ವಿಜಯಸಿರಿನ್ಯೂಸ್.ಕಾಂ/ ಹೂವಿನಹಡಗಲಿ
ವಿಜಯನಗರ ಜಿಲ್ಲೆಯ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಲಪ್ಪ ಅವರು, ಹೃದಯಾಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ರಾಜಸ್ಥಾನದ ಜೋಧಪುರದಲ್ಲಿ ಮಂಗಳವಾರ ನಿಧನರಾಗಾಗಿದ್ದಾರೆ.
ಮೂಲತಃ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಗ್ರಾಮದವರಾದ ಎಎಸ್‌ಐ ಹಾಲಪ್ಪ ಅವರು, 1993ರಲ್ಲಿ ಪೊಲೀಸ್ ಇಲಾಖೆಗೆ ನೇಮಕವಾಗಿದ್ದರು. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಂಧನದ ವಾರೆಂಟ್ ಹಿನ್ನೆಲೆಯಲ್ಲಿ ರಾಜ್ಯಸ್ಥಾನದ ಜೋಧಪುರಕ್ಕೆ ಒಬ್ಬ ಹೆಡ್‌ಕಾನಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್ ಜತೆ ರಾಜಸ್ಥಾನಕ್ಕೆ ತೆರಳಿದ್ದರು. ಜೋಧಪುರದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತ ಎಎಸ್‌ಐ ಹಾಲಪ್ಪ ಅವರ ಮೃತದೇಹವನ್ನು ಗುರುವಾರ ಜಿಲ್ಲೆಗೆ ತರುವ ನಿರೀಕ್ಷೆ ಇದ್ದು, ಹುಟ್ಟೂರು ಹಿರೇಹಡಗಲಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

