Vijayasiri News
ಹರಪನಹಳ್ಳಿ ಸುದ್ದಿ

ಹರಪನಹಳ್ಳಿ: ಪಾಳೇಗಾರರ ಕಾಲದ ಅಪ್ರಕಟಿತ ಶಿಲಾಶಾಸನ ಪತ್ತೆ

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ:

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿರಸ್ತಹಳ್ಳಿ ಗ್ರಾಮದಲ್ಲಿ ಹರಪನಹಳ್ಳಿ ಪಾಳೇಗಾರರ ಸಂಸ್ಥಾನದ ದೊರೆಗಳ ಆಳ್ವಿಕೆಯಲ್ಲಿನ ಅವಧಿಯ ಶಿಲಾಶಾಸನ ಪತ್ತೆಯಾಗಿದೆ ಎಂದು ಸಂಶೋಧಕಿ ಎಂ.ಪಿ. ವೀಣಾಮಹಾಂತೇಶ್ ತಿಳಿಸಿದ್ದಾರೆ.

ಹರಪನಹಳ್ಳಿಯಿಂದ ಹರಿಹರಕ್ಕೆ ಸಂಪರ್ಕ ಬೆಸೆಯುವ ಶಿವಮೊಗ್ಗ- ಮರಿಯಮ್ಮನಹಳ್ಳಿ ರಾಜ್ಯಹೆದ್ದಾರಿಗೆ ಹೊಂದಿಕೊAಡಿರುವ ಈ ಚಿರಸ್ತಹಳ್ಳಿಯಲ್ಲಿ ಈ ಅಪರೂಪದ ಶಿಲಾಶಾಸನ ಪತ್ತೆಯಾಗಿದೆ. ಜತೆಗೆ, ಇದೇ ಗ್ರಾಮದಲ್ಲಿರುವ ಶಂಕರಲಿAಗಸ್ವಾಮಿ ದೇವಾಲಯದ ಆವರಣದಲ್ಲಿ ರಾಷ್ಟçಕೂಟ ದೊರೆಗಳ ಆಳ್ವಿಕೆಯಲ್ಲಿನ ಎರಡು ವೀರಗಲ್ಲು ಶಾಸನಗಳು ಹಾಗೂ ಚಾಲುಕ್ಯ ರಾಜಮನೆತನದ ರಾಜತ್ರೆöÊಲೋಕಮಲ್ಲದೇವನ (ಕ್ರಿ.ಶ.೧೧/೧/೧೦೫೦) ಹಾಗೂ ಇಮ್ಮಡಿ ನೊಳೆಂಬನ ಒಂದು ಶಾಸನ ಸೇರಿದಂತೆ ಒಟ್ಟಾರೆ ನಾಲ್ಕು ಶಾಸನಗಳು ಪತ್ತೆಯಾಗಿವೆ ಎಂದು ವೀಣಾ ಮಹಾಂತೇಶ್ ತಿಳಿಸಿದ್ದಾರೆ.

ಇತ್ತೀಚೆಗೆ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಊರಿನ ಮಧ್ಯಭಾಗದಲ್ಲಿರುವ ಬಸವೇಶ್ವರ ದೇವಾಲಯದ ಪಕ್ಕದಲ್ಲಿ ಹರಪನಹಳ್ಳಿ ಪಾಳೇಗಾರರ ಅಪ್ರಕಟಿತ ಶಾಸನ ದೊರೆತಿದೆ. ಪೂರ್ವ ದಿಕ್ಕಿಗೆ ಮುಖ ಮಾಡಿರುವ ಈ ಶಾಸನವು ೨ಅಡಿ ಎತ್ತರ ಹಾಗೂ ೨ಅಡಿ ಅಗಲದ ವ್ಯಾಸವನ್ನು ಹೊಂದಿದೆ. ಜತೆಗೆ, ಈ ಶಾಸನವು ೬ಐತಿಹಾಸಿಕ ಕುರುಹುಗಳ ಬರಹದ ಸಾಲುಗಳನ್ನು ಹೊಂದಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ ಹಾಗೂ ಅಕ್ಕ-ಪಕ್ಕದಲ್ಲಿ ಸೂರ್ಯ- ಚಂದ್ರರ ರೇಖಾ ಚಿತ್ರಗಳನ್ನು ಹೊಂದಿದೆ ಎಂದು ಸಂಶೋಧಕಿ ವೀಣಾ ಮಹಾಂತೇಶ್ ತಿಳಿಸಿದ್ದಾರೆ.

ಶಾಸನದಲ್ಲಿ ಅರಸಿಣ ಮಠದ ಚನಬಸವನ ಹಾಗೂ ಬಸವಂಥರಯ ಎಂಬ ವ್ಯಕ್ತಿಗಳ ಉಲ್ಲೇಖವನ್ನು ಒಳಗೊಂಡಿದೆ. ಇಮ್ಮಡಿ ಬಸವಂಥರಯ್ಯ ಅಥವಾ ಇಮ್ಮಡಿ ಬಸವಂತ ನಾಯಕ ಹರಪನಹಳ್ಳಿ ಪಾಳೇಗಾರರ ದೊರೆಗಳ ಒಬ್ಬ ಅರಸ. ಈ ಬಸವಂತನಾಯಕ ದೊರೆಯು ಕ್ರಿ.ಶ. ೧೭೧೫ರಿಂದ ಕ್ರಿ.ಶ೧೭೧೬ ಅವಧಿಯಲ್ಲಿ ಕೇವಲ ಒಂದು ವರ್ಷ ಮಾತ್ರ ಸಂಸ್ಥಾನದ ರಾಜ್ಯಭಾರ ಮಾಡಿದ್ದಾನೆ. ಹೀಗಾಗಿ, ಈ ಶಾಸನದ ಕಾಲವನ್ನು ಕ್ರಿ.ಶ. ೧೭೧೫ರಿಂದ ೧೭೧೬ರ ಕಾಲಮಾನ ಎಂದು ಗುರುತಿಸಬಹುದಾಗಿದೆ. ಎರಡನೇ ಬಸವಂತನಾಯಕನದ ಪತ್ನಿ ಹರಿಮಮ್ಮಾಜೀ. ಇವಳು ತನ್ನ ಪತಿಯ ಮರಣದ ನಂತರ ಐದು ವರ್ಷಗಳ ಕಾಲ ಸಂಸ್ಥಾನದ ರಾಜ್ಯಭಾರವನ್ನು ಮಾಡಿದ್ದಾಳೆ. ದಂಪತಿಗಳಿಬ್ಬರು ಹಲವು ದಾನ, ಧರ್ಮಾಧಿಗಳನ್ನು ಕೈಗೊಂಡಿರುವುದು ಕಂಚಿನ ಹಸ್ತಪ್ರತಿ ಹಾಗೂ ಶಾಸನಗಳಿಂದ ಮಾಹಿತಿ ಲಭ್ಯವಾಗುತ್ತಿದೆ. ಎರಡನೇ ಬಸವಂತನಾಯಕನು ದಾರಿಹೋಕರಿಗಾಗಿ, ಪ್ರಯಾಣಿಕರಿಗಾಗಿ ನೀರು ಹಾಗೂ ನೆರಳಿನ ವ್ಯವಸ್ಥೆಗಾಗಿ ಸಂಸ್ಥಾನದಲ್ಲಿನ ವಿವಿಧೆಡೆ ರಸ್ತೆಗಳಲ್ಲಿ ಅಲ್ಲಲ್ಲಿ ನೀರಿನ ಅರವಟ್ಟಿಗೆ ಮತ್ತು ಪ್ರಯಾಣಿಕರು, ಪ್ರವಾಸಿಗರು ಹಾಗೂ ದಾರಿಹೋಕರಿಗಾಗಿ ಧಣಿವಾರಿಸಿಕೊಳ್ಳಲು ರಸ್ತೆಗಳ ಇಕ್ಕೆಲಗಳಲ್ಲಿ ಗಿಡ- ಮರಗಳನ್ನು ಬೆಳೆಸಿರುವ ಕುರಿತು ಶಾಸನ ಹಾಗೂ ಹಸ್ತಪ್ರತಿಗಳಲ್ಲಿ ಮಾಹಿತಿ ದೊರಕುತ್ತದೆ ಎಂದು ವೀಣಾ ಮಹಾಂತೇಶ್ ವಿಶ್ಲೇಷಿಸುತ್ತಾರೆ.

ಪತ್ತೆಯಾಗಿರುವ ಅಪ್ರಕಟಿತ ಶಾಸನದಲ್ಲಿ ಉಲ್ಲೇಖಿತವಾಗಿರುವ ಅರಿಣಮಟ(ಮಠ) ಚನಬಸವನ ಎಂಬ ವಾಕ್ಯಗಳ ಸಾಲುಗಳನ್ನು ಗಮನಿಸಿದರೆ, ಹರಪನಹಳ್ಳಿ ಪಟ್ಟಣದ ಕುರುಬರಗೇರಿಯಲ್ಲಿರುವ ಮಠದ ಪಕ್ಕದಲ್ಲಿರುವ ಬಾವಿಯನ್ನು ಅರಸನಮಠ, ಅರಸನಬಾವಿ ಎಂದು ಕರೆಯುತ್ತಾರೆ. ಮುಮ್ಮಡಿ ಬಸಪ್ಪನಾಯಕನಿಗೆ ಮಠದ ಚನ್ನಬಸವಸ್ವಾಮಿ ಅವರು ಲಿಂಗಧಾರಣೆ ಮಾಡಿಸಿದ್ದಾರೆ. ಹೀಗಾಗಿ, ಶಾಸನದಲ್ಲಿ ಉಲ್ಲೇಖಿತವಾದ ಅರಸಿನಮಠ ಹರಪನಹಳ್ಳಿಯ ಕುರುಬಗೇರಿಯ ಮಠವೇ ಆಗಿರಬೇಕು ಎನ್ನುತ್ತಾರೆ ಸಂಶೋಧಕಿ ವೀಣಾ ಮಹಾಂತೇಶ್ ಅವರು. ಕಾರ್ಯಕ್ಷೇತ್ರದ ಸಂದರ್ಭದಲ್ಲಿ ನೆರವು ನೀಡಿದ ಹಾಗೂ ಶಾಸನದ ಸುಳಿವು ನೀಡಿದ ರೇಣುಕಾಪ್ರಸಾದ್, ಮಲ್ಲಿಕಾರ್ಜುನಸ್ವಾಮಿ ಕಲ್ಮಠ, ಡಾ.ರವಿಕುಮಾರ ನವಲಗುಂದ, ಡಾ.ವರೇಶ್, ನೇತ್ರಾ, ದಾದಾಪೀರ್ ಮಕರಬ್ಬಿ ಹಾಗೂ ಚಿರಸ್ತಹಳ್ಳಿ ಗ್ರಾಮಸ್ಥರಿಗೆ ಸಂಶೋಧಕಿ ವೀಣಾ ಮಹಾಂತೇಶ್ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಗ್ರಾಮದಲ್ಲಿ ಪತ್ತೆಯಾಗಿರುವ ಅಪ್ರಕಟಿತ ಶಿಲಾಶಾಸನವು ಹರಪನಹಳ್ಳಿ ಪಾಳೇಗಾರರ ರಾಜಮನೆತನ ಮಹತ್ವದ ಐತಿಹಾಸಿಕ ದಾಖಲೆಯಾಗಿದೆ. ಚನ್ನಬಸವ ಸ್ವಾಮಿಗಳಿಗೆ ಸಂಬಂಧಿಸಿದ ತಾಮ್ರಪಟ ಹಾಗೂ ಹಸ್ತಪ್ರತಿಗಳು ಸಹ ದೊರಕಿವೆ. ಇವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ ಕಾಲಗರ್ಭದಲ್ಲಿ ಹುದುಗಿಹೋಗಿರುವ ಪಾಳೇಗಾರರ ಐತಿಹಾಸಿಕ ಮಹತ್ವದ ಸಂಗತಿಗಳನ್ನು ಪ್ರಚುರಪಡಿಸಬೇಕಾದ ಅಗತ್ಯತೆ ಇದೆ.

ಎಂ.ಪಿ. ವೀಣಾ ಮಹಾಂತೇಶ್, ಸಂಶೋಧಕಿ,(ರಾಜ್ಯದ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ. ಪ್ರಕಾಶ್ ಅವರ ಪುತ್ರಿ)

Related posts

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

Vijayasiri News

ಮಾನವೀಯಮೌಲ್ಯಗಳ ಮಾರ್ಗದರ್ಶಿ; ಪರಿಸರ ಚಾಕರಿಕೆ ಪ್ರವೃತ್ತಿಯ ಉಪನ್ಯಾಸಕ, ಹರಪನಹಳ್ಳಿ: ಉಪನ್ಯಾಸಕ ಶಿವಾನಂದ ಮುಡಿಗೇರಿದ ‘ರಾಜೀವ್‌ಗಾಂಧಿ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’

Vijayasiri News

₹. 50ಲಕ್ಷ ವೆಚ್ಚದ ಮೊತ್ತದಲ್ಲಿ ನಿರ್ಮಾಣವಾಗಿರುವ ಆಕರ್ಷಕ ಬೆಳ್ಳಿಪಲ್ಲಕ್ಕಿ, ಹರಪನಹಳ್ಳಿ: ಅರಸೀಕೆರೆ ಕೋಲಶಾಂತೇಶ್ವರಸ್ವಾಮಿ ಬೆಳ್ಳಿಪಲ್ಲಕ್ಕಿ ಪುರ ಪ್ರವೇಶ; ಭರ್ಜರಿ ಮೆರವಣಿಗೆ

Vijayasiri News

ಹರಪನಹಳ್ಳಿಯಲ್ಲಿ ಜೈನಧರ್ಮದ ಸಂಘದ ನೇತೃತ್ವದಲ್ಲಿ ಪ್ರತಿಭಟನೆ, ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹ

Vijayasiri News

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿದ ದೂರುದಾರ ಹರಪನಹಳ್ಳಿ ತಾಲ್ಲೂಕಿನವನಾ…? ಈ ಸುದ್ದಿ ಹರಿಬಿಟ್ಟು ಪ್ರಕರಣ ಮೈಮೇಲೆಳೆದುಕೊಂಡ ಬಿಜೆಪಿ ಮುಖಂಡ…!

Vijayasiri News

ಕೋಟ್ಯಂತರ ಮೌಲ್ಯದ ಆಸ್ತಿಯ ಕಾನೂನುಬಾಹಿರ ಮಂಜೂರಾತಿ.!, ಹರಪನಹಳ್ಳಿ: ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈಗ ವಾಣಿಜ್ಯ ವಹಿವಾಟಿನ ಘಾಟು…!!!

Vijayasiri News
error: Content is protected !!