Vijayasiri News
ಬ್ಯಾಡಗಿಹಾವೇರಿ

ಬ್ಯಾಡಗಿ:ಇಷ್ಟಾರ್ಥಸಿದ್ಧಿಗಾಗಿ ಮಠ- ಮಂದಿರಗಳಿಗೆ ನಡೆದುಕೊಳ್ಳುವ ಭಕ್ತರೇ ಅಧಿಕ: ರೇವಣಸಿದ್ದೇಶ್ವರ ಸ್ವಾಮೀಜಿ

ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಒಂದು ಉದ್ದೇಶ ಅಥವಾ ನಿರ್ಧಿಷ್ಟ ಬೇಕು, ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಾತ್ರ ದೇವರು, ಮಠ, ಮಂದಿರಗಳಿಗೆ ಹರಕೆ ಹೊತ್ತುಕೊಳ್ಳುವ ಜನರೇ ಹೆಚ್ಚಾಗಿದ್ದಾರೆ. ಈ ನಡೆ ಸಾಧುವಲ್ಲ. ದೇವರು, ದೈವತ್ವ ನಮ್ಮ ಬದುಕಿನ ದೈನಂದಿನ ಭಕ್ತಿಯ ಭಾಗವಾಗಬೇಕು. ನಿತ್ಯದ ಕ್ರಿಯೆಗಳಲ್ಲಿ ಭಕ್ತಿಯ ಸಮರ್ಪಣಾ ಕ್ರಿಯೆಯೂ ಒಂದು ಎಂದು ಪ್ರಾರ್ಥಿಸಿದಾಗ ಮಾತ್ರ ದೇವರಿಗೆ ನಿಜವಾದ ಸೇವೆ ಸಲ್ಲಿಸಿದ ಹಾಗೆ ಎಂದು ಶಿಕಾರಿಪುರ ತಾಲ್ಲೂಕು ಕಡೆನಂದಿಹಳ್ಳಿ ಮಠದ ಷ.ಬ್ರ. ರೇವಣಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಶನೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ ಹಾಗೂ ವಿವಿಧ ಸಾಧಕರ ಸನ್ಮಾನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇವರಲ್ಲಿ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳುವುದೇ ಭಕ್ತಿಯ ಮೂಲತತ್ವ. ಭಕ್ತಿ ಎಂಬುದು ಕರ್ಮದ ಕ್ರಿಯಾ ಫಲವಲ್ಲ ಅಥವಾ ದೇವರು ನೀಡಿದ ಶಾಪವಲ್ಲ. ಇದೊಂದು ನಿತ್ಯ ಕಾಯಕಗಳಲ್ಲಿ ಒಂದಾಗಿದ್ದು ನಿಜವಾದ ಭಕ್ತಿಯು ಸಾಮಾನ್ಯವಾಗಿ ನಿಸ್ವಾರ್ಥ ಸಮರ್ಪಣಾ ಮನೋಭಾವನೆ ತೋರುವುದಾಗಿದೆ ಎಂದರು.
ಭಕ್ತಿ ಕೇವಲ ಬಾಹ್ಯ ಪ್ರದರ್ಶನವಲ್ಲ, ಕಷ್ಟಗಳು ಎದುರಾದಾಗ ಪರಿಹರಿಸುವ ನಿಟ್ಟಿನಲ್ಲಿ ದೇವರಿಗೆ ಹೊರುವ ಹರಕೆಯ ಪ್ರಕ್ರಿಯೆಯಲ್ಲ, ಭಕ್ತಿ ಎಂಬುದು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಕೊಳ್ಳುವ ಧಾರ್ಮಿಕ ಆಚರಣೆಯಾಗಿದ್ದು, ದೃಢವಾದ ಬದ್ಧತೆ ಮತ್ತು ಅಚಲವಾದ ನಿಷ್ಠೆ ತೋರುವಂತಹ ಮನುಷ್ಯನ ಆಂತರಿಕ ಕ್ರಿಯೆಗಳಲ್ಲಿ ಒಂದಾಗಿದೆ ಎಂದರು.
ಸನಾತನ ಕಾಲದಿಂದಲೂ ದೈವ, ಧರ್ಮಗಳನ್ನು ನಂಬಿದ ನಾವು ಧಾರ್ಮಿಕ ತಳಹದಿಯ ಮೇಲೆ ಜೀವನ ಸಾಗಿಸುತ್ತಿದ್ದೇವೆ. ಆಧುನಿಕ ಯುಗದಲ್ಲಿ ಭಕ್ತಿ, ಭಾವಗಳು ಇಂದಿಗೂ ಉಳಿದುಕೊಂಡ ಪರಿಣಾಮ ಸಾಮಾಜಿಕ ವ್ಯವಸ್ಥೆ ಸುಗಮವಾಗಿ ಸಾಗುತ್ತಿದೆ, ಅಂಗದಲ್ಲಿರುವ ಲಿಂಗಪೂಜೆಯಿಂದ ಶಾಂತಿ ನೆಮ್ಮದಿ ಕಂಡುಕೊಂಡಿದ್ದೇವೆ. ಪ್ರತಿದಿನ ಇಷ್ಟಲಿಂಗ ಪೂಜೆ, ಧ್ಯಾನದಿಂದ ನಾವು ಅರಿವು ಪಡೆದು ಉತ್ತಮ ಜೀವನ ನಡೆಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಚಂದ್ರಪ್ಪ ಕಾರಗಿ, ವರ್ತಕ ಚಂದ್ರಶೇಖರ ಅಂಗಡಿ, ಶಿವಾನಂದ ಸಾಲ್ಮನಿ, ಬಾಬಣ್ಣ ಹೂಲಿಹಳ್ಳಿ, ಶಂಕರರಾವ ಕುಲಕರ್ಣಿ, ಬಸನಗೌಡ ಅಣಜಿಗೌಡ್ರ, ಕುಸುಮಾ ಕಲಕಟ್ಟಿ, ಪ್ರಭಾಕರ ಸೂಡಿ, ಪ್ರಕಾಶ ಕೆಮ್ಮನಕೇರಿ, ಕುಮಾರ ಮಂಚಿಕೊಪ್ಪ ಇದ್ದರು.

Related posts

ಬ್ಯಾಡಗಿ|| ಸಮ ಸಮಾಜದ ಸಾಮಾಜಿಕ ವ್ಯವಸ್ಥೆಗೆ ನುಲಿಯ ಚಂದಯ್ಯ ಬದುಕು; ಬರಹ ಸಾರ್ವಕಾಲಿಕ ಮಾದರಿ: ಶಾಸಕ ಶಿವಣ್ಣವರ

Vijayasiri News

ಬ್ಯಾಡಗಿ: ಗೋವಿಗೆ ಸಂಭ್ರಮದ ಸೀಮಂತ ! || ಹೊಸ ಸೀರೆ; ಹೂವಿನ ದಂಡೆ ಮುಡಿಸಿ ಗೋವಿನ ಸಿಂಗಾರ ! ||

Vijayasiri News

ಬ್ಯಾಡಗಿ: ಸಂಕಷ್ಟಕ್ಕೆ ಸಿಲುಕಿದ ರೈತಾಪಿ ಸಮುದಾಯ, ಕಾಡುಹಂದಿಗಳ ದಾಳಿ; ಕಾಳುಕಟ್ಟುವ ಹಂತದಲ್ಲಿದ್ದ ಗೋವಿನಜೋಳ ಬೆಳೆ ನಾಶ

Vijayasiri News

ಬ್ಯಾಡಗಿ: ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತಾಪಿ ಸಮುದಾಯದ ಬದುಕನ್ನು ಹಸನಾಗಿಸಲು ಕಂಕಣಬದ್ಧ: ಶಾಸಕ ಶಿವಣ್ಣವರ

Vijayasiri News

|| ಬ್ಯಾಡಗಿ: ಬನ್ನಿಹಟ್ಟಿ ಗ್ರಾಮದಲ್ಲಿ ಮರಡಿಬಸವೇಶ್ವರ ಸಮುದಾಯಭವನ ಲೋಕಾರ್ಪಣೆ || ದೇವಾಲಯಗಳು ನಮ್ಮ ಧಾರ್ಮಿಕ- ಸಾಂಸ್ಕೃತಿಕ ಪರಂಪರೆ ಪ್ರತೀಕ: ಶಾಸಕ ಶಿವಣ್ಣವರ

Vijayasiri News

|| ಬ್ಯಾಡಗಿ: ಕಲ್ಲೆದೇವರ ಗ್ರಾಮದಲ್ಲಿ ಗ್ರಂಥಾಲಯ ಪಿತಾಮಹ ಡಾ. ರಂಗನಾಥನ್ ಜಯಂತ್ಯುತ್ಸವ ||ಪುಸ್ತಕಗಳಿಂದ ದೊರೆಯುವ ಜ್ಞಾನದ ಮುಂದೆ ಇನ್ನಾವ ಸಾಧನೂ ಸರಿಸಾಟಿಯಾಗಲಾರದು: ಪ್ರವೀಣ

Vijayasiri News
error: Content is protected !!