Vijayasiri News
ತಾಲ್ಲೂಕು ಸುದ್ದಿ

ಅರಸೀಕೆರೆ: ಎಎಚ್‌ಎಚ್ ಪದವಿ ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ

ಸ್ವಾವಲಂಬಿ ಬದುಕಿಗೆ ಗುಣಾತ್ಮಕ ಶಿಕ್ಷಣ ಅತ್ಯಗತ್ಯ: ಡಾ.ಎಂ. ಸುರೇಶ ಅಭಿಪ್ರಾಯ
ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಸ್ಪರ್ಧಾತ್ಮಕ ಯುಗದಲ್ಲಿ ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ಆ ವೇಗದ ಜತೆಗೆ ಹೆಜ್ಜೆ ಹಾಕುವ ಮೂಲಕ ಸ್ವಾವಲಂಬಿ ಕಟ್ಟಿಕೊಳ್ಳಬೇಕಾದರೆ ಗುಣಾತ್ಮಕ ಶಿಕ್ಷಣದ ಅತ್ಯಗತ್ಯ ಜರೂರಾಗಬೇಕಾಗಿದೆ ಎಂದು ಅರಸೀಕೆರೆ ಗ್ರಾಮದ ವೈ. ಅಣ್ಣಪ್ಪ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ. ಸುರೇಶ ಅಭಿಪ್ರಾಯಪಟ್ಟರು.
ತಾಲೂಕಿನ ಅರಸೀಕೆರೆ ಗ್ರಾಮದ ಎಎಚ್‌ಎಎಚ್ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತೃತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಥಮ ಮತ್ತು ದ್ವೀತಿಯ ವರ್ಷದ ವಿದ್ಯಾರ್ಥಿಗಳ ಶಾರದಾ ಪೂಜೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಅಂಕ ಗಳಿಕೆಯಿಂದಲೇ ಉದ್ಯೋಗ ಪಡೆಯಬಹುದಾಗಿದ್ದ ಒಂದು ಕಾಲ ಈಗ ಮುಗಿದ ಅಧ್ಯಾಯ. ಈ ಕ್ಷಣದಲ್ಲಿ ಅಂಕ ಗಳಿಕೆಯ ಜತೆಗೆ, ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಬಲ್ಲ ಜ್ಞಾನಸಂಪಾದನೆಯ ಸವಾಲುಗಳು ನಮ್ಮನ್ನು ಸುತ್ತುವರೆದಿವೆ. ಹೀಗಾಗಿ, ಅಂಕಗಳಿಕೆಯ ಜತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಸಮರ್ಥವಾಗಿ ಎದುರಿಸಬಲ್ಲ ಜ್ಞಾನಾರ್ಜನೆಯನ್ನು ಪಡೆಯಬೇಕಾಗಿದೆ. ಹಾಗಾದಾಗ ಮಾತ್ರ, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ಒಳ್ಳೆಯ ಸ್ಥಾನಮಾನಗಳು ನಮ್ಮನ್ನು ಸ್ವಾಗತಿಸುತ್ತಿವೆ ಎಂದು ಡಾ. ಸುರೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉತ್ತಮ ಅಂಕ ಗಳಿಸಿದರಷ್ಟೇ ನಮ್ಮನ್ನು ಉದ್ಯೋಗಗಳು ರಕ್ತಗಂಬಳಿ ಹಾಸಿ ಸ್ವಾಗತಿಸಲಾರವು. ಅದರಾಚೆ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಮೂಲಕ ಉದ್ಯೋಗಗಳನ್ನು ಪಡೆಯಬೇಕಾಗದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಯುವಜನ ಸಮೂಹ, ಕಲಿಕೆಯ ಹಂತದಲ್ಲಿ ಮೋಜು, ಮಸ್ತಿ ಹಾಗೂ ಮೊಬೈಲ್‌ಗಳ ಮಾಯಜಾಲಕ್ಕೆ ಸಿಲುಕದೆ, ಸ್ಪರ್ಧಾತ್ಮಕ ಕಲಿಯುವಿಕೆಯತ್ತ ಗಮನ ಹರಿಸುವಂತೆ ಡಾ. ಸುರೇಶ ಸೂಚ್ಯವಾಗಿ ಹೇಳಿದರು.
ಸ್ಥಳೀಯ ಎಸ್‌ಎಂಸಿಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ದುರುಗೇಶ್ ಮಾತನಾಡಿ, ಕ್ಷಣ ಕ್ಷಣಕ್ಕೂ ಜಗತ್ತು ಬದಲಾವಣೆಯ ಪಥಕ್ಕೆ ಮಗ್ಗಲು ಬದಲಾಯುತ್ತಿರುತ್ತದೆ. ಹೀಗಾಗಿ, ಆ ಬದಲಾವಣೆಗೆ ಅನುಗುಣವಾಗಿ, ನಾವು ಬದಲಾಗುವ ಮೂಲಕ ಬದುಕು ಕಟ್ಟಿಕೊಳ್ಳಬೇಕಾಗಿದೆ. ಗುರು- ಹಿರಿಯರಿಗೆ ಗೌರವಿಸುವ, ಜತೆಗೆ, ನಮ್ಮ ಬದುಕು ರೂಪಿಸಲು ಹೆಣಗಾಡುತ್ತಿರುವ ತಂದೆ- ತಾಯಿಗಳಿಗೆ ಪ್ರೀತಿಯಿಂದ ನಡೆದುಕೊಳ್ಳುವ ಮೂಲಕ ವ್ಯಾಸಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಗ್ರಾಮದ ಹಿರಿಯರಾದ ಎ.ಎಚ್. ಪಂಪಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಎ.ಎಚ್. ಉಮೇಶ್, ಹರಪನಹಳ್ಳಿ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಹಾರಾಳ್ ಬುಳ್ಳಪ್ಪ, ಮುಖಂಡರಾದ ಎ.ಎಚ್. ಬಸವರಾಜಪ್ಪ, ಗುರುಶಾಂತನಗೌಡ, ಎ.ಎಚ್. ಮಲ್ಲಿಕಾರ್ಜುನ, ಪೂಜಾರ ಮರಿಯಪ್ಪ, ಎ.ಎಚ್. ನಾಗರಾಜ, ಬನ್ನಿಮಟ್ಟಿ ಸಿದ್ದಪ್ಪ, ಎ.ಎಚ್. ವಿಶ್ವನಾಥ, ವಾಗೀಶ್, ರಾಕೇಶ್, ಉಪನ್ಯಾಸಕರಾದ ವಿದ್ಯಾ, ಗೀತಾ, ಡಾ. ಚಂದ್ರಪ್ಪ, ಕಾಂತೇಶ್ ಇತರರು ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಸತ್ಕರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related posts

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News

ಅಣಜಿಗೆರೆ ಗ್ರಾಮದಲ್ಲಿ ರಕ್ತದಾನ ಶಿಬಿರ

admin

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

Vijayasiri News

ಹೊರಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಮನವಿ ಒಂಭತ್ತು ತಿಂಗಳಿನಿಂದಲೂ ಕೈಸೇರದ ವೇತನ; ಬೀದಿಗೆ ಬಿದ್ದ ಕಾರ್ಮಿಕರ ಬದುಕು: ನಿಯೋಗದ ಆಕ್ರೋಶ

admin

ಹರಪನಹಳ್ಳಿ: ನಗರದ ಎಚ್‌ಪಿಎಸ್ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ಭವಿಷ್ಯದ ಬದುಕಿನ ಮಾರ್ಗದರ್ಶಕರಾದ ಪೋಷಕರು- ಗುರುಗಳು ನಮಗೆ ಆದರ್ಶರಾಗಬೇಕಿದೆ: ಡಾ. ಶಿವಕುಮಾರ್

Vijayasiri News

ಕೊನ್ನಾಪುರ ಚೌಡೇಶ್ವರಿದೇವಿ ಕಾಪಾಡಮ್ಮ…ಈ ದೇವಸ್ಥಾನಕ್ಕೆ ತಲುಪಲು ರಸ್ತೆಯೋ… ಇಲ್ಲವೇ ಕೆಸರು ಗದ್ದೆಯೋ…?

admin
error: Content is protected !!