Vijayasiri News
ಜಿಲ್ಲೆಗಳುತಾಲ್ಲೂಕು ಸುದ್ದಿನಮ್ಮೂರ ಸುದ್ದಿ

ಕೊನ್ನಾಪುರ ಚೌಡೇಶ್ವರಿದೇವಿ ಕಾಪಾಡಮ್ಮ…ಈ ದೇವಸ್ಥಾನಕ್ಕೆ ತಲುಪಲು ರಸ್ತೆಯೋ… ಇಲ್ಲವೇ ಕೆಸರು ಗದ್ದೆಯೋ…?

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಅದು ಕೊನ್ನಾಪುರ ಚೌಡೇಶ್ವರಿದೇವಿಯ ಸುಕ್ಷೇತ್ರ. ಆ ದೇವಿಯ ಸನ್ನಿಧಿಗೆ ಸುತ್ತಲಿನ ನಾಲ್ಕಾರು ಹಳ್ಳಿಗಳ ಭಕ್ತರು ವಾರದಲ್ಲಿ ಎರಡು ದಿನ ಕಾಯಂ ನಡೆದುಕೊಳ್ಳುತ್ತಾರೆ. ಇನ್ನೂ ಹಬ್ಬ- ಹರಿದಿನ, ಶ್ರಾವಣ ಮಾಸ ಸೇರಿದಂತೆ ಇತರೆ ವಿಶೇಷ ದಿನಗಳಲ್ಲಂತೂ ಆ ದೇವಿ ದರ್ಶನಕ್ಕಾಗಿ ಜನ ತಂಡೋಪತAಡವಾಗಿ ಆಗಮಿಸುತ್ತಾರೆ. ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ, ಹರಕೆ ತೀರಿಸುತ್ತಾರೆ. ಇದು ಅನಾದಿ ಕಾಲದಿಂದಲೂ ಆ ಭಾಗದ ಜನಮಾನಸದಲ್ಲಿ ನಡೆದುಬಂದಿರುವ ಧಾರ್ಮಿಕ ಪರಂಪರೆ.

ಆದರೆ, ದುರ್ದೈವದ ಸಂಗತಿ ಎಂದರೆ, ದೇವಿಯ ದೇವಸ್ಥಾನ ತಲುಪಲು ಅಲ್ಲಿ ಸರಿಯಾದ ಹಾಗೂ ಸಮರ್ಪಕವಾದ ಸರ್ವಋತು ರಸೆಯ್ತ ಕೊರತೆಯಿಂದ, ಸಾಕಷ್ಟು ಅವಘಡಗಳು, ಅಪಘಾತಗಳು ಸಂಭವಿಸುತ್ತಲೇ ಇವೆ. ಮಳೆಗಾಲದಲ್ಲಿ ಬೈಕ್‌ಸವಾರರು, ಕೆಸರುಮಯವಾದ ಗದ್ದೆಯಂತ ರಸ್ತೆಗಳಲ್ಲಿ ಆಯ ತಪ್ಪಿ ಬಿದ್ದ ಪರಿಣಾಮ ಸಾಕಷ್ಟು ತೊಂದರೆ, ಅನುಭವಿಸುತ್ತಿದ್ದಾರೆ. ಇನ್ನೂ ಇದೇ ರಸ್ತೆಮಾರ್ಗವನ್ನು ಅವಲಂಬಿಸಿರುವ ರೈತರು ತಮ್ಮ ಜಮೀನುಗಳಿಗೆ ಸಂಚರಿಸಲು ಅನುಭವಿಸುತ್ತಿರುವ ಗೋಳನ್ನು ಸ್ವತಃ ಚೌಡೇಶ್ವರಿದೇವಿಯೇ ಮಮ್ಮಲ ಮರಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಅದು ಎಲ್ಲಿಯ ನರಕಸದೃಶ್ಯದ ಸುದ್ದಿ ಅಂತೀರಾ…? ಹಾಗಾದಾರೆ, ಈ ಸ್ಟೋರಿ ನೋಡಿ…

ಹೌದು, ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮಕ್ಕೆ ಸಂಪರ್ಕ ಬೆಸೆಯುವ ಮುಖ್ಯರಸ್ತೆಯಲ್ಲಿನ ಕೆರೆಗುಡಿಹಳ್ಳಿ ಗ್ರಾಮದ ಸಮೀಪದಲ್ಲಿರುವ ಖಾನಾಪುರ ಚೌಡೇಶ್ವರಿದೇವಿ ಇಲ್ಲಿನ ನಾಲ್ಕಾರು ಹಳ್ಳಿಗರ ಪಾಲಿಗೆ ಸಾಕ್ಷಾತ್ ದೈವಸ್ವರೂಪಿ. ಹೀಗಾಗಿಯೇ, ಈ ಹಳ್ಳಿಗರು, ವಾರದ ಮಂಗಳವಾರ ಮತ್ತು ಶುಕ್ರವಾರದ ಜತೆಗೆ, ಹಬ್ಬ, ಹರಿದಿನ ಹಾಗೂ ಶ್ರಾವಣಮಾಸದ ಸಂದರ್ಭದಲ್ಲಿ ದೇವಿ ದರ್ಶನಕ್ಕಾಗಿ ತಂಡೋಪತAಡವಾಗಿ ಆಗಮಿಸುತ್ತಾರೆ. ವಿಶೇಷ ಪೂಜೆ, ಪುನಸ್ಕಾರ, ಕಟ್ಟಿಕೊಂಡ ಹರಕೆ ತೀರಿಸುತ್ತ, ತಮ್ಮ ಆರಾಧ್ಯದೈವದ ಕೃಪೆಗೆ ಪಾತ್ರರಾಗುತ್ತಾರೆ. ಇಂಥಹ ಪರಂಪರೆ ಈ ಭಾಗದ ಹಳ್ಳಿಗರಲ್ಲಿ ತಲೆಮಾರುಗಳಿಂದಲೂ ನಡೆದುಬಂದಿರುವ ಧಾರ್ಮಿಕ ಪರಂಪರೆ. ಆದರೆ, ದೇವಿಯ ದೇವಸ್ಥಾನ ತಲುಪುವುದೆಂದರೆ, ಇಲ್ಲಿನ ಭಕ್ತರು ಅನುಭವಿಸುವ ಯಾತನೆಯನ್ನ ಸಾಕ್ಷಾತ್ ಚೌಡೇಶ್ವರಿದೇವಿಯೇ ಒಳಗೊಳಗೆ ಮಮ್ಮಲ ಮರುಗುತ್ತಿದ್ದಾಳೆ.

ಈ ದೇಗುಲ ತಲುಪಲು ಪಕ್ಕಾ ರಸ್ತೆಯನ್ನು ನಿರ್ಮಿಸುವ ಮೂಲಕ ಭಕ್ತರ ಭಾವನೆಗಳಿಗೆ ಸ್ಪಂಧಿಸಬೇಕೆAಬ ಕನಿಷ್ಠ ಆಲೋಚನೆಗಳು ಇಲ್ಲಿ ಆಳ್ವಿಕೆ ನಡೆಸಿದ ಯಾವ ಶಾಸಕರು ಮುಂದಾಗದಿರುವುದು ದುರ್ದೈವದ ಸಂಗತಿ. ಶ್ರಾವಣದ ಸಂದರ್ಭದಲ್ಲAತೂ ಅತ್ಯಧಿಕವಾಗಿ ಸುರಿಯುವ ಮಳೆಯಿಂದಾಗಿ, ಇಡೀ ರಸ್ತೆ ಕೆಸರುಮಯವಾಗಿ ಥೇಟ್ ಭತ್ತದ ಗದ್ದೆಯಂತಾಗಿ ಮಾರ್ಪಾಡಾಗುತ್ತದೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ, ರಸ್ತೆಯಂತೂ ಈಗ ಕೆಸರುಮಯವಾಗಿ ಮಾರ್ಪಟ್ಟಿದೆ. ಬೈಕ್‌ಗಳಲ್ಲಿ ಇರಲಿ, ಕಾಲ್ನಡಿಗೆಯಲ್ಲಿಯೂ ಸುಗಮವಾಗಿ ಸಂಚರಿಸಲು ಅಸಾಧ್ಯ. ರಸ್ತೆಯುದ್ದಕ್ಕೂ ಮಳೆ ನೀರು ನಿಲ್ಲುವ ಪರಿಣಾಮ, ಕಾಲ್ನಡಿಗೆಯಲ್ಲಿ ಸಂಚರಿಸುವ ಭಕ್ತರು, ಹೆಜ್ಜೆ ಇಡುವ ಜಾಗದಿಂದ ಎರಡ್ಮೂರು ಅಡಿ ದೂರದವರೆಗೂ ಕಾಲುಜಾರುತ್ತವೆ. ಹೀಗಾಗಿ, ಚೌಡೇಶ್ವರಿದೇವಿಯ ದರ್ಶನಕ್ಕೂ ಮುನ್ನ, ಕೆಸರಿನ ಅಭಿಷೇಕ ಮಾಡಿಕೊಂಡೇ, ದೇವಿಯ ದರ್ಶನ ಪಡೆಯಬೇಕಾದ ದೌಭಾಗ್ಯ ದೇವಿಯ ಭಕ್ತರದ್ದು ಎಂಬAತಾಗಿದೆ. ಇನ್ನೂ ದ್ವಿಚಕ್ರ ವಾಹನಗಳ ಸವಾರರ ಗೋಳು, ಇದಕ್ಕಿಂತ ಭಿನ್ನವಾಗಿಲ್ಲ. ಕೆಸರಿನ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ, ಎಷ್ಟೋ ಭಕ್ತರು ಬಿದ್ದು ಸಂಭವಿಸಿರುವ ಅವಘಢಗಳಿಗೆ ಲೆಕ್ಕವಿಲ್ಲ ಎಂಬುದು ಈ ಭಾಗದ ಭಕ್ತರ ಅಭಿಪ್ರಾಯ.
ಇದು, ಚೌಡೇಶ್ವರಿದೇವಿಯ ಭಕ್ತರ ನರಕಯಾತನೆಯಾದರೆ, ಇನ್ನೂ ಇದೇ ರಸ್ತೆಯ ಮಾರ್ಗವನ್ನು ಅವಲಂಬಿಸಿ, ತಮ್ಮ ಜಮೀನುಗಳಿಗೆ ಸಂಚರಿಸುವ ರೈತರ ಗೋಳು ಇದಕ್ಕಿಂತ ಭಿನ್ನವಾಗಿಲ್ಲ. ಎತ್ತಿನಗಾಡಿಗಳಲ್ಲಿ ತೆರಳುವುದು ಒಂದು ರೀತಿ ಸರ್ಕಸ್ ಎಂಬAತಾದರೆ, ಇನ್ನೂ ಕಾಲ್ನಡಿಗೆಯಲ್ಲಿ ಇಲ್ಲವೇ, ಕೃಷಿ ಕೂಲಿಕಾರ್ಮಿಕರು ತೆರಳಲು ಹಾಗೂ ಗೊಬ್ಬರ, ಬೆಳೆದ ಫಸಲುಗಳನ್ನು ಸಾಗಿಸಲು ಇಲ್ಲಿನ ರೈತರು ಅನುಭವಿಸುತ್ತಿರುವ ಗೋಳು ಹೇಳತೀರದ್ದು. ಸ್ವಲ್ಪ ಯಾಮಾರಿದರೆ, ಸಾಕು, ಸಂಭವಿಸುವ ಅವಘಡಗಳಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ, ಜೀವ ಅಂಗೈಯಲ್ಲಿಡಿದುಕೊAಡೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಇಲ್ಲಿನ ರೈತರು.

ರಸ್ತೆಯ ಅಭಿವೃದ್ಧಿ ನೆಪದಲ್ಲಿ ಗ್ರಾಮ ಪಂಚಾಯ್ತಿಯವರು, ಒಮ್ಮೆ ನಾಲ್ಕಾರು ಟ್ರಿಪ್ ಮಣ್ಣು ಏರಿಸಿ, ಹರಡಿದರು. ಆದರೆ, ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬAತೆ ಹಾಕಿದ ಮಣ್ಣು, ಯಾವುದಕ್ಕೂ ಸಾಲಲಿಲ್ಲ. ಜತೆಗೆ, ಸುರಿಯುತ್ತಿರುವ ಮಳೆ ನೀರಿನಲ್ಲಿ ಹಾಕಿದ ಮಣ್ಣು ಹರಿದುಹೋಗಿದೆ. ಹೀಗಾಗಿ, ರಸ್ತೆಯ ಸ್ಥಿತಿ ಮಾತ್ರ, ಬದಲಾಗಲಿಲ್ಲ ಎಂಬುದು ರೈತರ ಆರೋಪ.

ನಮ್ಮ ಹೊಲ- ನಮ್ಮ ರಸ್ತೆ, ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ರಸ್ತೆ ಅಭಿವೃದ್ಧಿಗಾಗಿ ಇರುವ ಯೋಜನೆಗಳು ಇಲ್ಲಿ ಮಕಾಡೆ ಮಲಗಿವೆ. ಇನ್ನೂ ಈ ಹೋಬಳಿ ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಒಳಪಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಶಾಸಕರು ಈ ಭಾಗವನ್ನು ನೆನಪಿಸಿಕೊಳ್ಳುವುದು ಆಗೊಮ್ಮೆ- ಈಗೊಮ್ಮೆ ಎಂಬAತಾಗಿದೆ.

ನಾಲ್ಕಾರು ಹಳ್ಳಿಗರ ಸಾಕ್ಷಾತ್ ದೈವಸ್ವರೂಪಿಣಿಯಾಗಿರುವ ಚೌಡೇಶ್ವರಿದೇವಿ ದೇಗುಲ ಹಾಗೂ ಸಹಸ್ರಾರು ರೈತಾಪಿ ಸಮೂಹದ ಜಮೀನುಗಳಿಗೆ ಸಂಪರ್ಕ ಬೆಸೆಯುವ ಈ ರಸ್ತೆಯನ್ನು ಕೂಡಲೇ ಸಂಬAಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಭಿವೃದ್ಧಿ ಪಡಿಸುವ ಮೂಲಕ ಸರ್ವಋತು ರಸ್ತೆಯನ್ನಾಗಿ ನಿರ್ಮಾಣ ಮಾಡುವ ಮೂಲಕ ಸಂಭವನೀಯ ಅವಘಡಗಳನ್ನು ತಪ್ಪಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯ.
ಇಲ್ಲದೇ ಹೋದಲ್ಲಿ, ಕೊನ್ನಾಪುರದ ಚೌಡೇಶ್ವರಿದೇವಿ ತಮ್ಮನ್ನು ಕ್ಷಮಿಸಬಹುದು. ಆದರೆ, ಆಕೆಯ ಭಕ್ತರ ಹಾಗೂ ರೈತಾಪಿ ಸಮೂಹದ ಆಕ್ರೋಶದ ಹಿಡಿಶಾಪ ನಿಮ್ಮ ಬೆನ್ನಹಿಂದೆ ಬೀಳುವುದನ್ನು ತಪ್ಪಿಸಲು ಭಗವಂತನಿAದಲೂ ಸಾಧ್ಯವಿಲ್ಲ ಎಂಬ ಅರಿವು ಇದ್ದರೇ ಸಾಕು.

Related posts

ಬಳ್ಳಾರಿ: ಆ. 10ಕ್ಕೆ ಡಾ.ರಾಜಶೇಖರ ನೀರಮಾನ್ವಿ ಅವರ ಬರಹಗಳ ಕುರಿತ ಸಂವಾದ

Vijayasiri News

|| ತೆಲಿಗಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ || ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾನ ಶಿಕ್ಷಣದಿಂದ ಮಾತ್ರ ಮಗುವಿನ ಸಮಗ್ರ ಬೆಳವಣಿಗೆ ಸಾಧ್ಯ

Vijayasiri News

ಹರಪನಹಳ್ಳಿ: ನಾಳೆ ಬೆಸ್ಕಾಂ ಗ್ರಾಹಕರ ಸಂವಾದ ಸಭೆ

Vijayasiri News

ಹೂವಿನಹಡಗಲಿಯಲ್ಲಿ ಸಿಪಿಐ ಪಕ್ಷದ ನಾಲ್ಕನೇ ತಾಲ್ಲೂಕು ಸಮ್ಮೇಳನಕ್ಕೆ ಚಾಲನೆ, ದುಡಿಯುವ ವರ್ಗದ ಹಿತ ಕಾಯುವಲ್ಲಿ ಸರ್ಕಾರಗಳು ವೈಫಲ್ಯವಾಗಿವೆ: ಎಚ್.ಎಂ. ಸಂತೋಷ್ ಆರೋಪ

Vijayasiri News

ವಿಜಯನಗರ: ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ವಕೀಲ ಬಸವರಾಜ ಸಂಗಪ್ಪನವರ್ ನೇಮಕ

Vijayasiri News

|| ಕೋಡಿಬಿದ್ದ ಕಲ್ಲಹಳ್ಳಿ ಕೆರೆ|| ಹರಪನಹಳ್ಳಿ: ಧಾರಾಕಾರ ಮಳೆ, ಮೈದುಂಬಿ ಹರಿಯುತ್ತಿವೆ ಕೆರೆ-ಕಟ್ಟೆಗಳು

Vijayasiri News
error: Content is protected !!