ್ನೀವೇಶದ ಪ್ರಭಾವಳಿಯಲ್ಲಿ ಮಾನವೀಯಮೌಲ್ಯಗಳ ಉಪೇಕ್ಷೆ ಸಲ್ಲದು: ಡಾ.ಪ್ರಸನ್ನಾನಂದ ಸ್ವಾಮೀಜಿ

Vijayasiri News

ಹರಪನಹಳ್ಳಿ: ಆ. 21ರಂದು ನಗರ ಮತ್ತು ವಿವಿಧೆಡೆ ವಿದ್ಯುತ್ ನಿಲುಗಡೆ

Vijayasiri News

ಹರಪನಹಳ್ಳಿ: ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ, ಅಪರಾಧಮುಕ್ತ ಸಮಾಜ ಕಟ್ಟುವಿಕೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಎಸ್‌ಪಿ ಜಾಹ್ನವಿ

Vijayasiri News

ಹರಪನಹಳ್ಳಿ: ರೈತರ ಪಾಲಿಗೆ ಶಾಪವಾದ ನಿರಂತರ ಮಳೆ, ‘ಸಿಡಿ’ ರೋಗಬಾಧೆಗೆ ತುತ್ತಾದ ಬೆಳೆ, ವೈಜ್ಞಾನಿಕ ಬೆಳೆ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಎಐಕೆಎಸ್ ಪ್ರತಿಭಟನೆ

Vijayasiri News

|| ಹರಪನಹಳ್ಳಿ: ಸಿಪಿಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ || ಉಚ್ಚಂಗಿದುರ್ಗದ ಆಶ್ರಯ ಪ್ಲಾಟ್ ನಿವಾಸಿಗಳಿಗೆ ಖಾಸಗೀ ವ್ಯಕ್ತಿಯ ಕಿರುಕುಳ ಆರೋಪ

Vijayasiri News
error: Content is protected !!