Vijayasiri News
ಜಿಲ್ಲೆಗಳುತಾಲ್ಲೂಕು ಸುದ್ದಿನಮ್ಮೂರ ಸುದ್ದಿಹರಪನಹಳ್ಳಿ ಸುದ್ದಿ

ಹೊರಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಮನವಿ ಒಂಭತ್ತು ತಿಂಗಳಿನಿಂದಲೂ ಕೈಸೇರದ ವೇತನ; ಬೀದಿಗೆ ಬಿದ್ದ ಕಾರ್ಮಿಕರ ಬದುಕು: ನಿಯೋಗದ ಆಕ್ರೋಶ


ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ವಿಳಂಬ ನೀತಿಯನ್ನು ವಿರೋಧಿಸಿ, ಅಲ್ ಇಂಡಿಯಾ ಟ್ರೇಡ್ ಯುನಿಯನ್ ಕಾಂಗ್ರೆಸ್ (ಎಐಟಿಯುಸಿ) ತಾಲೂಕು ಘಟಕದ ನೇತೃತ್ವದಲ್ಲಿ ಹೊರಗುತ್ತಿಗೆ ಕಾರ್ಮಿಕರ ನಿಯೋಗ, ಗುರುವಾರ ಅರಸೀಕೆರೆ ಗ್ರಾಮದ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೂಲಕ, ತಾಲೂಕು ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ನಿಯೋಗದ ನೇತೃತ್ವವಹಿಸಿದ್ದ ಸಂಘಟನೆಯ ರಾಜ್ಯಸಮಿತಿ ಸದಸ್ಯ ಗುಡಿಹಳ್ಳಿ ಹಾಲೇಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ತಾಲೂಕಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು ೧೫೦ಕ್ಕೂ ಅಧಿಕ ಕಾರ್ಮಿಕರು, ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಗುತ್ತಿಗೆ ಪಡೆದುಕೊಂಡಿರುವ ಏಜೆನ್ಸಿ ನಿಗದಿತ ಸಮಯದ ಒಳಗೆ ವೇತನವನ್ನ ಪಾವತಿಸದಿರುವ ಹಿನ್ನೆಲೆಯಲ್ಲಿ ಈ ೧೫೦ಕಾರ್ಮಿಕರ ಕುಟುಂಬಗಳ ಜೀವನ ನಿರ್ವಹಣೆಗೆ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂಭತ್ತು ತಿಂಗಳಿನಿAದಲೂ, ವೇತನ ಕೈಸೇರದ ಹಿನ್ನೆಲೆಯಲ್ಲಿ ಕಾರ್ಮಿಕರ ಪರಿಸ್ಥಿತಿ ಅಯೋಮಯವಾಗಿದೆ. ಕೂಡಲೇ, ವೇತನ ಪಾವತಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ನಿಗದಿತ ಅವಧಿಯೊಳಗೆ ವೇತನ ಪಾವತಿಸುವುದು ಗುತ್ತಿಗೆದಾರ ಏಜೆನ್ಸಿಯ ಜವಾಬ್ದಾರಿಯಾಗಿದೆ. ಆದರೆ, ಹೆಚ್ಚುಕಡಿಮೆ ಒಂದು ವರ್ಷ ಪೂರೈಸುವ ಹಂತದಲ್ಲಿದ್ದರೂ, ಸಹ, ಗುತ್ತಿಗೆದಾರ ಏಜೆನ್ಸಿ ವೇತನವನ್ನು ಪಾವತಿಸದೇ, ಕಾರ್ಮಿಕವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಜತೆಗೆ, ಸಾಮಾಜಿಕ ಭದ್ರತೆ, ಕೆಲಸದ ಅವಧಿ ಇತ್ಯಾದಿಗಳನ್ನು ಸಹ, ಪರಿಪಾಲಿಸದೇ, ಬೇಕಾಬಿಟ್ಟಿಯಾಗಿ ನಡೆದುಕೊಳ್ಳುವ ಮೂಲಕ, ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಒಂದು ರೀತಿಯಲ್ಲಿ ಜೀತಕ್ಕೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಗುಡಿಹಳ್ಳಿ ಹಾಲೇಶ್ ಅವರು ಗುತ್ತಿಗೆದಾರ ಏಜೆನ್ಸಿ ಹಾಗೂ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಯುವಜನ ಫೆಡರೇಷನ್(ಎಐವೈಎಫ್) ತಾಲೂಕು ಕಾರ್ಯದರ್ಶಿ ಯರಬಳ್ಳಿ ಅಭಿಷೇಕ್, ಕಾರ್ಮಿಕರಾದ ಅರಸೀಕೆರೆ ಮಲ್ಲಿಕಾರ್ಜುನ, ಕಸವನಹಳ್ಳಿ ಹನುಮಂತ, ಮಹೇಶ್ ಅರಸೀಕೆರೆ, ಫಕ್ಕೀರಮ್ಮ ಅರಸೀಕೆರೆ ಹಾಗೂ ಕಮಲಮ್ಮ ಸೇರಿದಂತೆ ನಿಯೋಗದಲ್ಲಿ ಹಲವರು ಹಾಜರಿದ್ದರು.


ನಿಗದಿತ ಸಮಯದ ಒಳಗೆ ವೇತನ ಕೈಸೇರದ ಹಿನ್ನೆಲೆಯಲ್ಲಿ ಈ ಕೆಲಸವನ್ನೇ ಅವಲಂಬಿಸಿರುವ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಜತೆಗೆ, ಆರೋಗ್ಯದಲ್ಲಿ ಸಮಸ್ಯೆ, ಕೌಟುಂಬಿಕ ನಿರ್ವಹಣೆ ಸೇರಿದಂತೆ ಎಲ್ಲದಕ್ಕೂ ಸಾಲಸೋಲ ಮಾಡಿಯೇ ಜೀವನ ಸರಿದೂಗಿಸುತ್ತಿದ್ದಾರೆ. ಹೀಗೆ, ವೇತನ ಪಾವತಿಯಲ್ಲಿ ಆಗುತ್ತಿರುವ ವಿಳಂಬಧೋರಣೆಯಿAದಾಗಿ, ಸಾಲಕೊಟ್ಟವರ ಉಪದ್ರವವೂ ಹೆಚ್ಚಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ಗಂಭೀರ ಸಮಸ್ಯೆಯನ್ನು ಏಜೆನ್ಸಿ ಹಾಗೂ ಇಲಾಖೆ ಎದುರಿಸಬೇಕಾಗುತ್ತದೆ ಎಂದು ಹಾಲೇಶ್ ಅವರು ಎಚ್ಚಿರಿಕೆ ನೀಡಿ, ಕಾರ್ಮಿಕ ನ್ಯಾಯಸಮ್ಮತ ಭವಿಷ್ಯನಿಧಿ ಹಾಗೂ ಇಎಸ್‌ಐ ಸೌಲಭ್ಯದೊಂದಿಗೆ ಕೂಡಲೇ ವೇತನ ಪಾವತಿಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ, ಅನಿರ್ಧಿಷ್ಟಾವಧಿಯ ಧರಣಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Related posts

ಮಾನವೀಯಮೌಲ್ಯಗಳ ಮಾರ್ಗದರ್ಶಿ; ಪರಿಸರ ಚಾಕರಿಕೆ ಪ್ರವೃತ್ತಿಯ ಉಪನ್ಯಾಸಕ, ಹರಪನಹಳ್ಳಿ: ಉಪನ್ಯಾಸಕ ಶಿವಾನಂದ ಮುಡಿಗೇರಿದ ‘ರಾಜೀವ್‌ಗಾಂಧಿ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’

Vijayasiri News

ಸಿರವಾರ: ಬುದ್ದಿನ್ನಿ ಚಿನ್ನದಗಣಿ ಪ್ರದೇಶಕ್ಕೆ ತಹಶೀಲ್ದಾರ್ ಪವಾರ್ ಭೇಟಿ, ವೀಕ್ಷಣೆ

Vijayasiri News

ಅರಸೀಕೆರೆ ಗ್ರಾ.ಪಂ. ಅಧ್ಯಕ್ಷರ ಚುನಾವಣೆ: ಪಿ. ಕೆಂಚಮ್ಮ ಅವಿರೋಧ ಆಯ್ಕೆ

admin

ಹೂವಿನಹಡಗಲಿಯಲ್ಲಿ ಸಿಪಿಐ ಪಕ್ಷದ ನಾಲ್ಕನೇ ತಾಲ್ಲೂಕು ಸಮ್ಮೇಳನಕ್ಕೆ ಚಾಲನೆ, ದುಡಿಯುವ ವರ್ಗದ ಹಿತ ಕಾಯುವಲ್ಲಿ ಸರ್ಕಾರಗಳು ವೈಫಲ್ಯವಾಗಿವೆ: ಎಚ್.ಎಂ. ಸಂತೋಷ್ ಆರೋಪ

Vijayasiri News

ಹರಪನಹಳ್ಳಿ: ಕೆಜಿವಿಎಸ್‍ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

Vijayasiri News

ಅರಸೀಕೆರೆ: ಕಲುಷಿತ ಕುಡಿಯುವ ನೀರು ಪೂರೈಕೆ; ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ, ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ಕೊರೆಯಿಸಿ ಕೊಡುವುದಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಭರವಸೆ; ಪ್ರತಿಭಟನೆ ಸ್ಥಗಿತ

Vijayasiri News
error: Content is protected !!