Vijayasiri News
ಬ್ಯಾಡಗಿಹಾವೇರಿ

|| ಬ್ಯಾಡಗಿ || ಹೆಚ್ಚಿದ ಬೀದಿ ನಾಯಿಗಳ ಹಾವಳಿ; ಸಾರ್ವಜನಿಕರ ಆಕ್ರೋಶ

ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಸೇರಿದಂತೆ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡವುದೇ ಕಷ್ಟಕರವಾದ ಸನ್ನಿವೇಶ ಸೃಷ್ಟಿಯಾಗಿದ್ದು, ನಾಯಿಗಳ ಹಾವಳಿಯನ್ನು ನಿಯಂತ್ರಿಸದ ಸ್ಥಳೀಯ ಪುರಸಭೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಗೆ ಒಳಪಡುವ 23ನೇ ವಾರ್ಡ್ ಒಂದರಲ್ಲಿಯೇ ಸುಮಾರು ಐದಾರು ನೂರಕ್ಕೂ ಅಧಿಕ ಬೀದಿ ನಾಯಿಗಳು ಇದ್ದು, ಪ್ರತಿವರ್ಷ ಬೀದಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆಯಲ್ಲಿ ದ್ವಿಗುಣವಾಗುತ್ತಿದ್ದರೂ ಸಹ, ಪುರಸಭೆ ಆಡಳಿತ ಮಂಡಳಿ ಬೀದಿನಾಯಿಗಳ ನಿಯಂತ್ರಣದ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ. ಆದರೆ, ಕಳೆದ ವರ್ಷ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸಿದ ಕುರಿತು, ಪುರಸಭೆಯ ದಾಖಲೆಗಳಲ್ಲಿ ಮಾತ್ರ ಇದೆ. ಆದರೆ, ವಾಸ್ತವ ಸ್ಥಿತಿಯಲ್ಲಿ ನಾಯಿಗಳ ಸಂಖ್ಯೆಯಲ್ಲಿ ಮಾತ್ರ, ಇಳಿಕೆ ಪ್ರಮಾಣ ಕಂಡುಬAದಿಲ್ಲ. ಹೀಗಾಗಿ, ಸ್ಥಳೀಯ ಪುರಸಭೆ ಅಧಿಕಾರಿಗಳು ನಾಯಿಗಳ ನಿಯಂತ್ರಣ ಮುಂದಾಗದಿರುವುದು ಸಾರ್ವಜನಿಕರಲ್ಲಿ ಪುರಸಭೆ ವಿರುದ್ಧ ವ್ಯಾಪಕ ಅಸಮಾಧಾನ ಸೃಷ್ಟಿಸಿದೆ.
ಬೀದಿ ನಾಯಿಗಳ ಸಂತಾನ ಹೆಚ್ಚಳವಾಗಿರುವುದರಿಂದ ಪಟ್ಟಣದಲ್ಲಿ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಬೆಳಗಿನಜಾವ ಹಾಗೂ ಸಂಜೆಯ ವೇಳೆ ವಾಯು ವಿಹಾರಕ್ಕೆ ಸಂಚರಿಸುವ ಸಾರ್ವಜನಿಕರ ಮೇಲೆ ನಾಯಿಗಳು ದಾಳಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿವೆ.
ಇಲ್ಲಿನ ಇಸ್ಲಾಪುರಂ, ಎಸ್‌ಜೆಜೆಎಂ ಶಾಲೆ, ಗಾಂಧಿನಗರ, ರಟ್ಟಿಹಳ್ಳಿ ರಸ್ತೆ, ಕೊಳಚೆಪ್ರದೇಶ, ಸಂಗಮೇಶ್ವರ ನಗರ, ಬೆಟ್ಟದ ಮಲ್ಲೇಶ್ವರ ಬಡಾವಣೆ, ವಾಲ್ಮೀಕಿನಗರ, ಅಂಚೆಕಚೇರಿ ಅಕ್ಕಪಕ್ಕದ ಪ್ರದೇಶ, ಬಸ್‌ನಿಲ್ದಾಣ, ನೆಹರು ನಗರದ ಎಡಭಾಗದ ಪ್ರದೇಶದಲ್ಲಿ ನಾಯಿಗಳು ಹಿಂಡು, ಹಿಂಡಾಗಿ ಸಂಚರಿಸುವ ಮೂಲಕ, ಇಲ್ಲಿನ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಮಾಡಿವೆ. ಈ ಪ್ರದೇಶಗಳಲ್ಲಿ ಬೆಳಗಿನಜಾವ ದಿನಪತ್ರಿಕೆಗಳನ್ನು ಮನೆ ಮನೆಗೆ ಹಂಚಲು ತೆರಳುವ ಪತ್ರಿಕಾ ವಿತರಕರು, ತರಕಾರಿ ಹಾಗೂ ಹಾಲು ಹಂಚಿಕೆ ವ್ಯಾಪಾರಿಗಳು ಮತ್ತು ಡೆಲವರಿ ಬಾಯ್‌ಗಳ ಮೇಲೆ ನಾಯಿಗಳು ದಾಳಿ ಮಾಡುವ ಭೀತಿಯನ್ನು ನಿತ್ಯವೂ ಎದುರಿಸುತ್ತಿದ್ದಾರೆ. ಜತೆಗೆ, ಸಾರ್ವಜನಿಕರು ಸಹ, ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಸಹ ಭಯ ಭೀತರಾಗಿದ್ದಾರೆ. ಕಳೆದ ೧೧ರಂದು ಬೀದಿನಾಯಿಗಳ ದಾಳಿಯಿಂದ ಕಡಿತಕ್ಕೆ ಒಳಗಾದ ಪತ್ರಿಕೆ ಹಂಚುವ ಬಾಲಕನೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆದರೂ, ಸಹ, ನಾಯಿ ನಿಯಂತ್ರಣದ ಮೇಲೆ ಪುರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಪತ್ರಿಕೆ ಹಂಚಿಕೆ ಮಾಡುವ ವಿತರಕರು ಸೇರಿದಂತೆ ಸಾರ್ವಜನಿಕರಿಗೆ ನಾಯಿ ಕಡಿತದ ಪ್ರಕರಣಗಳು, ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರೂ ಸಹ, ಪುರಸಭೆ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿದ್ದಾರೆ. ನಾಯಿಗಳ ಹಾವಳಿಯಿಂದ ಸಂಭವನೀಯ ಅವಘಡಗಳು ಸಂಭವಿಸುವ ಮುನ್ನ ಪುರಸಭೆ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಮುಂದಾಗಿ, ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಪುರಸಭೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ ಸಾಮಾಜಿಕ ಕಾರ್ಯಕರ್ತ ಕಿರಣ್ ಶಿಂಧೆ.
ಪುರಸಭೆ ಆಡಳಿತ ಮಂಡಳಿ ಈಗಲಾದರೂ, ನಾಯಿಗಳ ನಿಯಂತ್ರಣಕ್ಕೆ ಮುಂದಾಗುವ ಮೂಲಕ ಪಟ್ಟಣದ ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಮುಂದಾಗಬೇಕು ಎಂದು ಸಾರ್ವಜನಿಕರ ಆಶಯ.

Related posts

|| ಬ್ಯಾಡಗಿ: ಬನ್ನಿಹಟ್ಟಿ ಗ್ರಾಮದಲ್ಲಿ ಮರಡಿಬಸವೇಶ್ವರ ಸಮುದಾಯಭವನ ಲೋಕಾರ್ಪಣೆ || ದೇವಾಲಯಗಳು ನಮ್ಮ ಧಾರ್ಮಿಕ- ಸಾಂಸ್ಕೃತಿಕ ಪರಂಪರೆ ಪ್ರತೀಕ: ಶಾಸಕ ಶಿವಣ್ಣವರ

Vijayasiri News

ಬ್ಯಾಡಗಿ: ಗೋವಿಗೆ ಸಂಭ್ರಮದ ಸೀಮಂತ ! || ಹೊಸ ಸೀರೆ; ಹೂವಿನ ದಂಡೆ ಮುಡಿಸಿ ಗೋವಿನ ಸಿಂಗಾರ ! ||

Vijayasiri News

ಬ್ಯಾಡಗಿ: ಬೆಳೆಯಲ್ಲಿ ನಿಯಂತ್ರಣಕ್ಕೆ ಬಾರದ ಕಳೆ, ಮೆಕ್ಕೆಜೋಳದ ಬೆಳೆಯಲ್ಲಿ ಮಹಾಮಾರಿ ‘ಮುಳ್ಳುಸಜ್ಜೆ’ ಕಳೆ: ಕಂಗಾಲಾದ ಅನ್ನದಾತ

Vijayasiri News

ಬ್ಯಾಡಗಿ:ಇಷ್ಟಾರ್ಥಸಿದ್ಧಿಗಾಗಿ ಮಠ- ಮಂದಿರಗಳಿಗೆ ನಡೆದುಕೊಳ್ಳುವ ಭಕ್ತರೇ ಅಧಿಕ: ರೇವಣಸಿದ್ದೇಶ್ವರ ಸ್ವಾಮೀಜಿ

Vijayasiri News

ಬ್ಯಾಡಗಿ: ಸಂಕಷ್ಟಕ್ಕೆ ಸಿಲುಕಿದ ರೈತಾಪಿ ಸಮುದಾಯ, ಕಾಡುಹಂದಿಗಳ ದಾಳಿ; ಕಾಳುಕಟ್ಟುವ ಹಂತದಲ್ಲಿದ್ದ ಗೋವಿನಜೋಳ ಬೆಳೆ ನಾಶ

Vijayasiri News

|| ಬ್ಯಾಡಗಿ: ಕಲ್ಲೆದೇವರ ಗ್ರಾಮದಲ್ಲಿ ಗ್ರಂಥಾಲಯ ಪಿತಾಮಹ ಡಾ. ರಂಗನಾಥನ್ ಜಯಂತ್ಯುತ್ಸವ ||ಪುಸ್ತಕಗಳಿಂದ ದೊರೆಯುವ ಜ್ಞಾನದ ಮುಂದೆ ಇನ್ನಾವ ಸಾಧನೂ ಸರಿಸಾಟಿಯಾಗಲಾರದು: ಪ್ರವೀಣ

Vijayasiri News
error: Content is protected !!