Vijayasiri News
ವಿಜಯನಗರಹೂವಿನಹಡಗಲಿ

ಹೂವಿನಹಡಗಲಿ: ಕುರಿಹಟ್ಟಿಯ ಮೇಲೆ ಬೀದಿ ನಾಯಿಗಳ ದಾಳಿ; 23 ಕುರಿಮರಿ ಸಾವು

ವಿಜಯಸಿರಿನ್ಯೂಸ್.ಕಾಂ/ ವಿಜಯನಗರ(ಹೊಸಪೇಟೆ)

ಕುರಿಹಟ್ಟಿಯ ಹಟ್ಟಿಯ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು 23ಕುರಿಮರಿಗಳನ್ನು ಸಾಯಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ ಗ್ರಾಮದ ನಿಜಲಿಂಗಪ್ಪ ನಗರದ ಸಮೀಪದ ಭಾನುವಾರ ನಡೆದಿದೆ.
ಗ್ರಾಮದ ಕುರಿಗಾಹಿ ಹುಲುಗಪ್ಪ ಎಂಬುವವರಿಗೆ ಸೇರಿದ ಕುರಿಹಟ್ಟಿಯಲ್ಲಿ ಮರಿಗಳನ್ನು ಕೂಡಿಹಾಕಲಾಗಿತ್ತು. ಆದರೆ, ಬೀದಿನಾಯಿಗಳ ಹಿಂಡು ಹಟ್ಟಿಯ ಮೇಲೆ ದಾಳಿ ನಡೆಸುವ ಮೂಲಕ ಹಟ್ಟಿಯಲ್ಲಿದ್ದ ಮರಿಗಳನ್ನು ಕಚ್ಚಿಹಾಕಿವೆ. ಬೀದಿ ನಾಯಿಗಳ ದಾಳಿಯಿಂದಾಗಿ, ಹುಲುಗಪ್ಪ ಅವರಿಗೆ ಸೇರಿದ 20ಕುರಿಮರಿ, ಕಂದಗಲ್ ಶಿವರಾಜ ಅವರಿಗೆ ಸೇರಿದ 2ಮರಿ ಮತ್ತು ದೊಡ್ಡಬಸಪ್ಪ ಎಂಬುವವರಿಗೆ ಸೇರಿದ 1ಕುರಿಮರಿ ಸಾವನ್ನಪ್ಪಿವೆ.
ಮರಿಕುರಿಗಳನ್ನು ಹಟ್ಟಿಯಲ್ಲಿ ಕೂಡಿಹಾಕಿ, ಎಂದಿನಂತೆ ಕುರಿಗಳನ್ನು ಮೇಯಿಸಲು ಅಡವಿಗೆ ಹೋದ, ಸಂದರ್ಭದಲ್ಲಿ ನಾಯಿಗಳ ಹಿಂಡು ಹಟ್ಟಿಯ ಮೇಲೆ ದಾಳಿ ನಡೆಸಿವೆ. ನಾಯಿಗಳ ಹಿಂಡು ದಾಳಿ ನಡೆಸಿದ ಹಿನ್ನೆಯಲ್ಲಿ ಕುರಿಗಾಹಿಗಳ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಸಿಲುಕಿದ್ದಾರೆ.
ಕುರಿ ಹಟ್ಟಿಯ ಮೇಲೆ ಬೀದಿ ನಾಯಿಗಳು ಆಗಾಗ್ಗೆ ದಾಳಿ ನಡೆಸುತ್ತಿರುವ ಪರಿಣಾಮ, ಕುರಿ ಹಾಗೂ ಮರಿಗಳು ಹಾನಿಗೆ ಒಳಗಾಗುತ್ತಿವೆ. ಹೀಗಾಗಿ, ಕುರಿಗಾಹಿಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆಗಳು ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವ ಮೂಲಕ, ಸಂಕಷ್ಟಕ್ಕೆ ಸಿಲುಕಿದ ಕುರಿಗಾಹಿಗಳ ನೆರವಿಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.

Related posts

ವಿಜಯನಗರ ಜಿಲ್ಲೆಯಲ್ಲೊಂದು ಮಾದರಿ ಸಮಾರಂಭ: ಧ್ವಜಾರೋಹಣ ನೆರವೇರಿಸಿದ ಅಲೆಮಾರಿ ಸಮಾಜದ 98ರ ವಯೋವೃದ್ಧೆ ಮರಿಯಮ್ಮ

Vijayasiri News

ಹೂವಿನಹಡಗಲಿ: ಪೊಲೀಸರ ಕೈಯಲ್ಲಿ ಸಲಕೆ, ಬುಟ್ಟಿ…!, ನಾವು ಕಾನೂನು ರಕ್ಷಣೆಗೂ ಸದಾ ಬದ್ಧ, ಸಮಾಜಸೇವೆಗೂ ಸಿದ್ಧ…!!

Vijayasiri News

ಹರಪನಹಳ್ಳಿ: ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ, ಅಪರಾಧಮುಕ್ತ ಸಮಾಜ ಕಟ್ಟುವಿಕೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಎಸ್‌ಪಿ ಜಾಹ್ನವಿ

Vijayasiri News

||ವಿಜಯನಗರ: ಸಿಪಿಐ ಪಕ್ಷದ 2ನೇ ಜಿಲ್ಲಾ ಸಮ್ಮೇಳನ|| ಮತೀಯವಾದ ಮತ್ತು ಭಾವನಾತ್ಮಕ ವಿಷಯಗಳೇ ಬಿಜೆಪಿ ಮೂಲಮಂತ್ರ: ಡಾ. ಸಿದ್ಧನಗೌಡ ಪಾಟೀಲ್

Vijayasiri News

ಹರಪನಹಳ್ಳಿ: ಒಳಮೀಸಲಾತಿ ಹಂಚಿಕೆಯಲ್ಲಿ ಘೋರ ಅನ್ಯಾಯ, ಬಲಾಢ್ಯ ಸಮುದಾಯಗಳ ಪಟ್ಟಿಯಲ್ಲಿ ಅಲೆಮಾರಿಗಳ ಸೇರ್ಪಡೆ, ಜೀವಿಸುವ ಹಕ್ಕನ್ನೂ ಕಸಿದ ಸರ್ಕಾರ: ಪ್ರತಿಭಟನಾಕಾರರ ಆಕ್ರೋಶ

Vijayasiri News

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಹೊಲಿಗೆ ತರಬೇತಿ ಸಮಾರೋಪ|| ಕುಟುಂಬದ ಆರ್ಥಿಕ ಸದೃಢತೆಗೆ ಸ್ವ- ಉದ್ಯೋಗ ಸಹಕಾರಿ: ಸತೀಶ್‍ಶೆಟ್ಟಿ

Vijayasiri News
error: Content is protected !!