Vijayasiri News
ನಮ್ಮೂರ ಸುದ್ದಿಹರಪನಹಳ್ಳಿ ಸುದ್ದಿ

|| ಯು. ಕಲ್ಲಹಳ್ಳಿ: ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿಗೆ || ಅಧ್ಯಕ್ಷರಾಗಿ ಚನ್ನಬಸಪ್ಪ- ಉಪಾಧ್ಯಕ್ಷರಾಗಿ ಲಿಂಗರಾಜ ಆಯ್ಕೆ


ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ತಾಲ್ಲೂಕಿನ ಯು. ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ(ಎಸ್‌ಡಿಎಂಸಿ) ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಗಿದೆ.
ಸಮಿತಿಯ ನೂತನ ಅಧ್ಯಕ್ಷರಾಗಿ ಚನ್ನಬಸಪ್ಪ ಹಾಗೂ ಉಪಾಧ್ಯಕ್ಷರಾಗಿ ಲಿಂಗರಾಜ ಅವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನ ಗ್ರಾಮದ ಮುಖಂಡರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಅಭಿನಂದಿಸಿ, ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ಉಭಯರು, ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಶಾಲೆಯ ಹಿರಿಮೆಯನ್ನು ಎತ್ತಿ ಹಿಡಿಯಲಿ ಎಂದು ಶುಭಹಾರೈಸಿದ್ದಾರೆ.

ತಮ್ಮ ಮೇಲೆ ವಿಶ್ವಾಸ ಇಡುವ ಮೂಲಕ ಶಿಕ್ಷಣದಂತ ಪವಿತ್ರ ಕ್ಷೇತ್ರದ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಗ್ರಾಮದ ಸಮಸ್ತರಿಗೂ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಈ ಹುದ್ದೆಗಳು ಎಂಬುದು ಕೇವಲ ನೆಪಮಾತ್ರ. ಶಾಲಾಭಿವೃದ್ಧಿಯಲ್ಲಿ ಸಮಸ್ತರು ಕೈಜೋಡಿಸುವ ಮೂಲಕ ನಮ್ಮೂರಶಾಲಾ ದೇಗುಲ ಬೆಳಗಲು ಸಹಕರಿಸುವಂತೆ ನೂತನ ಅಧ್ಯಕ್ಷ ಚನ್ನಬಸಪ್ಪ ಹಾಗೂ ಉಪಾಧ್ಯಕ್ಷ ಲಿಂಗರಾಜ ಅವರು ಕೋರಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಗೋವಿಂದಪ್ಪ, ಶಿಕ್ಷಕರಾದ ಗಂಗಾಧರ, ಹೇಮಲತಾ, ಪಲ್ಲವಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸಿದ್ದೇಶ್, ಸದಸ್ಯರಾದ ಸುರೇಶ್, ಮುಖಂಡರಾದ ಮಹೇಶ್ವರಪ್ಪ, ರಾಜಕುಮಾರ, ಲಿಂಗರಾಜ ಫಣಿಯಾಪುರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

Vijayasiri News

|| ಕೋಡಿಬಿದ್ದ ಕಲ್ಲಹಳ್ಳಿ ಕೆರೆ|| ಹರಪನಹಳ್ಳಿ: ಧಾರಾಕಾರ ಮಳೆ, ಮೈದುಂಬಿ ಹರಿಯುತ್ತಿವೆ ಕೆರೆ-ಕಟ್ಟೆಗಳು

Vijayasiri News

ಹರಪನಹಳ್ಳಿ: ನಗರದ ಎಚ್‌ಪಿಎಸ್ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ಭವಿಷ್ಯದ ಬದುಕಿನ ಮಾರ್ಗದರ್ಶಕರಾದ ಪೋಷಕರು- ಗುರುಗಳು ನಮಗೆ ಆದರ್ಶರಾಗಬೇಕಿದೆ: ಡಾ. ಶಿವಕುಮಾರ್

Vijayasiri News

ಕೊನ್ನಾಪುರ ಚೌಡೇಶ್ವರಿದೇವಿ ಕಾಪಾಡಮ್ಮ…ಈ ದೇವಸ್ಥಾನಕ್ಕೆ ತಲುಪಲು ರಸ್ತೆಯೋ… ಇಲ್ಲವೇ ಕೆಸರು ಗದ್ದೆಯೋ…?

admin

ಹರಪನಹಳ್ಳಿ: ರೈತರ ಪಾಲಿಗೆ ಶಾಪವಾದ ನಿರಂತರ ಮಳೆ, ‘ಸಿಡಿ’ ರೋಗಬಾಧೆಗೆ ತುತ್ತಾದ ಬೆಳೆ, ವೈಜ್ಞಾನಿಕ ಬೆಳೆ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಎಐಕೆಎಸ್ ಪ್ರತಿಭಟನೆ

Vijayasiri News

|| ಕೆರೆಗುಡಿಹಳ್ಳಿ: ಗ್ರಾಮಸ್ಥರ ಪಾಲಿಗೆ ಕಂಟಕವಾಗಿದ್ದ ಹೂಳು ತುಂಬಿದ ಚರಂಡಿ || ಕೊನೆಗೂ ಹೂಳು ತೆರೆವುಗೊಳಿಸಲು ಮುಂದಾದ ಪಂಚಾಯ್ತಿ ಸದಸ್ಯ

Vijayasiri News
error: Content is protected !!