Vijayasiri News
ತಾಲ್ಲೂಕು ಸುದ್ದಿ

ಹೊಸಕೋಟೆ ಗ್ರಾ.ಪಂ. ಅಧ್ಯಕ್ಷರ ಚುನಾವಣೆ: ಆಶಾ ಅಣ್ಣಪ್ಪ ಅವಿರೋಧ ಆಯ್ಕೆ

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ತಾಲ್ಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ಹೊಸಕೋಟೆ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಕೋಣನಕಟ್ಟೆ ಗ್ರಾಮದ ಸದಸ್ಯೆ ಆಶಾ ಅಣ್ಣಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಪಂಚಾಯ್ತಿ ಕೋಣನಕಟ್ಟೆ ಗ್ರಾಮದಿಂದ ಆಯ್ಕೆಯಾದ ಮೊದಲ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೂ ಅಶಾ ಅಣ್ಣಪ್ಪ ಅವರು ಮುನ್ನುಡಿ ಬರೆದಿದ್ದಾರೆ. ಈ ಗ್ರಾಮದಿಂದ ಆಯ್ಕೆಯಾದ ಯಾವ ಸದಸ್ಯರಿಗೂ ಇದುವರೆಗೂ ಅಧ್ಯಕ್ಷ ಸ್ಥಾನ ಅಲಂಕರಿಸುವ ಯೋಗ ಕೂಡಿಬಂದಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಅಶಾ ಅಣ್ಣಪ್ಪ ಅವರು, ಅಧ್ಯಕ್ಷ ಸ್ಥಾನ ಅಲಂಕರಿಸುವ ಮೂಲಕ ಪಂಚಾಯ್ತಿ ಆಡಳಿತ ಮಂಡಳಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.
ಪಂಚಾಯ್ತಿಯ ಅಧ್ಯಕ್ಷರಾಗಿದ್ದ ಎಚ್. ಕರಿಬಸಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.
ಹೊಸಕೋಟೆ ಗ್ರಾಮ ಪಂಚಾಯ್ತಿ ಕಚೇರಿಯ ಸಭಾಂಗಣದಲ್ಲಿ ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಗಿರೀಶ್‌ಬಾಬು ಅವರು ಚುನಾವಣಾ ಪ್ರಕ್ರಿಯೆ ಆರಂಭಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆ ಬಯಸಿ ಆಶಾ ಅಣ್ಣಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಚುನಾವಣೆಗಾಗಿ, ನಾಮಪತ್ರ ಸಲ್ಲಿಸುವ ಅಚಿತಿಮ ಸಮಯದವರೆಗೂ ಬೇರೆ ಯಾವ ಸದಸ್ಯರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ, ತಹಶೀಲ್ದಾರ್ ಗಿರಿಶ್‌ಬಾಬು ಅವರು, ಅಧ್ಯಕ್ಷ ಸ್ಥಾನಕ್ಕೆ ಆಶಾ ಅಣ್ಣಪ್ಪ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆಶಾ ಅಣ್ಣಪ್ಪ ಅವರು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಬಳಿಕ, ಪಂಚಾಯ್ತಿಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಆಶಾ ಅಣ್ಣಪ್ಪ ಅವರನ್ನು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಗಿರೀಶ್‌ಬಾಬು ಹಾಗೂ ಉಪಾಧ್ಯಕ್ಷೆ ಕವಿತಮ್ಮ ವಿರೇಶ್ ಮತ್ತು ಸದಸ್ಯರು ಅಭಿನಂದಿಸಿದರು.

ಪAಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಆಶಾ ಅಣ್ಣಪ್ಪ ಅವರು ಈ ಸಂಧರ್ಭದಲ್ಲಿ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಐದು ಹಳ್ಳಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಅಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಹಾಗೂ ಅಧಿಕಾರಿಗಳ ಜತೆ ಸಮನ್ವಯತೆ ಸಾಧಿಸಿ, ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಅಭಿವೃದ್ಧಿ ಕಾರ್ಯದಲ್ಲಿ ಎಲ್ಲಾ ಸದಸ್ಯರು, ಎಂದಿನAತೆ ತಮ್ಮ ಜತೆಗೆ, ಕೈಜೋಡಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ನಾನು ಪ್ರತಿನಿಧಿಸುವ ಗ್ರಾಮಕ್ಕೆ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸುವ ಭಾಗ್ಯ ಕೂಡಿ ಬಂದಿದೆ. ಈ ಅವಕಾಶಕ್ಕೆ ಇಡೀ ಪಂಚಾಯ್ತಿ ವ್ಯಾಪ್ತಿಯ ಸರ್ವ ಸದಸ್ಯರಿಗೂ ನಾನು ಅಭಿನಂದಿಸುತ್ತೇನೆ. ಹಾಗೇ, ನನ್ನನ್ನು ಆಯ್ಕೆ ಮಾಡಿದ ನನ್ನ ಗ್ರಾಮದ ಸಮಸ್ತ ನಾಗರಿಕ ಬಂಧುಗಳಿಗೆ ನಾನು ಋಣಿಯಾಗಿದ್ದೇನೆ ಎಂದು ಆಶಾ ಅಣ್ಣಪ್ಪ ಅವರು ಸಂತಸ ಹಂಚಿಕೊAಡರು.
ಈ ಸಂದರ್ಭದಲ್ಲಿ ಪಂಚಾಯ್ತಿ ಆಡಳಿತ ಮಂಡಳಿ ಉಪಾಧ್ಯಕ್ಷೆ ಕವಿತಮ್ಮ ವಿರೇಶ್, ಅಭಿವೃದ್ಧಿ ಅಧಿಕಾರಿ ಸಂಗಪ್ಪ, ಮುಖಂಡರಾದ ಪಿ.ಎಸ್. ವಿರೇಶ್, ಕಬ್ಬಳ್ಳಿ ಪಾಂಡುರAಗ, ಡಿ. ನಾಗಪ್ಪ, ಜಿ. ಅಮರೇಶ್, ಡಿ.ಶ್ರೀನಿವಾಸ್, ಬಿ. ರೇಣುಕಮ್ಮ ಹಾಗೂ ಪಂಚಾಯ್ತಿ ಎಲ್ಲಾ ಸದಸ್ಯರು ಹಾಜರಿದ್ದರು.

Related posts

ರಸಗೊಬ್ಬರದ ಕೃತಕ ಅಭಾವ ಸೃಷ್ಟಿ; ಬಿಜೆಪಿ ಆರೋಪ, ರೈತರ ನೆರವಿಗೆ ಧಾವಿಸದ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ: ಲಿಂಬ್ಯಾನಾಯ್ಕ್

Vijayasiri News

ಕೊನ್ನಾಪುರ ಚೌಡೇಶ್ವರಿದೇವಿ ಕಾಪಾಡಮ್ಮ…ಈ ದೇವಸ್ಥಾನಕ್ಕೆ ತಲುಪಲು ರಸ್ತೆಯೋ… ಇಲ್ಲವೇ ಕೆಸರು ಗದ್ದೆಯೋ…?

admin

ಅಣಜಿಗೆರೆ ಗ್ರಾಮದಲ್ಲಿ ರಕ್ತದಾನ ಶಿಬಿರ

admin

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News

ಹೊರಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಮನವಿ ಒಂಭತ್ತು ತಿಂಗಳಿನಿಂದಲೂ ಕೈಸೇರದ ವೇತನ; ಬೀದಿಗೆ ಬಿದ್ದ ಕಾರ್ಮಿಕರ ಬದುಕು: ನಿಯೋಗದ ಆಕ್ರೋಶ

admin

ಹರಪನಹಳ್ಳಿ: ನಗರದ ಎಚ್‌ಪಿಎಸ್ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ಭವಿಷ್ಯದ ಬದುಕಿನ ಮಾರ್ಗದರ್ಶಕರಾದ ಪೋಷಕರು- ಗುರುಗಳು ನಮಗೆ ಆದರ್ಶರಾಗಬೇಕಿದೆ: ಡಾ. ಶಿವಕುಮಾರ್

Vijayasiri News
error: Content is protected !!