Vijayasiri News
ನಮ್ಮೂರ ಸುದ್ದಿಹರಪನಹಳ್ಳಿ ಸುದ್ದಿ

ಹರಪನಹಳ್ಳಿಯಲ್ಲಿ ಜೈನಧರ್ಮದ ಸಂಘದ ನೇತೃತ್ವದಲ್ಲಿ ಪ್ರತಿಭಟನೆ, ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹ

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಶಾಂತಿ ಹಾಗೂ ಅಹಿಂಸೆಯ ಸಂಕೇತವಾದ ಜೈನಧರ್ಮ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಪದಪ್ರಯೋಗ ಮಾಡುವ ಮೂಲಕ ಅಪ್ರಚಾರ ಮಾಡುತ್ತಿರುವ ಘಟನೆಗಳನ್ನು ಖಂಡಿಸಿ ಹಾಗೂ ಅಪಪ್ರಚಾರಕ್ಕೆ ಮುಂದಾಗಿರುವವರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹರಪನಹಳ್ಳಿ ನಗರದಲ್ಲಿ ಶನಿವಾರ ಶಾಂತಿನಾಥ ದಿಗಂಬರ ಜೈನಧರ್ಮದ ತಾಲ್ಲೂಕು ಘಟಕದ ನೇತೃತ್ವದಲ್ಲಿ ನೂರಾರು ಜೈನಧರ್ಮಿಯರು ಪ್ರತಿಭಟನೆ ನಡೆಸಿದರು.
ನಗರದ ಶಾಂತಿನಾಥ ಕೋಟೆಬಸದಿಯ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಳಿಕ, ಪ್ರಮುಖ ಬೀದಿಯ ಮುಖಾಂತರ ತಾಲ್ಲೂಕು ಆಡಳಿತಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು.
ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪದ್ಮರಾಜ್ ಜೈನ್ ಅವರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಹಾಗೂ ಕ್ಷೇತ್ರದ ಧರ್ಮಾಧಿಕಾರಿಯೂ ಆದ ಡಾ. ವೀರೇಂದ್ರ ಹೆಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣದ ಯ್ಯೂಟೂಬ್ ಹಾಗೂ ಇತರೆ ಪ್ಲಾಟ್ ಪಾರ್ಮ್ಗಳಲ್ಲಿ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಇದು, ಅಹಿಂಸೆ ಮತ್ತು ಶಾಂತಿಯ ಸಂಕೇತವಾಗಿರುವ ಜೈನಧರ್ಮದ ಭಾವನೆಗಳ ಮೇಲೆ ಘಾಸಿ ಉಂಟುಮಾಡಿದೆ. ಈ ಬೆಳವಣಿಗೆಯ ಹಿಂದೆ ಕಾಣದ ಕೈವಾಡಗಳು ಕೆಲಸ ಮಾಡುತ್ತಿರುವ ಶಂಕೆ ಇದೆ. ಹೀಗಾಗಿ, ಈ ಘಟನೆಯ ಹಿಂದೆ ಕೆಲಸ ಮಾಡುತ್ತಿರುವ ಹಾಗೂ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸುವ ಮೂಲಕ ಕ್ಷೇತ್ರದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ಮೂಲಕ ಧರ್ಮದ ಅವಹೇಳನಕಾರಿ ನೀತಿಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕೊಲೆ ಹಾಗೂ ಅತ್ಯಾಚಾರ ಆರೋಪಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್‌ಐಟಿ ತಂಡವನ್ನು ರಚಿಸಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಕುರಿತು, ತನಿಖೆ ಪ್ರಗತಿಯಲ್ಲಿದೆ. ಸದರಿ ತನಿಖಾ ತಂಡಕ್ಕೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು ಕೂಡ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಆದಾಗ್ಯೂ ಸಹ, ಡಾ. ವೀರೇಂದ್ರ ಹೆಗಡೆ ಅವರ ಹಾಗೂ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡುವಂತ ವಿಡಿಯೊ ತುಣುಕು ಹಾಗೂ ಸುದ್ದಿಗಳನ್ನು ಹರಿಬಿಡುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆದಿದೆ. ಹೀಗಾಗಿ, ಇಂಥವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸುವ ಮೂಲಕ, ಸತ್ಯಾಸತ್ಯತೆಯ ತನಿಖಾ ವರದಿ ಹೊರಬೀಳುವವರೆಗೂ, ಯಾವುದೇ ಸುಳ್ಳುಸುದ್ದಿಗಳನ್ನು ಹರಡದಂತೆ ಕಾನೂನುಕ್ರಮ ಜರುಗಿಸಬೇಕು ಎಂದು ಪದ್ಮರಾಜ್ ಜೈನ್ ಒತ್ತಾಯಿಸಿದ ಮನವಿ ಪತ್ರವನ್ನು ಪ್ರತಿಭಟನಾಕಾರರು ತಹಶೀಲ್ದಾರ್ ಗಿರೀಶ್‌ಬಾಬು ಅವರಿಗೆ ಸಲ್ಲಿಸಿದರು.
ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾವತಿ ಜೈನ್, ಮುಖಂಡರಾದ ಪದ್ಮರಾಜ್ ಜೈನ್, ಪ್ರಸನ್ನಕುಮಾರ ಜೈನ್, ಇಜಾರಿ ಮಹಾವೀರ, ಪಂಡಿತ್ ಚಂದ್ರಪ್ರಭಾ, ಪಾರ್ಶ್ವನಾಥ, ಸಗರಿ ಅನಂತರಾಜ್, ಇಜಾರಿ ಅಭಿನಂದನ್, ಅನಂತರಾಜ್, ಮಹಿಳಾ ಮುಖಂಡರಾದ ಲತಾ ಆರ್ ಜ್ವಾಲಾ, ಪೂರ್ಣಿಮಾ, ಪದ್ಮಾ ಐ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

ಹರಪನಹಳ್ಳಿ: ಪಾಳೇಗಾರರ ಕಾಲದ ಅಪ್ರಕಟಿತ ಶಿಲಾಶಾಸನ ಪತ್ತೆ

admin

ಹರಪನಹಳ್ಳಿ: ಆ. 21ರಂದು ನಗರ ಮತ್ತು ವಿವಿಧೆಡೆ ವಿದ್ಯುತ್ ನಿಲುಗಡೆ

Vijayasiri News

ಉಚ್ಚಂಗಿದುರ್ಗದಲ್ಲಿ ಎಐಟಿಯುಸಿ ನಾಲ್ಕನೇ ತಾಲ್ಲೂಕು ಸಮ್ಮೇಳನ

admin

||ಅರಸೀಕೆರೆ: ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ|| ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆಟೋಟ ಅತ್ಯಗತ್ಯ: ಜೆ. ಪದ್ಮಲತಾ

Vijayasiri News

|| ವಲಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭ || ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವ ಹೆಚ್ಚಾಗಲಿ: ವೈ.ಡಿ. ಲಕ್ಷ್ಮೀದೇವಿ ಅಣ್ಣಪ್ಪ

Vijayasiri News

ಸುಜಲಾನ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಕತ್ತರಿ; ಬದುಕಿಗೆ ಇಲ್ಲವೇ ಇಲ್ಲ ಇಲ್ಲಿ ಖಾತರಿ…!!! |ಹರಪನಹಳ್ಳಿ: ಪವನ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಾರ್ಮಿಕರಿಗೆ ಕಾರ್ಯಭಾರದ ಅಧಿಕ ಹೊರೆ |

Vijayasiri News
error: Content is protected !!