Vijayasiri News
ಹರಪನಹಳ್ಳಿ ಸುದ್ದಿ

ಹರಪನಹಳ್ಳಿಯಲ್ಲಿ ಬಿಜೆಪಿಯ ಹರ್ ಘರ್ ತಿರಂಗಾ ಅಭಿಯಾನ

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ

ದೇಶದ 79ನೇ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ಹಮ್ಮಿಕೊಂಡಿದ್ದ ‘ಹರ್ ಘರ್ ತಿರಂಗಾ ಅಭಿಯಾನದ ಬೈಕ್ ರ‍್ಯಾಲಿ’ ಜನಾಕರ್ಷಣೆಯಾಗಿ ನಗರದಲ್ಲಿ ಯಶಸ್ವಿಯಾಗಿ ನಡೆಯಿತು.

ಗುರುವಾರ ಬೆಳಿಗ್ಗೆ ನಗರದ ಹಿರೆಕೆರೆ ವೃತ್ತದಲ್ಲಿ ಸಮಾಗೊಂಡ ಕಾರ್ಯಕರ್ತರು ಅಭಿಯಾನಕ್ಕೆ ಸಜ್ಜಾದರು. ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಕೈಯಲ್ಲಿ ದೇಶದ ಹೆಮ್ಮೆಯ ರಾಷ್ಟçಧ್ವಜವನ್ನು ಹಿಡಿದು, ದೇಶಾಭಿಮಾನದ ಸಂದೇಶ ಸಾರುವ ಘೋಷಣೆಗಳನ್ನು ಮೊಳಗಿಸುವ ಮೂಲಕ  ನಗರದಲ್ಲಿ ಹಾದು ಹೋಗಿರುವ ಮರಿಯಮ್ಮನಹಳ್ಳಿ- ಶಿವಮೊಗ್ಗ ರಾಜ್ಯಹೆದ್ದಾರಿ ಮಾರ್ಗವಾಗಿ ಸಂಚರಿಸಿ, ಪ್ರವಾಸಿಮಂದಿರ ವೃತ್ತಕ್ಕೆ ಸಮಾವೇಶಗೊಂಡರು.

ದೇಶದ ಸ್ವಾತಂತ್ರ ಸಂಗ್ರಾಮದ ಐತಿಹಾಸಿಕ ಸ್ಮರಣೆಯ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಮನೆಯ ಮೇಲೆ ರಾಷ್ಟçದ ಹೆಮ್ಮೆಯ ರಾಷ್ಟçಧ್ವಜ ಹಾರಿಸುವಂತೆ ಪ್ರೇರೇಪಿಸುವ ಹಾಗೂ ರಾಷ್ಟçಪ್ರೇಮ, ದೇಶಭಕ್ತಿಯ ಸಂದೇಶ ಸಾರುವ ಉದ್ದೇಶವನ್ನು ಅಭಿಯಾನ ಹೊಂದಿದೆ. ಜತೆಗೆ, ಸ್ವಾತಂತ್ರö್ಯ ದಿನಾಚರಣೆಯಲ್ಲಿ ದೇಶದ ಪ್ರತಿ ಪ್ರಜೆಯೂ ಸಹಭಾಗಿತ್ವ ಪಡೆಯುವ ಮೂಲಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಜತೆಗೆ, ಯುವಜನ ಸಮುದಾಯದಲ್ಲಿ ಸ್ವಾತಂತ್ರö್ಯ ಸಂಗ್ರಾಮದ ಐತಿಹಾಸಿಕ ಘಟನೆಗಳನ್ನು ಸ್ಮರಣೀಯವಾಗಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಮುಖಂಡರಾದ ಆರುಂಡಿ ನಾಗರಾಜ, ಲೋಕೇಶ್, ಶಿರಗಾನಹಳ್ಳಿ ವಿಶ್ವನಾಥ, ಕೆ. ಮಲ್ಲೇಶ್, ಕಣವಿಹಳ್ಳಿ ಮಾರುತಿ, ಸಿಂಗ್ರಿಹಳ್ಳಿ ನಾಗರಾಜ, ಪುರಸಭಾ ಸದಸ್ಯ ಗೌಳಿ ವಿನಯ್, ಜಾವೀದ್, ಭೀಮೇಶ್, ಮಹೇಶ್, ತಿಮ್ಮಪ್ಪ, ಬಸಣ್ಣ, ವಿಜಯಲಕ್ಷಿö್ಮÃ, ಯಂಕಮ್ಮ, ಜಾನಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಹರ್ ಘರ್ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Related posts

ಕೋಟ್ಯಂತರ ಮೌಲ್ಯದ ಆಸ್ತಿಯ ಕಾನೂನುಬಾಹಿರ ಮಂಜೂರಾತಿ.!, ಹರಪನಹಳ್ಳಿ: ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈಗ ವಾಣಿಜ್ಯ ವಹಿವಾಟಿನ ಘಾಟು…!!!

Vijayasiri News

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

Vijayasiri News

ಹರಪನಹಳ್ಳಿಯಲ್ಲಿ ಜೈನಧರ್ಮದ ಸಂಘದ ನೇತೃತ್ವದಲ್ಲಿ ಪ್ರತಿಭಟನೆ, ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹ

Vijayasiri News

ವಿಜಯನಗರ: ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ವಕೀಲ ಬಸವರಾಜ ಸಂಗಪ್ಪನವರ್ ನೇಮಕ

Vijayasiri News

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿದ ದೂರುದಾರ ಹರಪನಹಳ್ಳಿ ತಾಲ್ಲೂಕಿನವನಾ…? ಈ ಸುದ್ದಿ ಹರಿಬಿಟ್ಟು ಪ್ರಕರಣ ಮೈಮೇಲೆಳೆದುಕೊಂಡ ಬಿಜೆಪಿ ಮುಖಂಡ…!

Vijayasiri News

|| ಹರಪನಹಳ್ಳಿ: ಸಿಪಿಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ || ಉಚ್ಚಂಗಿದುರ್ಗದ ಆಶ್ರಯ ಪ್ಲಾಟ್ ನಿವಾಸಿಗಳಿಗೆ ಖಾಸಗೀ ವ್ಯಕ್ತಿಯ ಕಿರುಕುಳ ಆರೋಪ

Vijayasiri News
error: Content is protected !!