Vijayasiri News
ವಿಜಯನಗರಹರಪನಹಳ್ಳಿ ಸುದ್ದಿ

ಹರಪನಹಳ್ಳಿಯಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ಅಸಹಾಯಕ ಕುಟುಂಬದ ಬದುಕಿನಲ್ಲಿ ಪಂಚಗ್ಯಾರಂಟಿ ಯೋಜನೆಗಳು ಭರವಸೆ ಮೂಡಿಸಿವೆ: ಶಾಸಕಿ ಲತಾ ಮಲ್ಲಿಕಾರ್ಜುನ

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಸಮುದಾಯದ ನಮ್ಮ ನಡುವೆ ವಾಸಿಸುತ್ತಿರುವ ಆಲಕ್ಷಿತ ಹಾಗೂ ಕಟ್ಟಕಡೆಯ ಕುಟುಂಬಗಳು ಸಹ ಘನತೆ ಮತ್ತು ಗೌರವದಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು, ದೇಶಕ್ಕೆ ಮಾದರಿಯಾಗಿವೆ. ಜತೆಗೆ, ಬಡ ಹಾಗೂ ನಿರ್ಗತಿಕ ಕುಟುಂಬಗಳಲ್ಲಿಯೂ ಬದುಕಿನ ಭರವಸೆ ಮೂಡಿಸಿವೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ದುಬಾರಿ ಹಾಗೂ ಕೈಗೆಟುಗದಿರುವ ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಬಡ, ನಿರ್ಗತಿಕ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನೇ ತಲ್ಲಣಗೊಳಿಸಿತ್ತು. ಬದುಕು ದುಸ್ತರವಾಗಿತ್ತು. ಆದರೆ, ಇಂಥಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಯಿಂದಾಗಿ, ಅಂಥಹ ಕುಟುಂಬಗಳಿಗೆ ಸಂಜೀವಿನಿ ರೂಪದಲ್ಲಿ ಆಸರೆಯಾಗಿದೆ. ಬದುಕಿನಲ್ಲಿ ಭರವಸೆ ಮೂಡಿಸಿದೆ. ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳು ಜಾರಿಯಾದ ಬಳಿಕ, ರಾಜ್ಯದಲ್ಲಿ ತಲಾದಾಯದ ಪ್ರಮಾಣ ಏರಿಕೆ ಸೂಚ್ಯಂಕದಲ್ಲಿದ್ದೇವೆ. ಜತೆಗೆ, ಸರ್ಕಾರ ಶೋಷಿತ ಸಮುದಾಯಗಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕಿ ಲತಾ ಅವರು ವಿಶ್ಲೇಷಿಸಿದರು.


ಸಮಾರಂಭದಲ್ಲಿ 79ನೇ ಸ್ವಾತಂತ್ರ್ಯ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅವರು ನೇರವೇರಿಸಿ ಮಾತನಾಡಿ, ಸುಮಾರು ಎರಡೂವರೆ ಶತಮಾನಗಳಿಗೂ ಅಧಿಕ ಕಾಲ ದೇಶ ಪರಾಕೀಯರ ಆಳ್ವಿಕೆಯಲ್ಲಿ ನಲುಗಿಹೋಗಿತ್ತು. ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸವ ನಿಟ್ಟಿನಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಮಜಲುಗಳು ರಣರೋಚಕವಾಗಿವೆ. ಈ ಸಂಗ್ರಾಮದಲ್ಲಿ ಭಾಗಿಯಾಗಿ, ದೇಶವನ್ನು ಪರಾಕೀಯರ ದಾಸ್ಯದಿಂದ ಬಿಡುಗಡೆಗೊಳಿಸಿದ ಹಲವು ಸ್ವಾತಂತ್ರö್ಯ ಸೇನಾನಿಗಳ ತ್ಯಾಗ, ಬಲಿದಾನವನ್ನು ನಾವು ಸದಾ ಸ್ಮರಿಸುವ ಮೂಲಕ, ಅವರ ಮಾರ್ಗದರ್ಶನದಲ್ಲಿ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡ್ಯೊಯ್ಯಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಪ್ಪ, ಡಿವೈಎಸ್‌ಪಿ ವೆಂಟಕಪ್ಪ ನಾಯಕ್, ತಹಶೀಲ್ದಾರ್ ಗಿರೀಶ್‌ಬಾಬು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವೈ.ಎಚ್. ಚಂದ್ರಶೇಖರ್, ಕ್ಷೇತ್ರಶಿಕ್ಷಣಾಧಿಕಾರಿ ಲೇಪಾಕ್ಷಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಂಗಪ್ಪ, ಮುಖ್ಯಾಧಿಕಾರಿ ರೇಣುಕಾದೇಸಾಯಿ, ನಗರಸಭೆ ಅಧ್ಯಕ್ಷೆ ಪಾತೀಮಾಬಿ, ಉಪಾಧ್ಯಕ್ಷ ಕೊಟ್ರೇಶ್, ಸ್ಥಾಯಿಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷಿö್ಮÃ, ಮುಖಂಡರಾದ ಡಿ. ಅಬ್ದುಲ್ ರಹಿಮಾನ್, ಲಾಟಿ ದಾದಾಪೀರ್, ಉದ್ದಾರ್ ಗಣೇಶ್, ಜೋಗಿನ ಭರತೇಶ್, ಜಾಕೀರ್ ಹುಸೇನ್, ಮಂಜುನಾಥ ಇಜಂತ್‌ಕರ್, ಎಚ್. ವಸಂತಪ್ಪ, ಗುಡಿ ನಾಗರಾಜ, ಹೇಮಂತ್ ಮೋರಗೇರಿ, ಚಿಕ್ಕೇರಿ ಹನುಮಕ್ಕಾ, ಪೈಲ್ವಾನ್ ಗಣೇಶ್, ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಾಗನಹಳ್ಳಿ ಉದಯಶಂಕರ್, ನಿಚ್ಚವ್ವನಹಳ್ಳಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಲ್. ಹನುಮಂತಪ್ಪ, ಭೀಮಪ್ಪ ಇತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಸಲ್ಲಿಸಿದ ಗಣ್ಯರನ್ನು ತಾಲ್ಲೂಕು ಆಡಳಿತದ ವತಿಯಿಂದ ಸತ್ಕರಿಸಲಾಯಿತು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪರಿಕರಗಳನ್ನು ಹಾಗೂ ತ್ರಿಚಕ್ರ ವಾಹನಗಳನ್ನು ಸಹ ವಿತರಣೆ ಮಾಡಲಾಯಿತು.

Related posts

ಹರಪನಹಳ್ಳಿ || ಬೆಳೆ ನಾಶಪಡಿಸಿದ ಅರಣ್ಯ ಇಲಾಖೆ; ಬೀದಿಗೆ ಬಿದ್ದ ಬುಡಕಟ್ಟು ಕುಟುಂಬಗಳ ಬದುಕು…!

Vijayasiri News

ಜೋಕುಮಾರಮೂರ್ತಿಯ ಮೇಲೆ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರಾಧನೆ ಸ್ಥಗಿತ; ಅಂದಿನಿಂದಲೇ ಊರ ಹೆಸರು ನಾಮಾಂಕಿತ, ಹುಲಿಕಟ್ಟೆ: ಈ ಊರಲ್ಲಿ ಜೋಕುಮಾರಸ್ವಾಮಿ ಆರಾಧನೆ ನಿಷಿದ್ಧ!

Vijayasiri News

ತೆಲಗಿಯಲ್ಲಿ ನಾಳೆ ಬೆಸ್ಕಾಂ ಗ್ರಾಹಕರ ಸಂವಾದ ಸಭೆ

Vijayasiri News

|| ಯು. ಕಲ್ಲಹಳ್ಳಿ: ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿಗೆ || ಅಧ್ಯಕ್ಷರಾಗಿ ಚನ್ನಬಸಪ್ಪ- ಉಪಾಧ್ಯಕ್ಷರಾಗಿ ಲಿಂಗರಾಜ ಆಯ್ಕೆ

Vijayasiri News

ಹೂವಿನಹಡಗಲಿ ಮೂಲದ ಎಎಸ್‌ಐ ಹೃದಯಾಘಾತದಿಂದ ಸಾವು

Vijayasiri News

ಹರಪನಹಳ್ಳಿ: ರೈತರ ಪಾಲಿಗೆ ಶಾಪವಾದ ನಿರಂತರ ಮಳೆ, ‘ಸಿಡಿ’ ರೋಗಬಾಧೆಗೆ ತುತ್ತಾದ ಬೆಳೆ, ವೈಜ್ಞಾನಿಕ ಬೆಳೆ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಎಐಕೆಎಸ್ ಪ್ರತಿಭಟನೆ

Vijayasiri News
error: Content is protected !!