Vijayasiri News
ಬ್ಯಾಡಗಿಹಾವೇರಿ

|| ಬ್ಯಾಡಗಿ: ಬನ್ನಿಹಟ್ಟಿ ಗ್ರಾಮದಲ್ಲಿ ಮರಡಿಬಸವೇಶ್ವರ ಸಮುದಾಯಭವನ ಲೋಕಾರ್ಪಣೆ || ದೇವಾಲಯಗಳು ನಮ್ಮ ಧಾರ್ಮಿಕ- ಸಾಂಸ್ಕೃತಿಕ ಪರಂಪರೆ ಪ್ರತೀಕ: ಶಾಸಕ ಶಿವಣ್ಣವರ

ವಿಜಯಸಿರಿನ್ಯೂಸ್.ಕಾಂ/ಬ್ಯಾಡಗಿ
ನಮ್ಮ ಧಾರ್ಮಿಕ ಪರಂಪರೆಯಲ್ಲಿ ದೇಗುಲಗಳು ಅಗ್ರಪಂಥಿಯ ಸ್ಥಾನದಲ್ಲಿದ್ದು, ನಮ್ಮ ಸಾಂಸ್ಕೃತಿಯ ಸಿರಿವಂತಿಕೆಯ ಕುರುಹುಗಳಾಗಿವೆ ಎಂದು ಶಾಸಕ ಬಸವರಾಜ ಶಿವಣ್ಣವರ ಹೇಳಿದರು.
ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮರಡಿಬಸವೇಶ್ವರ ಸಮುದಾಯಭವನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಆಚಾರ, ವಿಚಾರ ಹಾಗೂ ವಿಭಿನ್ನವಾದ ಸಂಸ್ಕೃತಿಗಳ ಪರಂಪರೆಯನ್ನು ಹೊಂದಿರುವ ನಮ್ಮ ದೇವಾಲಯಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭರತಖಂಡದಲ್ಲಿರುವ ನಮ್ಮ ದೇಗುಲಗಳ ವಾಸ್ತುಶಿಲ್ಪ ಶೈಲಿಗಳೇ ಒಂದು ಅದ್ಭುತ, ಅಚ್ಚರಿ, ಆಕರ್ಷಣೀಯವಾಗಿವೆ. ಇಂಥಹ ವಾಸ್ತುಶಿಲ್ಪದ ಶೈಲಿಯನ್ನು ನಮ್ಮಲ್ಲಿ ಹೊರತುಪಡಿಸಿದರೆ, ವಿಶ್ವದ ಯಾವ ದೇಶದಲ್ಲಿಯೂ ನೋಡಲು ಸಾಧ್ಯವಿಲ್ಲ ಎಂದರು.
ಆರಂಭದಲ್ಲಿ ದೇವಾಲಯಗಳು ಶ್ರದ್ಧಾ- ಭಕ್ತಿಯ ಭಾವೈಕ್ಯ ಕೇಂದ್ರಗಳಾಗಿದ್ದವು. ಕಾಲಾನುಕ್ರಮಕ್ಕೆ ಅನುಗುಣವಾಗಿ, ಈಗ, ದೇವಾಲಯಗಳು ಭಾವೈಕ್ಯತೆ ಜತೆಗೆ, ಸಾಂಸ್ಕೃತಿಯ ವಿನಿಮಯದ ಸಂಕೇತಗಳಾಗಿವೆ. ಇತ್ತೀಚೆಗಂತೂ, ದೇವಾಲಯಗಳು ಸಮುದಾಯಗಳ ಸಂಘಟ ಮತ್ತು ಸಾಮರಸ್ಯದ ವೇದಿಕೆಗಳಿಗೂ ಶಕ್ತಿತುಂಬುತ್ತಿವೆ. ಹೀಗಾಗಿ, ಪ್ರತಿ ಗ್ರಾಮದಲ್ಲಿಯೂ ಆಯಾ ಸಮುದಾಯವನ್ನು ತಮ್ಮ ಆರಾಧ್ಯದೈವದ ಸಂಕೇತಗಳನ್ನು ಆರಾಧಿಸುವ ಹಿನ್ನೆಲೆಯ್ಲಲಿ ಕನಿಷ್ಠ ನಾಲ್ಕೈದು ದೇವಾಲಯಗಳು ನಿಮಾರ್ಣವಾಗುತ್ತಿವೆ ಎಂದು ಶಾಸಕ ಬಸವರಾಜ ಶಿವಣ್ಣವರ ವಿವರಿಸಿದರು.
ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಪರಂಪರೆ ಹಾಗೂ ಸುತ್ತಲಿನ ನಾಲ್ಕಾರು ಗ್ರಾಮಗಳ ಜನರ ಆರಾಧ್ಯದೈವವಾದ ಗ್ರಾಮದ ಮರಡಿಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಸೇರಿದಂತೆ ಸಾರ್ವಜನಿಕ ಕಲ್ಯಾಣ ಕಾರ್ಯಗಳ ಚಟುವಟಿಕೆಗಳಿಗಾಗಿ, ಸಮುದಾಯಭವನ ನಿರ್ಮಾಣದ ಅಗತ್ಯತೆಯ ಬೇಡಿಕೆ ಬಹುದಿನಗಳಿಂದಲೂ ಇತ್ತು. ಹೀಗಾಗಿ ಪ್ರಸಕ್ತ ವರ್ಷವೇ ಅದಕ್ಕೆ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಕಟ್ಟಡವನ್ನು ಪೂರ್ಣಗೊಳಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರವ್ವ ಬನ್ನಿಹಟ್ಟಿ, ಉಪಾಧ್ಯಕ್ಷ ನಾಗಪ್ಪ ಚನ್ನಳ್ಳಿ, ಮಾಜಿ ಅಧ್ಯಕ್ಷ ಜಗದೀಶ ಕೆರಕರ, ಮುಖಂಡರಾದ ದಾನಪ್ಪ ಚೂರಿ, ಶಂಭನಗೌಡ ಪಾಟೀಲ, ಬೀರಣ್ಣ ಬಣಕಾರ, ಡಿ.ಎಚ್. ಬುಡ್ಡನಗೌಡ್ರ, ಚನ್ನಬಸಪ್ಪ ಚನ್ನಳ್ಳಿ, ಗುರು ಮಾಸಣಗಿ, ಬಸವರಾಜ ಪೂಜಾರ, ಕುರುವತ್ತೆಪ್ಪ ಪೂಜಾರ, ಕರಬಸಪ್ಪ ಸರವಂದ, ಶಂಭು ಎಲಿಗಾರ, ಜಯಪ್ಪ ಪೂಜಾರ, ಮಲಕಪ್ಪ ಕೋಣನವರ, ಬಸವರಾಜ ನೆಲೋಗಲ್ಲ, ಕರಬಸಪ್ಪ ಬೂದಿಹಾಳ, ಚನ್ನಬಸನಗೌಡ ಬುಡ್ಡನಗೌಡ್ರ, ಪರಮೇಶ ಚಾಕಲಬ್ಬಿ, ಪಿಡಿಓ ವಿದ್ಯಾವತಿ, ಗ್ರಾಮ ಆಡಳಿತಾಧಿಕಾರಿ ಪ್ರಭಾವತಿ ಬಡಿಗೇರ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಶಾಂತಕುಮಾರ ಹಾಗೂ ಇತರರು ಇದ್ದರು.

ಇದನ್ನೂ ಓದಿ..ಹೆಚ್ಚಿದ ಬೀದಿ ನಾಯಿಗಳ ಹಾವಳಿ; ಸಾರ್ವಜನಿಕರ ಆಕ್ರೋಶ

Related posts

ಬ್ಯಾಡಗಿ: ಗೋವಿಗೆ ಸಂಭ್ರಮದ ಸೀಮಂತ ! || ಹೊಸ ಸೀರೆ; ಹೂವಿನ ದಂಡೆ ಮುಡಿಸಿ ಗೋವಿನ ಸಿಂಗಾರ ! ||

Vijayasiri News

ಬ್ಯಾಡಗಿ:ಇಷ್ಟಾರ್ಥಸಿದ್ಧಿಗಾಗಿ ಮಠ- ಮಂದಿರಗಳಿಗೆ ನಡೆದುಕೊಳ್ಳುವ ಭಕ್ತರೇ ಅಧಿಕ: ರೇವಣಸಿದ್ದೇಶ್ವರ ಸ್ವಾಮೀಜಿ

Vijayasiri News

|| ಬ್ಯಾಡಗಿ: ಕಲ್ಲೆದೇವರ ಗ್ರಾಮದಲ್ಲಿ ಗ್ರಂಥಾಲಯ ಪಿತಾಮಹ ಡಾ. ರಂಗನಾಥನ್ ಜಯಂತ್ಯುತ್ಸವ ||ಪುಸ್ತಕಗಳಿಂದ ದೊರೆಯುವ ಜ್ಞಾನದ ಮುಂದೆ ಇನ್ನಾವ ಸಾಧನೂ ಸರಿಸಾಟಿಯಾಗಲಾರದು: ಪ್ರವೀಣ

Vijayasiri News

ಬ್ಯಾಡಗಿ: ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತಾಪಿ ಸಮುದಾಯದ ಬದುಕನ್ನು ಹಸನಾಗಿಸಲು ಕಂಕಣಬದ್ಧ: ಶಾಸಕ ಶಿವಣ್ಣವರ

Vijayasiri News

ಬ್ಯಾಡಗಿ: ಸಂಕಷ್ಟಕ್ಕೆ ಸಿಲುಕಿದ ರೈತಾಪಿ ಸಮುದಾಯ, ಕಾಡುಹಂದಿಗಳ ದಾಳಿ; ಕಾಳುಕಟ್ಟುವ ಹಂತದಲ್ಲಿದ್ದ ಗೋವಿನಜೋಳ ಬೆಳೆ ನಾಶ

Vijayasiri News

|| ಬ್ಯಾಡಗಿ || ಹೆಚ್ಚಿದ ಬೀದಿ ನಾಯಿಗಳ ಹಾವಳಿ; ಸಾರ್ವಜನಿಕರ ಆಕ್ರೋಶ

Vijayasiri News
error: Content is protected !!