Vijayasiri News
ಜಿಲ್ಲೆಗಳುರಾಯಚೂರು

ಸಿರವಾರ: ರೈತರ ಧರಣಿ ನಿರ್ಲಕ್ಷ್ಯತೆ ಖಂಡಿಸಿ ಉಪವಾಸ ಸತ್ಯಾಗ್ರಹ

ವಿಜಯಸಿರಿನ್ಯೂಸ್.ಕಾಂ/ಸಿರವಾರ
ತಾಲ್ಲೂಕಿನ ನಕ್ಕುಂದ ಗ್ರಾಮದ ವಿತರಣಾ ನಾಲಾ 76/3/1ರ ಸರಬರಾಜು ಕೇಂದ್ರದಲ್ಲಿ ಕಟ್ ಓಪನ್ ಹಾಗೂ ಬೆಡ್ ಕಾಂಕ್ರೀಟ್ ಕಂಟ್ರೋಲ್ ಪಾಯಿಂಟ್ ಅಕ್ರಮ ಕಾಮಗಾರಿ ಕೈಗೊಂಡಿರುವ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಪಡಿಸುವಂತೆ ಒತ್ತಾಯಿಸಿ ರೈತರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಕಳೆದ ೬ದಿನಗಳಿಂದಲೂ ನಡೆಯುತ್ತಿದ್ದರೂ, ಸೌಜನ್ಯಕ್ಕಾದರೂ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ನಡೆಯನ್ನು ಖಂಡಿಸಿ, ಇಂದಿನಿಂದಲೇ ಉಪವಾಸ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾಘಟಕದ ಅಧ್ಯಕ್ಷ ಬಸವರಾಜ ನಕ್ಕುಂದ ಹೇಳಿದರು.
ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯಲಕ್ಷ್ಮೀ ಹಾಗೂ ಸಹಾಯಕ ಎಂಜಿನಿಯರ್ ರಮೇಶ್ ಅವರನ್ನು ಕೂಡಲೇ ಅಮಾನತು ಪಡಿಸಬೇಕು ಎಂದು ಒತ್ತಾಯಿಸಿ, ಸಂಘಟನೆ ಹಾಗೂ ರೈತರ ಸಹಯೋಗದಲ್ಲಿ ಕಳೆದ ಆರು ದಿನಗಳಿಂದಲೂ ನಿರಂತರವಾದ ಹೋರಾಟವನ್ನು ಕೈಗೊಳ್ಳಲಾಗಿದೆ. ಆದರೂ, ಸಹ, ರೈತರ ಹಾಗೂ ಸಂಘಟನೆಯ ಅಹವಾಲು ಆಲಿಸಲು ಯಾವೊಬ್ಬ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಕನಿಷ್ಠ ಸೌಜನ್ಯಾಕ್ಕಾದರೂ ಭೇಟಿ ನೀಡದಿರುವುದು ಅಧಿಕಾರಿಗಳ ಅಸಡ್ಡೆತನಕ್ಕೆ ಸಾಕ್ಷಿಯಾಗಿದೆ. ಇಂಥಹ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳ ಬೇಜವಾಬ್ದಾರಿತನವನ್ನು ಖಂಡಿಸಿ, ಧರಣಿಯನ್ನು ಇಂದಿನಿಂದಲೇ, ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ ಎಂದು ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಸವರಾಜ ನಕ್ಕುಂದ ತಿಳಿಸಿದರು.
ರೈತರು ನಡೆಸುತ್ತಿರುವ ನ್ಯಾಯಸಮ್ಮತ ಹೋರಾಟವನ್ನು ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹೀಗಾಗಿ, ಇಲಾಖೆಯ ಮೇಲಧಿಕಾರಿಗಳು ಧರಣಿ ಸ್ಥಳಕ್ಕೆ ಖುದ್ದಾಗಿ ಆಗಮಿಸಬೇಕು. ಜತೆಗೆ, ನಮ್ಮ ನ್ಯಾಯಯುತ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. ಹಾಗೂ ಅವೈಜ್ಞಾನಿಕ ಕಾಮಗಾರಿಯನ್ನು ನಡೆಸಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತಿಲ್ಲಿಡಬೇಕು. ಅಲ್ಲಿಯವರೆಗೂ, ಹೋರಾಟ ನಿಲ್ಲವುದಿಲ್ಲ. ಇನ್ನೂ ಹೋರಾಟದ ರೂಪುರೇಷಗಳು ವಿವಿಧ ಹಂತಗಳನ್ನು ಸ್ವರೂಪ ಪಡೆಯಲಿದೆ. ಸತ್ಯಗ್ರಹದ ಮುಂದುವರೆದ ಭಾಗವಾಗಿ ಆರಂಭವಾಗಿರುವ ಉಪವಾಸ ಧರಣಿಯಲ್ಲಿ ಆರಂಭದಲ್ಲಿ ರೈತರಾದ ಮಹಾಂತೇಶ್ ಪೂಜಾರಿ, ತಿಮ್ಮಣ್ಣನಾಯಕ, ವಿರೂಪಣ್ಣ ಚೆಲುವಾದಿ, ವೀರೇಶ್ ಅಮರಾವತಿ ಹಾಗೂ ಆದೆಪ್ಪ ಅವರು ಉಪವಾಸ ಕೈಗೊಂಡಿದ್ದಾರೆ. ಉಪವಾಸ ಸತ್ಯಗ್ರಹನಿರತ ಪ್ರತಿಭಟನಾಕಾರರಿಗೆ ಏನಾದರೂ, ಅವಘಡ ಸಂಭವಿಸಿದರೆ, ಸಂಬಂಧಿಸಿದ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ್ ಅವರೇ ನೇರ ಹೊಣೆಗಾರರು ಎಂದು ಬಸವರಾಜ ನಲ್ಕುಂದ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಿಮ್ಮಯ್ಯನಾಯಕ ನಕ್ಕುಂದಿ, ಮುಖಂಡರಾದ ವೀರೇಶ, ಬಸಣ್ಣ ಅಮರಾವತಿ, ನಾಗರಾಜ, ಅನಿಲ್‌ಕುಮಾರ, ಮಹಾಂತೇಶ ಪೂಜಾರಿ ಸೇರಿದಂತೆ ಇತರರು ಹಾಜರಿದ್ದರು.

Related posts

ಹರಪನಹಳ್ಳಿ: ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ, ಅಪರಾಧಮುಕ್ತ ಸಮಾಜ ಕಟ್ಟುವಿಕೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಎಸ್‌ಪಿ ಜಾಹ್ನವಿ

Vijayasiri News

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

Vijayasiri News

||ವಿಜಯನಗರ: ಸಿಪಿಐ ಪಕ್ಷದ 2ನೇ ಜಿಲ್ಲಾ ಸಮ್ಮೇಳನ|| ಮತೀಯವಾದ ಮತ್ತು ಭಾವನಾತ್ಮಕ ವಿಷಯಗಳೇ ಬಿಜೆಪಿ ಮೂಲಮಂತ್ರ: ಡಾ. ಸಿದ್ಧನಗೌಡ ಪಾಟೀಲ್

Vijayasiri News

||ಅರಸೀಕೆರೆ: ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ|| ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆಟೋಟ ಅತ್ಯಗತ್ಯ: ಜೆ. ಪದ್ಮಲತಾ

Vijayasiri News

ಬಳ್ಳಾರಿ: ಆ. 10ಕ್ಕೆ ಡಾ.ರಾಜಶೇಖರ ನೀರಮಾನ್ವಿ ಅವರ ಬರಹಗಳ ಕುರಿತ ಸಂವಾದ

Vijayasiri News

|| ವಲಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭ || ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವ ಹೆಚ್ಚಾಗಲಿ: ವೈ.ಡಿ. ಲಕ್ಷ್ಮೀದೇವಿ ಅಣ್ಣಪ್ಪ

Vijayasiri News
error: Content is protected !!