Vijayasiri News
ನಮ್ಮೂರ ಸುದ್ದಿವಿಜಯನಗರಹೂವಿನಹಡಗಲಿ

ಭಾವೈಕ್ಯತ ತಪೋಭೂಮಿ ಚೌಕಿಮಠದಲ್ಲಿ ಮಹಾ ಕಾರ್ತೀಕೋತ್ಸವ ಹಾಗೂ ದೀಪೋತ್ಸವ

ವಿಜಯಸಿರಿನ್ಯೂಸ್. ಕಾಂ/ಹೂವಿನಹಡಗಲಿ

ಅದೊಂದು ಭಾವೈಕ್ಯತೆಯ ತಪೋಭೂಮಿ. ಜಾತಿ, ಧರ್ಮಗಳ ಮಧ್ಯೆ ಕಿತ್ತಾಡುತ್ತಿರುವ ಈ ಸಂಕೀರ್ಣತೆಯ ಕಾಲಘಟ್ಟದಲ್ಲಿ, ಧರ್ಮ- ಧರ್ಮಗಳ ನಡುವೆ ಭಾತೃತ್ವ ಬೆಸೆಯುವ, ಜಾತಿ- ಕುಲಗಳನ್ನು ಒಗ್ಗೂಡಿಸುವ ಮತ್ತು ವಿವಿಧ ಧರ್ಮಗಳ ನಡುವೆ ಪರಸ್ಪರ ಅನೋನ್ಯತೆಯ ಮಧುರ ಬಾಂಧವ್ಯ ಬೆಸೆಯುವ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಪ್ರಚಾರಕ್ಕೆ ಹಾತೊರೆಯದೇ, ಎಲ್ಲಿಯೂ ತನ್ನನ್ನು ತಾನು ಬಿಂಬಿಸಿಕೊಳ್ಳದೇ, ಮಲುಕುಲದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸದ್ಗುರು ಗಾಡಿತಾತ ಅಸಂಖ್ಯಾತ ಭಕ್ತರ ಆರಾಧ್ಯದೈವವಾಗಿ ಅವತರಿಸಿದ್ದಾನೆ. ಅಂಥಹ ಮಹಾಮಹಿಮಾನ ಸ್ಮರಣಾರ್ಥ ಈ ತಪೋಭೂಮಿಯ ಆವರಣದಲ್ಲಿ ನೆಲೆಯೂರಿರುವ ಶ್ರೀ ಚೌಡೇಶ್ವರಿದೇವಿ, ಶ್ರೀ ಆಂಜನೇಯ ಗದ್ದುಗೆ, ಶ್ರೀ ಮಹಬೂಬ್ ಸುಭಾಹಾನಿ ಗದ್ದುಗೆ ಹಾಗೂ ಶ್ರೀ ಪತ್ರಿಬಸವೇಶ್ವರ ಗದ್ದುಗೆ ಈ ಎಲ್ಲಾ ದಿವ್ಯ ಮಹಾ ಶಕ್ತಿಸ್ವರೂಪಿಣಿ ದೈವತ್ವಗಳ ಮಹಾಕಾರ್ತಿಕೋತ್ಸವ ಹಾಗೂ ದೀಪೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಭಾವೈಕ್ಯತಾ ಪುಣ್ಯಕ್ಷೇತ್ರ ಸಿದ್ಧವಾಗಿದೆ.
ಈ ಮಹಾಮಹಿಮ, ಭಕ್ತರ ಇಷ್ಟಾರ್ಥ ಈಡೇರಿಸುವ ಮಹಾತಪಸ್ವಿ ನೆಲೆಬೀಡು ಎಲ್ಲಿಯದು ಅಂತೀರಾ… ? ಹಾಗಾದಾರೆ ಈ ಸ್ಟೋರಿ ಓದಿ…
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕೊಂಬಳಿ ಗ್ರಾಮದ ಹೊರವಲಯದಲ್ಲಿರುವ ಅರಭಾವಿ- ಚಳ್ಳಕೆರೆ ರಾಜ್ಯಹೆದ್ದಾರಿಗೆ ಹೊಂದಿಕೊAಡಿರುವ ಮಹಾತಪಸ್ವಿ, ಮಹಾಮಹಿಮ ಗಾಡಿತಾತನ ಸುಕ್ಷೇತ್ರವೇ ಈ ಚೌಕಿಮಠ. ಮಠದ ಅಂಗಳದಲ್ಲಿ ಗಾಡಿತಾತನ ಕರ್ತೃ ಗದ್ದುಗೆಯ ಜತೆಗೆ, ಸಂತ ಮಹಬೂಬ್ ಸುಬಾನಿ ದರ್ಗಾ, ಶ್ರೀ ಆಂಜನೇಯಸ್ವಾಮಿ ಗದ್ದುಗೆ, ಮಹಾಮಾತೆ ಶ್ರೀ ಚೌಡೇಶ್ವರಿದೇವಿ, ಶ್ರೀ ಪತ್ರಿಬಸವೇಶ್ವರ ಗದ್ದುಗೆ ಹಾಗೂ ಸಿಂಗಟಾಲೂರು ವೀರಭದ್ರೇಶ್ವರಸ್ವಾಮಿ ದೇಗುಲಕ್ಕೆ ಸಂಪರ್ಕ ಬೆಸೆಯುತ್ತಿದೆ ಎನ್ನಲಾದ ಪುರಾತನ ಗುಹೆ ಇದೆ. ಈ ಗುಹೆಯೊಳಗೆ ಗಾಡಿತಾತ ಅವರ ಮೂಲಕರ್ತೃ ಗದ್ದುಗೆಯೂ ಇದೆ. ಇಂಥಹ ವಿಭಿನ್ನ ಧಾರ್ಮಿಕ ಪರಂಪರೆಯ ಸಾರವನ್ನೇ ತನ್ನೊಡಲಲ್ಲಿಟ್ಟುಕೊಂಡಿರುವ ಈ ಚೌಕಿಮಠದ ಧಾರ್ಮಿಕ ಪರಂಪರೆಯ ಪೀಠಾಧಿಪತಿಯಾಗಿರುವ ಮಹಾನ್‌ಸಂತ, ಮಹಾತಪಸ್ವಿ ಗಾಡಿತಾತ ಅವರ ಅವಧಿಯಲ್ಲಿ ಚೌಕಿಮಠದ ಕೀರ್ತಿಪತಾಕೆ ನಾಡಿನ ದಶದಿಕ್ಕುಗಳಿಗೂ ವ್ಯಾಪಿಸಿದೆ. ಹಿಂದೂ- ಮುಸ್ಲಿಂರಾಧಿಯಾಗಿ, ಸರ್ವಜನಾಂಗದ ಭಕ್ತರು ಚೌಕಿಮಠಕ್ಕೆ ನಿತ್ಯವೂ ನಡೆದುಕೊಳ್ಳುತ್ತಿದ್ದಾರೆ. ದೂರದ ಬೆಂಗಳೂರಿನಿAದ ಹಿಡಿದು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ಚಿತ್ರದುರ್ಗ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳಿಂದಲೂ ಪ್ರತಿ ಅಮವಾಸ್ಯೆ ಹಾಗೂ ಶಿವರಾತ್ರಿಯ ಭಾವೈಕ್ಯತಾ ಉತ್ಸವ ಮತ್ತು ಕಾರ್ತೀಕ ಮಾಸದಲ್ಲಿ ಜರುಗುವ ಮಹಾದೈವತ್ವಗಳ ಕಾರ್ತೀಕೋತ್ಸವ ಹಾಗೂ ದೀಪೋತ್ಸವಕ್ಕಾಗಿ ಭಕ್ತಸಾಗರವೇ ಹರಿದುಬರುತ್ತಿದೆಸುಮಾರು ಎರಡೂವರೆ ಶತಮಾನಗಳಿಗೂ ಅಧಿಕ ಐತಿಹಾಸಿಕ ಹಿನ್ನೆಲೆ ಇರುವ ಚೌಕಿಮಠ ಹಲವು ಪವಾಡ ತಫೋಭೂಮಿ. ಚೌಕಿಮಠ ಆರಂಭಕ್ಕೂ ಮುನ್ನ ಈ ಪ್ರದೇಶದಲ್ಲಿ ಗಿಡ-ಗಂಟೆಗಳ ಬೆಳೆದುನಿಂತು, ಕಾಡುನಂತೆ ಇತ್ತು. ಇಂಥಹ ಕಾಡಿನಲ್ಲಿ ಶರಣರೊಬ್ಬರು, ಆಧ್ಯಾತ್ಮ ಸಾಧನೆ ಸಿದ್ಧಿಗಾಗಿ ತಂಗಿದ್ದರು. ಆ ಶರಣರು ಅಂದಿನ ಧಾರವಾಡ ಜಿಲ್ಲೆಯ ಆಡ್ನೂರು ಗ್ರಾಮದ ಹುಸೇನ್‌ಷಾವಲಿ ಸೂಫಿಗಳನ್ನು ತನ್ನ ಆರಾಧ್ಯದೈವವನ್ನಾಗಿ ಸ್ವೀಕರಿಸುವ ಮೂಲಕ ಅವರ ನಾಮಸ್ಮರಣೆಯನ್ನೇ ಉಸಿರಾಡತೊಡಗಿದರು. ಆ ಮಹಾತಪಸ್ವಿ ಸೂಫಿ ಹುಸೇನ್‌ಷಾವಲಿ ಸಂತನನ್ನು ತನ್ನ ಆಧ್ಯಾತ್ಮ ಕೇಂದ್ರಕ್ಕೆ ಕರೆಸುವ ಬಯಕೆಯನ್ನು ಹೊಂದಿದ್ದರು. ಹಠಯೋಗಿಯೂ ಆಗಿದ್ದ ಶರಣರು, ಹುಸೇನ್‌ಷಾವಲಿ ಸಂತರನ್ನು ಕರೆಸುವ ಮೂಲಕ ಅವರ ಕೃಪಾರ್ಶೀವಾದಿಂದ ಈ ಭಾಗದಲ್ಲಿ ಜನಜಾನುಗಳು ಅನುಭವಿಸುತ್ತಿದ್ದ ಸಂಕಷ್ಟಗಳನ್ನು ನಿವಾರಿಸುವ ಬಯಕೆಯನ್ನು ಆ ಶರಣರು ಹೊಂದಿದ್ದರು. ಹೀಗಾಗಿ, ಆ ಹುಸೇನ್‌ಷಾವಲಿ ಸಂತನನ್ನು ಕರೆತರುವ ಹಿನ್ನೆಲೆಯಲ್ಲಿ ೨೧ದಿನಗಳ ಕಾಲ, ಅನ್ನ- ನೀರು ತ್ಯಜಿಸಿ ಉಪವಾಸದಂತ ಕಠಿಣ ವೃತಕ್ಕೆ ಇಳಿಯುವ ಮೂಲಕ, ಹುಸೇನ್‌ಷಾವಲಿ ಶರಣರ ದೃಷ್ಟಿಗೆ ಬೀಳುತ್ತಾರೆ. ಇಂಥಹ ಆಧ್ಯಾತ್ಮ ಶರಣರ ವೃತಕ್ಕೆ ಮನಸೋತ ಆಡ್ನೂರು ಗ್ರಾಮದ ಸಂತ ಹುಸೇನ್ ಷಾವಲಿ ಅವರು, ಕೊಂಬಳಿ ಗ್ರಾಮದ ಕಡೆ ಸಂಚರಿಸಿದರು. ಬಳಿಕ, ಇಲ್ಲಿನ ಶರಣನ ಭಕ್ತಿಗೆ ಮಾರುಹೋಗಿ, ಮರುಮಾತನಾಡದೇ, ಈ ಪ್ರದೇಶವನ್ನೂ ತನ್ನ ಕರ್ಮಭೂಮಿಯನ್ನಾಗಿ, ಸ್ವೀಕರಿಸುವ ಮೂಲಕ, ಹುಸೇನ್‌ಷಾವಲಿ ಸಂತರು, ನೆಲೆಯೂರುತ್ತಾರೆ ಎನ್ನುತ್ತಾರೆ ಚೌಕಿಮಠದ ಭಕ್ತ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಪ್ರಾಣೇಶ್ ಪುರದ ಅವರು.
ಆ ಸಂದರ್ಭದಲ್ಲಿಯೇ ಕಡುಬೇಸಿಗೆ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಬಾವಿಯೊಂದನ್ನು ಅಗೆಯಲು, ಈಗಿನ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸೊನ್ನ ಗ್ರಾಮದ ಕಾರ್ಮಿಕರು, ಆಗಮಿಸುತ್ತಾರೆ. ಮಧ್ಯಾಹ್ನದ ಊಟಕ್ಕೆಂದು, ಆ ಪ್ರದೇಶದಲ್ಲಿನ ಬೇವಿನಮರದ ನೆರಳಿನಲ್ಲಿ ಕೂರುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿಯೇ, ಆಧ್ಯಾತ್ಮ ಜೀವಿಯಾಗಿದ್ದ ಶರಣರು, ಅಲ್ಲಿ ನಾಲ್ಕು ಕಲ್ಲುಗಳನ್ನು ಗುಡಿಯ ರೂಪದಲ್ಲಿ ಇಟ್ಟಿರುತ್ತಾರೆ. ಆದೇಕೋ ಏನೋ ಆ ಮಹಿಳೆಗೆ, ಶರಣರು ಇಟ್ಟಿದ್ದರು ಎನ್ನಲಾದ ಆ ಕಲ್ಲುಗಳಿಗೆ ಆ ಕಾರ್ಮಿಕರ ಪೈಕಿ, ಮಕ್ಕಳ ಸಂತಾನ ಇರದ ಓರ್ವ ಮಹಿಳೆಗೆ ಭಕ್ತಿಯ ಭಾವನೆಗಳಿಗೆ ಒಳಗಾಗಿ, ಶ್ರದ್ಧೆಯಿಂದ ಕೈಮುಗಿದು, ಬೇಡಿಕೊಂಡರAತೆ. ಕಾಲಂತರದಲ್ಲಿ ಆ ದಂಪತಿಗೆ ಸಂತಾನಭಾಗ್ಯ ದೊರೆಯುವ ಮೂಲಕ ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸದ ಹೊನಲು ಹರಿಯಲಾರಂಭಿಸಿತAತೆ. ಹೀಗಾಗಿ, ಆ ನಾಲ್ಕು ಕಲ್ಲುಗಳು, ಕೇವಲ ಕಲ್ಲುಗಳಲ್ಲ; ಅಗಾಧವಾದ ಮಹಾಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಸಾಕ್ಷಾತ್ ದೈವಸ್ವರೂಪಿ ಎಂದು ಭಾವಿಸಿ, ಅಲಿಯೇ, ಮಠವೊಂದನ್ನು ಕಟ್ಟಲು ಆರಂಭಿಸಿದರAತೆ. ಪಕ್ಕದಲ್ಲಿಯೇ ಮಠಕ್ಕೆ ಬರುವ ಭಕ್ತರಿಗೆ ನೀರಿನ ಬಾಯಾರಿಕೆ ನೀಗಿಸಲು ಬಾವಿಯನ್ನು ಅಗೆದರು ಎಂದು ಮಠದ ಇತಿಹಾಸವನ್ನು ಮೆಲಕು ಹಾಕುತ್ತಾರೆ ಪ್ರಾಣೇಶ್ ಅವರು.
ನಮ್ಮ ಧಾರ್ಮಿಕ ಪರಂಪರೆಯಲ್ಲಿ ಶರಣರು, ಸಂತರು, ಸೂಫಿಗಳಿಗೆ ವಿಶೇಷ ಸ್ಥಾನಮಾನವಿದೆ. ಲೌಕಿಕ ಬದುಕನ್ನು ಮರೆತು, ಅಲೌಕಿಕತೆ ಒಳಗಾಗಿ, ಸಾಮಾಜಿಕವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಹಲವು ಜೀವಂತ ಹಾಗೂ ದಂತಕತೆಗಳು ನಮ್ಮ ಕಣ್ಣಮುಂದೆ ಇವೆ. ಅಂಥಹ ಸರ್ವಸಂಗ ಪರಿತ್ಯಾಗಿಯೂ ಆದ ಹುಸೇನ್‌ಷಾವಲಿ ಶರಣರು, ತಮ್ಮ ಕುಟುಂಬದ ಲೌಕಿಕ ಬದುಕನ್ನು ತೊರೆದು, ಸಮಾಜಮುಖಿ ಅಲೌಕಿಕ ಬದುಕನ್ನು ಸ್ವೀಕರಿಸುತ್ತಾರೆ. ತಮ್ಮ ತಫೋಶಕ್ತಿ, ಆಧ್ಯಾತ್ಮಕ ಮಹಾಶಕ್ತಿಯಿಂದಾಗಿ, ಚಲಿಸುವ ರೈಲುಗಾಡಿಯನ್ನೇ ತಡೆಯುತ್ತಾರೆ. ಹೀಗಾಗಿಯೇ, ಇವರು ಗಾಡಿತಾತ ಎಂದೇ ಜನಮಾಸನದಲ್ಲಿ ನೆಲೆಯೂರುತ್ತಾರೆ.
ಇಂತಹ ಗಾಡಿತಾತ ಪರಂಪರೆಯರಲ್ಲಿ ಒಬ್ಬರಾದ ಈಗಿನ ಸ್ವಾಮೀಜಿ ಅವರು, ಮೂಲಕರ್ತೃ ಗಾಡಿತಾತನ ಆದರ್ಶಗಳನ್ನು, ತಪೋಶಕ್ತಿಗಳ, ಆಧ್ಯಾತ್ಮಕ ಚಿಂತನೆಗಳ ಸಾರವನ್ನೇ ಮೈಗೂಡಿಸಿಕೊಳ್ಳುವ ಮೂಲಕ ಚೌಕಿಮಠವನ್ನು ಅಲಂಕರಿಸಿದ್ದಾರೆ. ಈಗಿನ ಸದ್ಗುರು ಗಾಡಿತಾತ ಸ್ವಾಮೀಜಿ ಅವರ ಅವಧಿಯಲ್ಲಿ ಚೌಕಿಮಠ ಎಂಬುದು ನಾಡಿನೆಲ್ಲೆಡೆ ಪಸರಿಸುವ ಮೂಲಕ ಅಸಂಖ್ಯಾತ ಭಕ್ತರ ಬೇಕು- ಬೇಡಿಕೆಗಳನ್ನು, ಇಷ್ಟಾರ್ಥಗಳನ್ನು ಈಡೇರಿಸುವ ಸಾಕ್ಷಾತ್‌ದೈವಸ್ವರೂಪಿಯಾಗಿ ಭಕ್ತಸಮೂಹವನ್ನು ತನ್ನೆಡೆಗೆ ಸೂಜಿಗಲ್ಲಿನಂತೆ ಆಕರ್ಷಿಸುತ್ತಾರೆ.
ಹೊನ್ನನಾಂiÀiಕನಹಳ್ಳಿ, ಮೊದಲಗಟ್ಟೆ ಶಾಲೆಗಳಲ್ಲಿ ಅಕ್ಷರಾಭ್ಯಾಸ ಮಾಡಿರುವ ಗಾಡಿತಾತ ಅವರು, ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದಲ್ಲಿ ಪ್ರೌಢಶಿಕ್ಷಣ ಪಡೆದು, ಬಳಿಕ, ಕುಕುನೂರು ಗುರುಕುಲದಲ್ಲಿ ತಾಂತ್ರಿಕ ಶಿಕ್ಷಣವನ್ನು ಅಭ್ಯಾಸ ಮಾಡುತ್ತಾರೆ. ಅವರ ಶಿಕ್ಷಣಕ್ಕೆ ತಕ್ಕುದಾದ ಒಳ್ಳೆಯ ಹುದ್ದೆಯಲ್ಲಿಯೂ ವಿರಾಜಮಾನರಾಗಿರುತ್ತಿದ್ದರು. ಆದರೆ, ಇದ್ದಕ್ಕಿಂತೆ ನಡೆದ ಅಗೋಚರಶಕ್ತಿಯಿಂದಾಗಿ, ಎಲ್ಲವನ್ನೂ ತೊರೆದು, ಚೌಕಿಮಠದ ಪೀಠಾಧಿಪತಿ ಸ್ಥಾನವನ್ನು ಅಲಂಕರಿಸುವ ಮೂಲಕ ಶ್ರೀಮಠದ ಧರ್ಮಪರಂರಪೆಯನ್ನು ನಾಡಿನೆಲ್ಲೆಡೆ ಬೆಳಗಲು ಕಾರಣೀಭೂತರಾಗಿದ್ದಾರೆ.
ಮೂಢನಂಬಿಕೆ, ಕಂದಾಚಾರಗಳನ್ನು ಶರಂಪರವಾಗಿ ವಿರೋಧಿಸುವ ಗಾಡಿತಾತ ಅಜ್ಜನವರು, ಭಕ್ತರನ್ನು ಅಂಥಹ ಮೂಢನಂಬಿಕೆಗಳಿಂದ ದೂರ ಇರುವಂತೆ ಸಲಹೆ ನೀಡುತ್ತಾರೆ. ಸನ್ಮಾರ್ಗದಲ್ಲಿ ಬದುಕು ಕಟ್ಟಿಕೊಡುವ ಮಾರ್ಗದರ್ಶನ ನೀಡುತ್ತಾರೆ. ದ್ವೇಷ, ಅಸೂಯೆಗಳನ್ನು ತೊರೆದು, ಪರಸ್ಪರ- ಪ್ರೀತಿ, ವಿಶ್ವಾಸದ ಬದುಕು ಕಟ್ಟಿಕೊಳ್ಳಲು ನಿರ್ದೇಶನ ನೀಡುತ್ತಾರೆ. ಅದರೆ ಜತೆಯಲ್ಲಿ ತಮ್ಮಲ್ಲಿನ ಅಗೋಚರಶಕ್ತಿ, ಕರ್ತೃಗದ್ದುಗೆ ಆಶೀರ್ವಾದಿಂದಾಗಿ, ಭಕ್ತರ ಬಯಕೆಗಳನ್ನು ಈಡೇರಿಸುವ ಮಹಾಮಹಿಮನಾಗಿ ಭಕ್ತರ ಭಕ್ತಿಯ ಹೃದಯಾಳದಲ್ಲಿ ನೆಲೆಸಿದ್ದಾರೆ.
ಇಂಥಹ ಆಧ್ಯಾತ್ಮಿಕ ಭಾವೈಕ್ಯತೆಯ ಸಂದೇಶ ಸಾರುವ ಹಾಗೂ ಲಕ್ಷಾಂತರ ಭಕ್ತರ ಧಾರ್ಮಿಕ ಶ್ರದ್ಧಾ- ಕೇಂದ್ರವಾಗಿರುವ ಕೊಂಬಳಿ ಚೌಕಿಮಠದ ಭಾವೈಕ್ಯತ ಪೀಠದಲ್ಲಿ ಇದೇ ಡಿಸೆಂಬರ್ 18ರಂದು ಮಹಾಮಾತೆ ಶ್ರೀಚೌಡೇಶ್ವರಿದೇವಿ, ಸಂತ ಮಹಬೂಬ್‌ಸುಬಾನಿ ಗದ್ದುಗೆ, ಶ್ರೀ ಆಂಜನೇಯಸ್ವಾಮಿ ಗದ್ದುಗೆ ಹಾಗೂ ಶ್ರೀ ಪತ್ರಿಬಸವೇಶ್ವರ ಗದ್ದುಗೆಯ 14ನೇ ವರ್ಷದ ಕಾರ್ತೀಕೋತ್ಸವ ಹಾಗೂ ದೀಪೋತ್ಸವ ಆರಾಧನಾ ಕಾರ್ಯಕ್ರಮ ನಡೆಯಲಿದೆ. ಜತೆಗೆ, ಡಿ.19ರಂದು ಎಳ್ಳು ಅಮವಾಸ್ಯೆಯೂ ಇರುವುದರಿಂದ ಯಥಾಪ್ರಕಾರ ಶ್ರೀಮಠದಲ್ಲಿ ನಡೆಯಲಿರುವ ಮಾಸಿಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

Related posts

|| ಕೋಡಿಬಿದ್ದ ಕಲ್ಲಹಳ್ಳಿ ಕೆರೆ|| ಹರಪನಹಳ್ಳಿ: ಧಾರಾಕಾರ ಮಳೆ, ಮೈದುಂಬಿ ಹರಿಯುತ್ತಿವೆ ಕೆರೆ-ಕಟ್ಟೆಗಳು

Vijayasiri News

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News

ಅರಸೀಕೆರೆ: ಕಲುಷಿತ ಕುಡಿಯುವ ನೀರು ಪೂರೈಕೆ; ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ, ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ಕೊರೆಯಿಸಿ ಕೊಡುವುದಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಭರವಸೆ; ಪ್ರತಿಭಟನೆ ಸ್ಥಗಿತ

Vijayasiri News

ಪಂಚಾಯ್ತಿ ಆಡಳಿತದ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಕಲುಷಿತ ನೀರು ಪೂರೈಕೆ; ಸಾಂಕ್ರಾಮಿಕ ರೋಗದ ಆತಂಕದಲ್ಲಿ ಗ್ರಾಮಸ್ಥರು…!

Vijayasiri News

|| ತೆಲಿಗಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ || ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾನ ಶಿಕ್ಷಣದಿಂದ ಮಾತ್ರ ಮಗುವಿನ ಸಮಗ್ರ ಬೆಳವಣಿಗೆ ಸಾಧ್ಯ

Vijayasiri News

ಹೊರಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಮನವಿ ಒಂಭತ್ತು ತಿಂಗಳಿನಿಂದಲೂ ಕೈಸೇರದ ವೇತನ; ಬೀದಿಗೆ ಬಿದ್ದ ಕಾರ್ಮಿಕರ ಬದುಕು: ನಿಯೋಗದ ಆಕ್ರೋಶ

admin
error: Content is protected !!