Vijayasiri News
ಜಿಲ್ಲೆಗಳುನಮ್ಮೂರ ಸುದ್ದಿವಿಜಯನಗರ

||ಅರಸೀಕೆರೆ: ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ|| ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆಟೋಟ ಅತ್ಯಗತ್ಯ: ಜೆ. ಪದ್ಮಲತಾ

ವಿಜಯಸಿರಿನ್ಯೂಸ್.ಕಾಂ/ಅರಸೀಕೆರೆ
ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸಮತೋಲನದ ಸ್ಥಿರತೆಗಾಗಿ ಆಟೋಟಗಳು ಅತ್ಯಗತ್ಯವಾಗಿವೆ. ಪಠ್ಯದ ಜತೆಗೆ, ಪಠ್ಯೇತರ ಚಟುವಟಿಕೆಯ ಭಾಗವಾಗಿ ಆಟೋಟಗಳನ್ನು ಪ್ರೋತ್ಸಾಹಿಸಬೇಕಾಗಿದ ಅನಿವಾರ್ಯತೆ ಇದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಘಟಕದ ಉಪಾಧ್ಯಕ್ಷೆ ಜೆ. ಪದ್ಮಲತಾ ಅಭಿಪ್ರಾಯಪಟ್ಟರು.
ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಜ್ಞಾನಜ್ಯೋತಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಮ್ಮಿಕೊಂಡಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಕ್ರೀಡಾಭಿರುಚಿಯನ್ನು ಬೆಳೆಸಬೇಕಾದ ಅವಶ್ಯಕತೆ ಇಂದಿನ ಅನಿವಾರ್ಯತೆಯೂ ಹೌದು. ಮೊಬೈಲ್ ಹಾಗೂ ಕಂಪ್ಯೂಟರ್‌ಗಳು ನಮ್ಮನ್ನು ಆವರಿಸಿಕೊಂಡಿರುವ ಪರಿಣಾಮ, ಮಕ್ಕಳು ಆಟದ ಮೈದಾನವನ್ನೇ ಮರೆತುಹೋಗಿದ್ದಾರೆ. ಶಾಲಾ ಸಮಯದ ಅವಧಿ ಹೊರತುಪಡಿಸಿ, ಮೊಬೈಲ್, ಇಂಟರ್‌ನೆಟ್, ಕಂಪ್ಯೂಟರ್ ಗೇಮಿಂಗ್‌ನಲ್ಲಿಯೇ ಮುಳುಗೇಳ ತೊಡಗುತ್ತಿದ್ದಾರೆ. ಇದು, ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕುರಿತು ಈಗಾಗಲೇ ವರದಿಗಳು ಕೇಳಿಬರುತ್ತಿವೆ. ಹೀಗಾಗಿ, ಅಂಥಹ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಆಟೋಟಗಳಿಂದ ಆಗುವ ಪರಿಣಾಮಗಳನ್ನು ಮಕ್ಕಳಿಗೆ ತಿಳಿಹೇಳುವ ಮೂಲಕ, ಕ್ರೀಡಾಭಿರುಚಿಯನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು.
ಗ್ರಾಮಾAತರ ಪ್ರದೇಶಗಳು ಸೇರಿದಂತೆ ಕೆಲ ಕಡೆಗಳಲ್ಲಿ ಆಟದ ಮೈದಾನದ ಕೊರತೆ ನಮ್ಮಲ್ಲಿದೆ. ಆದರೂ, ಸಹ ಆಟಗಳಿಗೆ ಪೂರಕವಾದ ಮೈದಾನವನ್ನು ಸೃಷ್ಟಿಸುವ ಮೂಲಕ ಮಕ್ಕಳಿಗೆ ಆಟದ ತರಬೇತಿ ನೀಡಬೇಕಾಗಿದೆ. ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಕೊರತೆ ಹಿನ್ನೆಲೆಯಲ್ಲಿ ಎಷ್ಟೋ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸುವ ಮುನ್ನವೇ ಕಮರಿಹೋಗುತ್ತಿರುತ್ತದೆ. ಹೀಗಾಗಿ, ಪ್ರತಿಭಾನ್ವಿತ ಮಕ್ಕಳಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಿದಾಗ, ಅವರು, ಕ್ರೀಡಾಮೈದಾನದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಸಾಧ್ಯ. ಪಿ.ಟಿ. ಉಷಾ, ಅಶ್ವಿನಿನಾಚಪ್ಪ, ಧ್ಯಾನ್‌ಚಂದ್ ಪ್ರತಿಭೆಗಳು ನಮ್ಮಲ್ಲಿಯೂ ಇವೆ. ಆದರೆ, ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ತರಬೇತಿ ಕೊರತೆಯಿಂದಾಗಿ, ಅವು ಬೆಳಕಿಗೆ ಬರುತ್ತಿಲ್ಲ ಎಂದು ಜೆ. ಪದ್ಮಲತಾ ಅವರು, ವಿಷಾದ ವ್ಯಕ್ತಪಡಿಸಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ. ಷಣ್ಮುಖಪ್ಪ ಅವರು ಕ್ರೀಡಾಕೂಟವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ದೈಹಿಕ ಶಿಕ್ಷಣ ಎಂಬುದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರೇರಣೆಯಾಗಿದೆ. ಪ್ರತಿ ಮಗುವು ಕ್ರೀಡಾ ಅವಕಾಶಗಳು ದೊರಕುವಂತಾಗಬೇಕು. ಹಾಗಾದಾಗ ಮಾತ್ರ, ಮಕ್ಕಳಲ್ಲಿನ ಪ್ರತಿಭೆ ಹೊರಬರಲು ಸಾಧ್ಯ. ಮಗು ಆರೋಗ್ಯವಂತಿಕೆಯನ್ನು ಪಡೆದುಕೊಳ್ಳಬೇಕಾದರೆ, ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.


ಮುಖಂಡ ಐ. ಸಲಾಂಸಾಹೇಬ್ ಮಾತನಾಡಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿಯೂ ಆಟದ ಮೈದಾನದ ಕೊರತೆ ಇದೆ. ಹೀಗಾಗಿ, ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸುವ ಮೂಲಕ ಆಟದ ಮೈದಾನದ ಅಭಿವೃದ್ಧಿಯಲ್ಲಿ ಭಾಗಿಯಾಗೋಣ. ಜತೆಗೆ, ಸರ್ಕಾರಿ ಶಾಲೆಗಳಿಗೆ ನಮ್ಮ ಮಕ್ಕಳನ್ನು ದಾಖಲಿಸುವ ಮೂಲಕ, ಅವುಗಳನ್ನು ಮುಚ್ಚದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಕ್ರೀಡಾಕೂಟದಲ್ಲಿ ಅರಸೀಕೆರೆ ವಲಯದ ವ್ಯಾಪ್ತಿಗೆ ಒಳಪಡುವ ೧೧ಶಾಲೆಯ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಂದೋಡಿ ಸಿದ್ದೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ. ರಾಮಪ್ಪ, ಶಿಕ್ಷಕರಾದ ಕಥೆಗಾರ ಮಂಜಣ್ಣ, ಮಾಲತೇಶ್ ಪಾಟೀಲ್, ಪಿ. ಬಸವರಾಜ ಮಾತನಾಡಿದರು.
ಪಿ. ಹಾಲೇಶ್ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಖಾಜಿ ಹುಸೇನ್, ಬಿ. ಮಂಜಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಆದಾಮ್ ಸಾಹೇಬ್, ಶಿಕ್ಷಕರಾದ ಕರಿಬಸಪ್ಪ, ಯು. ಜಗದೀಶ್, ಸುಜಾತಾ, ಬಂದಮ್ಮ, ಸಿ.ಆರ್.ಪಿ. ಪುಷ್ಪಾವತಿ, ಪೂರ್ಣಿಮಾ, ಎಲ್. ಮೂರ್ತಿನಾಯ್ಕ್, ಶಿವಮೂರ್ತಿ, ರಾಮಚಂದ್ರಪ್ಪ ಹಾಗೂ ಎಎಸ್‌ಐ ಸದಾನಂದ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದನ್ನೂ ಓದಿ..ವಲಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭ

Related posts

ತೆಲಗಿಯಲ್ಲಿ ನಾಳೆ ಬೆಸ್ಕಾಂ ಗ್ರಾಹಕರ ಸಂವಾದ ಸಭೆ

Vijayasiri News

ಉಚ್ಚಂಗಿದುರ್ಗದಲ್ಲಿ ಎಐಟಿಯುಸಿ ನಾಲ್ಕನೇ ತಾಲ್ಲೂಕು ಸಮ್ಮೇಳನ

admin

|| ಕೆರೆಗುಡಿಹಳ್ಳಿ: ಗ್ರಾಮಸ್ಥರ ಪಾಲಿಗೆ ಕಂಟಕವಾಗಿದ್ದ ಹೂಳು ತುಂಬಿದ ಚರಂಡಿ || ಕೊನೆಗೂ ಹೂಳು ತೆರೆವುಗೊಳಿಸಲು ಮುಂದಾದ ಪಂಚಾಯ್ತಿ ಸದಸ್ಯ

Vijayasiri News

ಅಣಜಿಗೆರೆ ಗ್ರಾಮದಲ್ಲಿ ರಕ್ತದಾನ ಶಿಬಿರ

admin

ವಿಜಯನಗರ ಜಿಲ್ಲೆಯಲ್ಲೊಂದು ಮಾದರಿ ಸಮಾರಂಭ: ಧ್ವಜಾರೋಹಣ ನೆರವೇರಿಸಿದ ಅಲೆಮಾರಿ ಸಮಾಜದ 98ರ ವಯೋವೃದ್ಧೆ ಮರಿಯಮ್ಮ

Vijayasiri News

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಹೊಲಿಗೆ ತರಬೇತಿ ಸಮಾರೋಪ|| ಕುಟುಂಬದ ಆರ್ಥಿಕ ಸದೃಢತೆಗೆ ಸ್ವ- ಉದ್ಯೋಗ ಸಹಕಾರಿ: ಸತೀಶ್‍ಶೆಟ್ಟಿ

Vijayasiri News
error: Content is protected !!