ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಧರ್ಮಸ್ಥಳ ಸಮೀಪದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿದ ಅನಾಮಿಕ ದೂರುದಾರ ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನವನೇ…? ಇಂಥಹದೊಂದು ಸುದ್ದಿ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ಹರಿದಾಡುವ ಮೂಲಕ ಸಂಚಲನ ಮೂಡಿಸಿದೆ. ಜತೆಗೆ, ವಾಟ್ಸ್ಆಪ್ ನಲ್ಲಿ ಸುದ್ದಿ ಹರಿಬಿಟ್ಟಿರುವ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಯು.ಪಿ. ನಾಗರಾಜ್ ಜೈನ್ ಹಾಗೂ ಇನ್ನೊರ್ವ ಶುಭರೈ ಎಂಬ ಅನಾಮಧೇಯ ವ್ಯಕ್ತಿ ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ 13ರಂದು ಹರಪನಹಳ್ಳಿ ಪಟ್ಟಣದ ಬಿಜೆಪಿ ವಾಟ್ಸಪ್ ಗ್ರೂಪಿನಲ್ಲಿ 9611783677 ಸಂಖ್ಯೆಯಿಂದ ಗ್ರೂಪಿಗೆ ಅಪ್‌ಲೋಡ್ ಮಾಡಿರುವ ಸಂದೇಶದಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿರುವ ದೂರುದಾರನು ದಲಿತ ಸಮುದಾಯಕ್ಕೆ ಸೇರಿದ ಹರಪನಹಳ್ಳಿಯ ಕೊರಚರಹಟ್ಟಿಯ ಜನಾಂಗಕ್ಕೆ ಸೇರಿದವನಾಗಿದ್ದು, ಕೊರಚರಹಟ್ಟಿಯ ಹಿನ್ನೆಲೆಯನ್ನು ನೋಡುವುದಾದರೆ, ಡಕಾಯಿತಿ, ಕೊಲೆ, ಪಿಕ್‌ಪಾಕೇಟ್, ಸುಲಿಗೆ ಈ ಎಲ್ಲಾ ಕ್ರೈಂಗಳಿಗೆ ಕುಖ್ಯಾತಿ ಪಡೆದವರಾಗಿರುತ್ತಾರೆ…… ಎಂಬ ಸುದ್ದಿಯನ್ನು ಹರಿಬಿಟ್ಟಿದ್ದಾನೆ ಎನ್ನಲಾಗಿದೆ.
ಈ ಕುರಿತಂತೆ ಕೊರಚರ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಕೊರಚರ ಹೊನ್ನಪ್ಪ ಎಂಬುವವರು ಹರಪನಹಳ್ಳಿ ಠಾಣೆಗೆ ಮೇಲ್ಕಂಡ ಮೊಬೈಲ್ ಸಂಖ್ಯೆಯ ಯು.ಪಿ. ನಾಗರಾಜ್ ಜೈನ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಸ್ಥಳೀಯ ಬಿಜೆಪಿ ಮುಖಂಡ ಯು.ಪಿ. ನಾಗರಾಜ್ ಜೈನ್ ದಾಖಲಾಗಿರುವ ದೂರಿನಲ್ಲಿ ಎ-2 ಆಗಿದ್ದಾರೆ.
ವಾಟ್ಸಪ್ ಗ್ರೂಪಿಗೆ ಅಪ್‌ಲೋಡ್ ಮಾಡಿರುವ ಸಂದೇಶದ ವಿವರ ಇಂತಿದೆ:
ಭೀಮ… #ಭೀಮ.. #ಭೀಮ #ಪುರಾಣ #ಬನ್ನಿ #ಕೇಳೋಣ… #ಅಸಲಿಯತ್ತೇನು……⁉️
ಭೀಮ ಮೂಲತಃ ದಲಿತ ಸಮುದಾಯಕ್ಕೆ ಸೇರಿದ ಕೊರಚರ ಹಟ್ಟಿಯವ ಈಗಿನ ಹರಪ್ಪನಹಳ್ಳಿ ದಾವಣಗೆರೆ ಡಿಸ್ಟ್ರಿಕ್ಟ್…
ತನ್ನೂರಿನಲ್ಲಿ ಇರುವಾಗ ಈ ಭೀಮ ಕ್ರಿಶ್ಚಿಯನ್ ಕನ್ರ‍್ಟ್ಡ್.. ಹಾಗಾಗಿ ಇವನು ದಲಿತ್ ಕ್ರಿಶ್ಚಿಯನ್ ಇವರಿಗೆ ದಲಿತರ ಸೌಲಭ್ಯ ಬೇಕು ಹೋಗೋದು ಮಾತ್ರ ರ‍್ಚ್ ಗಳಿಗೆ…
ಇವ ೧೯೯೫ ರಲ್ಲಿ ರ‍್ಮಸ್ಥಳದ ನೇತ್ರಾವತಿ ಸ್ವಚ್ಛತಾ ಕೆಲಸಕ್ಕೆ ಸೇರಿದ ಸಮಯದಲ್ಲೂ ಕೂಡ ಜನರ ಕಣ್ತಪ್ಪಿಸಿ ರ‍್ಚ್ ಗಳಿಗೆ ಹೋಗುತ್ತಿದ್ದ…
ಈ ಕೊರಚರಹಟ್ಟಿಯ ಹಿನ್ನೆಲೆ ನೋಡೋದಾದ್ರೆ ಡಕಾಯಿತ, ಕೊಲೆ, ಪಿಕ್ ಪಾಕೆಟ್,ತ್ರೆಟ್ಟ್, ಸುಲಿಗೆ ಈ ಎಲ್ಲಾ ಕ್ರೈಂ ಗಳಿಗೆ ಕುಖ್ಯಾತಿ ಪಡೆದದ್ದು ಕ್ರೈಂ ರಿಪರ‍್ಟ್ ನಲ್ಲಿದೆ..
ಖ್ಯಾತ ಪತ್ರರ‍್ತರು ದಿ.ರವಿ ಬೆಳಗರೆಯವರು ಕೂಡ ಕೊರಚರ ಹಟ್ಟಿಯ ಒಬ್ಬನಿಗೆ ಗುಂಡು ಹಾರಿಸಿದ್ದು ನ್ಯೂಸ್ ಹೆಡ್ ಲೈನ್ ಓದಿದ್ದೇವೆ…
ಈ ಭೀಮ ೨೦೧೪ ರಲ್ಲಿ ಮನೆಯೊಳಗಿನ ಜಗಳ ಜೊತೆಗೆ ರ‍್ಮಸ್ಥಳದಲ್ಲಿ ಭಕ್ತರ, ನದಿಯಿಂದ ಮೇಲೆತ್ತಿದ ಶವಗಳಿಂದ ಬಂಗಾರ ಕದಿಯುವುದು, ಮೊಬೈಲ್ ಕದಿಯುವುದು ಈ ಎಲ್ಲ ಕೃತ್ಯಗಳು ಮನಗಂಡ ಆಡಳಿತ ಮಂಡಳಿ ಕಿತ್ತು ಎಸೆದಿತ್ತು.
ನಂತರ ಉಜಿರೆಯಲ್ಲೇ ವಾಸವಿದ್ದ ಇವನದೇ ಸಮುದಾಯದ ರತ್ನಾ ಎಂಬಾಕೆ
ಉಜಿರೆ ಸರ‍್ವಜನಿಕ ಶೌಚಾಲಯವನ್ನು ನೋಡಿಕೊಳ್ಳಲು ೨೦೧೯ ರಲ್ಲಿ ಮತ್ತೆ ಕೆರೆಸಿಕೊಂಡಳು.
೨೦೨೧ ರಲ್ಲಿ ತನಗೆ ಊರಿಗೆ ಹೋಗಲಿದೆ ಅಂತ ಉಜಿರೆಯ ಉದ್ಯಮಿ ಒಬ್ಬರಲ್ಲಿ ಹಣ ಪಡೆದು ತೆರಳಿದವ ಇದೇ ಈಗ ಭೀಮ ಆಗಿ ಬಂದವ…
ಈ ಭೀಮನ ಸಂರ‍್ಕ ತಿಮರೋಡಿ # ಬಳಗಕ್ಕೆ ಮೊದಲೇ ಇತ್ತು .ಈ ಎಲ್ಲಾ ಹಿನ್ನಲೆಯನ್ನು SIT ತಂಡ ಭೇಧಿಸಬೇಕಿದೆ..
ಈ ಸೃಷ್ಟಿಯಾದ ಬುರುಡೆ ಕಥೆಯ ಹಿಂದೆ ಯಾರೆಲ್ಲ ಶಾಮೀಲಾಗಿದ್ದಾರೆ ಅನ್ನೋದನ್ನು ಕೂಡ SIT ತನಿಖೆಗೆ ಒಳಪಡಿಸಿ ಬಹಿರಂಗಗೊಳಿಸಬೇಕು.
ಈ ತನಿಖೆಯಲ್ಲಿ ಯಾವುದೇ ಹಸ್ತ ಕ್ಷೇಪ ಮಾಡುವ ಹಾಗಿಲ್ಲ ಕಾರಣ ಇದರಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಕೇಂದ್ರದ ತನಿಖಾ ಸಂಸ್ಥೆಯೂ ಕೂಡ ತನಿಖೆ ನಡೆಸುವ ಎಲ್ಲಾ ಸಾಧ್ಯತೆ ಗಳು ಇವೆ..
ಹಾಗಾಗಿ ಭೀಮನ ಪರ‍್ವಪರ ತಿಳಿದು ಹೆಚ್ಚಿನ ತನಿಖೆಗೆ ಒಳಪಡಿಸಬೇಕು. ಇವನನ್ನು ಬಳಸಿಕೊಂಡು ವೈಯುಕ್ತಿಕ ದ್ವೇಷದ ಬೇಳೆ ಬೇಯಿಸಿ ಕೊಳ್ಳಲು ಹಿಂದೆ ಇರುವ ಜೀವಂತ ಬುರುಡೆಗಳನ್ನು ಕೂಡ ಜೈಲಿಗೆ ಅಟ್ಟಬೇಕು.
ಸೃಷ್ಟಿಸಿದ ಬುರುಡೆ ಕೇಸಿನ ನಷ್ಟಗಳನ್ನು ಜೊತೆಗೆ ಸರ‍್ವಜನಿಕರ ಹಿತಾಸಕ್ತಿ ಗೆ, ರ‍್ಮಸ್ಥಳದ ಕೋಟ್ಯoತರ ಭಕ್ತರ ಅಸ್ಮಿತೆಗೆ ಘಾಸಿ ಗೊಳಿಸಿದ
ಭೀಮನ ಜೊತೆ ಭೀಮನ ಸಂರ‍್ಕದಲ್ಲಿದ್ದ ಈ ಕಥೆಯ ನರ‍್ಮಾಪಕರು, ನರ‍್ದೇಶಕರು, ನಾಯಕನಟ, ಸಂಗಡಿಗರು ಎಲ್ಲರನ್ನೂ ವಶಕ್ಕೆ ಪಡೆದು ಸೂಕ್ತ ತನಿಖೆ ಆಗಿ ಶಿಕ್ಷೆ ಯಾಗಲೇಬೇಕು..
Shubha Rai


ಹರಪನಹಳ್ಳಿಯ ಪಟ್ಟಣದ ಬಿಜೆಪಿ ಗ್ರೂಪಿನಲ್ಲಿ ಈ ತರಹದ ಸಂದೇಶ ಹರಿದಾಡುತ್ತಿದ್ದಂತಿಯೇ, 13ರಂದು ರಾತ್ರಿ ಹರಪನಹಳ್ಳಿ ತಾಲ್ಲೂಕಿನ ಕೊರಚರ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕೊರಚರ ಹೊನ್ನಪ್ಪ ಎಂಬುವವರು ಠಾಣೆಗೆ ದೂರು ನೀಡಿದ್ದು, ಈ ಸಂದೇಶವನ್ನು ಹರಿಬಿಡುವ ಮೂಲಕ ನಮ್ಮ ಕೊರಚರ ಸಮುದಾಯವನ್ನು ಅವಮಾನಿಸಿದ್ದಾರೆ. ಜತೆಗೆ, ನಮ್ಮ ಸಮುದಾಯದ ಬಗ್ಗೆ ಅನ್ಯಸಮುದಾಯದವರು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಸದರಿ ಸಂದೇಶದಲ್ಲಿನ ಭೀಮ ಎಂಬ ವ್ಯಕ್ತಿಗೂ ನಮ್ಮ ಸಮಾಜಕ್ಕೂ ಹಾಗೂ ನಮ್ಮ ಹರಪನಹಳ್ಳಿ ತಾಲ್ಲೂಕಿಗೂ ಯಾವುದೇ ಸಂಬಂಧವೇ ಇರುವುದಿಲ್ಲ. ಸದರಿ ಮೇಲ್ಕಂಡ ವ್ಯಕ್ತಿಯೂ ಸತ್ಯಾಸತ್ಯತೆ ಹರಿಯದೇ, ನಮ್ಮ ಸಮಾಜವನ್ನು ಅವಮಾನಕರ ರೀತಿಯಲ್ಲಿ ಬಿಂಬಿಸಿದ್ದಾರೆ. ನಮ್ಮ ಸಮಾಜದವರು ಧರ್ಮಸ್ಥಳದ ಬಗ್ಗೆಯಾಗಲಿ, ಧರ್ಮಸ್ಥಳದ ಧರ್ಮಾಧಿಕಾರಿ ಬಗ್ಗೆಯಾಗಲಿ ಯಾವತ್ತೂ ಕೆಟ್ಟದಾಗಿ ಮಾತನಾಡುವುದಿಲ್ಲ. ನಮಗೆ ಧರ್ಮಸ್ಥಳದ ಮಂಜುನಾಥನ ಬಗ್ಗೆ ಅಪಾರವಾದ ಭಕ್ತಿ ಇರುತ್ತದೆ ಎಂದು ಹೊನ್ನಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಜತೆಗೆ, ಸಂದೇಶ ಹರಿಬಿಟ್ಟಿರುವ ವ್ಯಕ್ತಿಯೂ ನಮ್ಮ ಸಮಾಜವನ್ನು ಅವಹೇಳನಕಾರಿಯಾಗಿ ನಿಂದಿಸಿರುವುದು ಸಹ ನಮಗೆ ನೋವುಂಟು ಮಾಡಿದೆ. ಹೀಗಾಗಿ, ಸದರಿ ವ್ಯಕ್ತಿ ವಿರುದ್ಧ ಜಾತಿನಿಂದನೆ ಪ್ರಕರಣವೂ ಸೇರಿದಂತೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹೊನ್ನಪ್ಪ ಎಂಬುವವರು ನೀಡಿದ ದೂರಿನಲ್ಲಿ ಕೋರಿದ್ದಾರೆ.
ಕೊರಚರ ಹೊನ್ನಪ್ಪ ಎಂಬ ಕೊರಚರ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ನೀಡಿರುವ ದೂರನ್ನು ಸ್ವೀಕರಿಸಿರುವ ಹರಪನಹಳ್ಳಿ ಠಾಣೆ ಪೊಲೀಸರು ಎನ್‌ಸಿ ನಂಬರ್ 31/2025ರ ಅಡಿ ನೋಂದಾಯಿಸಿಕೊಂಡು, ನ್ಯಾಯಾಲಯದ ಅನುಮತಿಯ ಮೇರೆ ಗುನ್ನೆ ನಂಬರ್ : 188/ 2025ರ ಕಲಂ 353(1)(ಸಿ) ಬಿಎನ್‌ಎಸ್ ರೀತ್ಯ ಆಗಸ್ಟ್ 16, 2025ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸದರಿ ಸಂದೇಶವನ್ನು ಯು.ಪಿ. ನಾಗರಾಜ್ ಜೈನ್ ಅವರೇ ಅಪ್‌ಲೋಡ್ ಮಾಡಿದ್ದಾರೋ? ಇಲ್ಲವೇ ಶುಭರೈ ಎಂಬುವವರ ಸಂದೇಶವನ್ನು ಪಾರ್ವರ್ಡ್ ಮಾಡಿದ್ದಾರೋ ತನಿಖೆಯಿಂದ ಬಯಲಾಗಬೇಕಿದೆ.

