Vijayasiri News
ಜಿಲ್ಲೆಗಳುತಾಲ್ಲೂಕು ಸುದ್ದಿನಮ್ಮೂರ ಸುದ್ದಿ

ಉಚ್ಚಂಗಿದುರ್ಗದಲ್ಲಿ ಎಐಟಿಯುಸಿ ನಾಲ್ಕನೇ ತಾಲ್ಲೂಕು ಸಮ್ಮೇಳನ

ದುಡಿಯುವ ವರ್ಗದ ಶ್ರಮಿಕ ಸಮುದಾಯಕ್ಕೆ ಭದ್ರತೆ ಒದಗಿಸಿದ್ದು ಕಾರ್ಮಿಕ ಸಂಘಟನೆ: ಉಮೇಶ್
ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ದುಡಿಯುವ ಶ್ರಮಿಕವರ್ಗ ಎಲ್ಲಿಯವರೆಗೂ ಅಸಂಘಟಿತರಾಗಿರುತ್ತಾರೋ ಅಲ್ಲಿಯವರೆಗೂ, ಮಾಲೀಕರ ಹಾಗೂ ಏಜೆಂಟರಿAದ ಶೋಷಣೆ ಅನುಭವಿಸಬೇಕಾಗುತ್ತದೆ. ಹೀಗಾಗಿ, ಸಾಂಘಿಕ ಹೋರಾಟಕ್ಕೆ ಧುಮುಕುವ ಮೂಲಕ ಶೋಷಣೆ ಸಂಕೋಲೆಯಿAದ ಹೊರಬರಬೇಕಾಗಿದೆ ಎಂದು ಅಲ್ ಇಂಡಿಯಾ ಟ್ರೆಡ್ ಇಂಡಿಯಾ ಕಾಂಗ್ರೆಸ್ (ಎಐಟಿಯುಸಿ) ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಜಿ. ಉಮೇಶ್ ಕರೆ ನೀಡಿದರು.
ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂಘಟನೆಯ ನಾಲ್ಕನೇ ತಾಲ್ಲೂಕು ಘಟಕದ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಎಐಟಿಯುಸಿ ಕಾರ್ಮಿಕ ಸಂಘಟನೆಯ ಬಲವರ್ಧನೆಯಲ್ಲಿ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹಾಗೂ ಉಚ್ಚಂಗಿದುರ್ಗ ಭಾಗದ ಕಟ್ಟಡ ಕಾರ್ಮಿಕರ ಬಲ ಅತ್ಯಂತ ಪ್ರಮುಖವಾಗಿದೆ. ತೊಂಭತ್ತರ ದಶಕದ ಕೊನೆಯವರೆಗೂ, ದುಡಿಯುವ ವರ್ಗದ ಶ್ರಮಿಕರಿಗೆ ಯಾವುದೇ ಭದ್ರತೆಗಳೇ ಇರಲಿಲ್ಲ. ಇಡೀ ತಮ್ಮ ಜೀವಿತದ ಅವಧಿಯುದ್ಧಕ್ಕೂ ಮಾಲೀಕರು ಹಾಗೂ ಕಂಪೆನಿಗಳು ಕಾರ್ಮಿಕ ಸಮುದಾಯವನ್ನು ಪುಡಿಗಾಸಿನ ಕೂಲಿಗಾಗಿ ದುಡಿಸಿಕೊಳ್ಳುವ ಮೂಲಕ ತಾವೂ ಮಾತ್ರ ಐಷಾರಾಮಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಕಾರ್ಮಿಕರು, ದಿನವಿಡೀ ದುಡಿದರೂ, ಕುಟುಂಬಗಳನ್ನು ಪೋಷಿಸಲು ಸಾಕಾಗುತ್ತಿರಲ್ಲ. ಜತೆಗೆ, ಜ್ವರ, ಕಾಯಿಲೆಗಳು ಸೇರಿಕೊಂಡರೂ, ಧನಿಕರ ಬಳಿ, ಸಾಲಸೋಲ ಮಾಡಿ, ಆರೈಕೆ ಮಾಡಿಕೊಳ್ಳಬೇಕಾಗಿತ್ತು. ಮಕ್ಕಳ ಮದುವೆ, ಮುಂಜಿ ಸೇರಿದಂತೆ ದುಡಿದ ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ. ಇವೆಲ್ಲವುಗಳಿಗೂ ಮಾಡಿದ ಸಾಲ ತೀರಿಸಲು ಇಡೀ ಜೀವಿತಾವಧಿಯವರೆಗೂ ಜೀವ ಸವೆಸಬೇಕಾಗಿತ್ತು. ಆದರೆ, ಎಐಟಿಯುಸಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ಮೂಲಕ ಹೋರಾಟ ರೂಪಿಸಿ, ಕಾರ್ಮಿಕರ ಹಕ್ಕುಗಳ ಕುರಿತು ಚಳವಳಿ ನಡೆಸುವ ಮೂಲಕ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕ ಮಂಡಳಿ ರಚನೆಯಾಯಿತು ಎಂದು ಸಂಘಟನೆಯ ರಾಜ್ಯಘಟಕದ ಅಧ್ಯಕ್ಷ ಉಮೇಶ್ ವಿವರಿಸಿದರು.
ಸಂಘಟನೆಯ ತಾಲ್ಲೂಕು ಘಟಕದ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಅವರು ಮಾತನಾಡಿ, ಸಂಘಟನೆಯ ಹೋರಾಟದ ಫಲವಾಗಿ, ರಾಜ್ಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದೆ. ಆದರೆ, ಮಂಡಳಿ ಆರೋಗ್ಯ ತಪಾಸಣೆ ಹೆಸರಿನಲ್ಲಿ ಹಾಗೂ ಕಿಟ್ ವಿತರಣೆ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ದೋಚುವ ಕೆಲಸಕ್ಕೆ ಮಾಡುತ್ತಿದೆ. ಈ ಕೋಟ್ಯಂತರ ರೂಪಾಯಿ ಹಣ ಕಾರ್ಮಿಕರ ಬೆವರುಬಸಿದು ದುಡಿದ ಹಣ. ಅದು ಸೆಸ್ ರೂಪದಲ್ಲಿ ಕಲ್ಯಾಣ ಮಂಡಳಿ ಖಜಾನೆ ತುಂಬಿದೆ. ಶ್ರಮಿಕ ವರ್ಗದ ಬೆವರಿನ ಹಣವನ್ನೂ ಕೂಳುಬಾಕರು ಕಬಳಿಸಲು ಮುಂದಾಗಿರುವುದು ನಾಚಿಕೆಗೇಡಿ ಸಂಗತಿ. ಹೀಗಾಗಿ, ಶ್ರಮಿಕ ಸಮುದಾಯ ಮುಂದಿನ ದಿನಗಳಲ್ಲಿ ಇನ್ನೂ ಬಲಿಷ್ಠರಾಗಿ ಸಂಘಟಿತರಾಗುವ ಮೂಲಕ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಸಂಘಟನೆಯ ಹಿರಿಯ ಮುಖಂಡ ಹೊಸಳ್ಳಿ ಮಲ್ಲೇಶ್, ಕಲ್ಲು ಹೊಡೆಯುವ ಮತ್ತು ಕ್ವಾರಿ ಕಾರ್ಮಿಕರ ಸಂಘಟನೆಯ ತಾಲೂಕು ಅಧ್ಯಕ್ಷ ಕೆ. ದಾದಾಪೀರ್, ರಾಜ್ಯ ಕಾರ್ಯದರ್ಶಿ ಎಚ್. ವೀರಣ್ಣ, ರಾಜ್ಯ ಮಂಡಳಿ ಸದಸ್ಯ ಹಲಗಿ ಸುರೇಶ್, ಸಂಘಟನೆಯ ತಾಲೂಕು ಕಾರ್ಯದರ್ಶಿ ಬಳಿಗಾನೂರು ಕೊಟ್ರೇಶ್, ಹಿರಿಯ ಕಾರ್ಮಿಕರಾದ ಟಿ. ರಾಮಜ್ಜ, ಅರಸೀಕೆರೆ ರಂಗಪ್ಪ, ಚಿತ್ರದುರ್ಗದ ಚೌಡಪ್ಪ, ಹಾಲೇಶಪ್ಪ ಸತ್ತೂರು, ಚಕಣಾಚಾರಿ, ಅಂಗನವಾಡಿ ಶಿಕ್ಷಕಿ ಬಸಮ್ಮ ಸೇರಿದಂತೆ ಕಟ್ಟಡ ಕಾರ್ಮಿಕರು, ಕಲ್ಲು ಒಡೆಯುವ ಕಾರ್ಮಿಕರು ಹಾಗೂ ಕ್ವಾರಿ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಸಮ್ಮೇಳನಕ್ಕೂ ಮುನ್ನ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ಕೋಟೆಕ್ಯಾಂಪ್ ವರೆಗೂ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಮತ್ತು ಮುಖಂಡರು ಬೈಕ್ ರ‍್ಯಾಲಿ ನಡೆಸಿದರು. ರ‍್ಯಾಲಿಗೆ ಹಿರಿಯ ಮುಖಂಡ ಹೊಸಳ್ಳಿ ಮಲ್ಲೇಶ್ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಮುಂದಿನ ಮೂರು ವರ್ಷದ ಅವಧಿಯ ಪದಾಧಿಕಾರಿಗಳ ಆಯ್ಕೆಯನ್ನು ಸಹ ಮಾಡಲಾಯಿತು.

ಕೋಟ್:
ಇಡೀ ತಮ್ಮ ಜೀವಿತದ ಅವಧಿಯುದ್ಧಕ್ಕೂ ಮಾಲೀಕರು ಹಾಗೂ ಕಂಪೆನಿಗಳು ಕಾರ್ಮಿಕ ಸಮುದಾಯವನ್ನು ಪುಡಿಗಾಸಿನ ಕೂಲಿಗಾಗಿ ದುಡಿಸಿಕೊಳ್ಳುವ ಮೂಲಕ ತಾವೂ ಮಾತ್ರ ಐಷಾರಾಮಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಕಾರ್ಮಿಕರು, ದಿನವಿಡೀ ದುಡಿದರೂ, ಕುಟುಂಬಗಳನ್ನು ಪೋಷಿಸಲು ಸಾಕಾಗುತ್ತಿರಲ್ಲ. ಇಂಥಹ ಶೋಷಣೆಗೆ ಅಂತ್ಯಹಾಡಿದ್ದು, ಎಐಟಿಯುಸಿ ಸಂಯೋಜಿತ ಕಾರ್ಮಿಕ ಸಂಘಟನೆ.
-ಎಚ್.ಜಿ. ಉಮೇಶ್, ರಾಜ್ಯಘಟಕದ ಅಧ್ಯಕ್ಷರು, ಎಐಟಿಯುಸಿ ಸಂಘಟನೆ.
ಕೋಟ್:
ಮಂಡಳಿ ಆರೋಗ್ಯ ತಪಾಸಣೆ ಹೆಸರಿನಲ್ಲಿ ಹಾಗೂ ಕಿಟ್ ವಿತರಣೆ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ದೋಚುವ ಕೆಲಸಕ್ಕೆ ಮಾಡುತ್ತಿದೆ. ಈ ಕೋಟ್ಯಂತರ ರೂಪಾಯಿ ಹಣ ಕಾರ್ಮಿಕರ ಬೆವರುಬಸಿದು ದುಡಿದ ಹಣ. ಅದು ಸೆಸ್ ರೂಪದಲ್ಲಿ ಕಲ್ಯಾಣ ಮಂಡಳಿ ಖಜಾನೆ ತುಂಬಿದೆ. ಶ್ರಮಿಕ ವರ್ಗದ ಬೆವರಿನ ಹಣವನ್ನೂ ಕೂಳುಬಾಕರು ಕಬಳಿಸಲು ಮುಂದಾಗಿರುವುದು ನಾಚಿಕೆಗೇಡಿ ಸಂಗತಿ.
-ಗುಡಿಹಳ್ಳಿ ಹಾಲೇಶ್, ತಾಲೂಕು ಘಟಕದ ಕಾರ್ಯದರ್ಶಿ, ಎಐಟಿಯುಸಿ ಸಂಘಟನೆ.

ಬಾಕ್ಸ್:
ಸುಭದ್ರ ದೇಶ ನಿರ್ಮಾಣದಲ್ಲಿ ಕಾರ್ಮಿಕರ ಬೆವರಿನ ಹನಿ ಹನಿಯ ಪಾಲಿದೆ
ದೇಶದ ಆರ್ಥಿಕ ವ್ಯವಸ್ಥೆಯ ಬಲಿಷ್ಠಗೊಳಿಸುವಿಕೆಯಲ್ಲಿ ನಮ್ಮ ಶ್ರಮಿಕ ಸಮುದಾಯದ ಪಾಲು ಅಗ್ರಗಣ್ಯವಾಗಿದೆ. ಹೀಗಾಗಿ, ನಾವು ಕೇವಲ ಕಟ್ಟಡ ಕಾರ್ಮಿಕರು ಮಾತ್ರ ಅಲ್ಲ; ದೇಶವನ್ನೇ ಕಟ್ಟುವ ಜನ ನಾವು. ಸುಭದ್ರ ದೇಶ ನಿರ್ಮಾಣದಲ್ಲಿ ಕಾರ್ಮಿಕರ ಬೆವರಿನ ಹನಿಯ ಪಾಲೂ ಸೇರಿದೆ. ಹೀಗಾಗಿ, ನಮ್ಮಲ್ಲಿರುವ ಭಿನ್ನತೆಯನ್ನು ಬದಿಗಿರಿಸಿ, ಏಕತೆಯನ್ನು ಸಾಧಿಸುವ ಮೂಲಕ ನಮ್ಮ ಮೂಲಭೂತ ಹಕ್ಕುಗಳು ಹಾಗೂ ಸೌಕರ್ಯಗಳನ್ನು ಪಡೆಯಲು ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಸಂಘಟನೆಯ ತಾಲೂಕು ಉಸ್ತುವಾರಿ ಎಚ್.ಎಂ. ಸಂತೋಷ್ ಕಾರ್ಮಿಕರಿಗೆ ಕಿವಿಮಾತು ಹೇಳಿದರು.

Related posts

ಹರಪನಹಳ್ಳಿ: ನಾಳೆ ಬೆಸ್ಕಾಂ ಗ್ರಾಹಕರ ಸಂವಾದ ಸಭೆ

Vijayasiri News

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News

ವಿಜಯನಗರ: ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ವಕೀಲ ಬಸವರಾಜ ಸಂಗಪ್ಪನವರ್ ನೇಮಕ

Vijayasiri News

ಪಂಚಾಯ್ತಿ ಆಡಳಿತದ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಕಲುಷಿತ ನೀರು ಪೂರೈಕೆ; ಸಾಂಕ್ರಾಮಿಕ ರೋಗದ ಆತಂಕದಲ್ಲಿ ಗ್ರಾಮಸ್ಥರು…!

Vijayasiri News

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

Vijayasiri News

|| ಹರಪನಹಳ್ಳಿ: ಸಿಪಿಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ || ಉಚ್ಚಂಗಿದುರ್ಗದ ಆಶ್ರಯ ಪ್ಲಾಟ್ ನಿವಾಸಿಗಳಿಗೆ ಖಾಸಗೀ ವ್ಯಕ್ತಿಯ ಕಿರುಕುಳ ಆರೋಪ

Vijayasiri News
error: Content is protected !!