Vijayasiri News
ಬ್ಯಾಡಗಿಹಾವೇರಿ

ಬ್ಯಾಡಗಿ: ಖಾಸಗೀ ಬಸ್ ಉರುಳಿ ಇಬ್ಬರು ಪ್ರಯಾಣಿಕರ ಸಾವು, ಆರು ಜನರಿಗೆ ಗಂಭೀರ ಗಾಯ

ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗೀ ಬಸ್ ಒಂದು ಉರುಳಿಬಿದ್ದ ಪರಿಣಾಮ, ಬಾಲಕಿ ಹಾಗೂ ಓರ್ವ ಯುವಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರು ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೊಟೇಬೆನ್ನೂರು ಬಳಿ ಹಾದುಹೋಗಿರುವ ಪುಣೆ- ಬೆಂಗಳೂರು ರಾಷ್ಟಿçÃಯ ಹೆದ್ದಾರಿ- 48ರಲ್ಲಿ ಮಂಗಳವಾರ ಬೆಳಗಿನಜಾವ ಸಂಭವಿಸಿದೆ.
ಅಪಘಾತದಲ್ಲಿ ಹನ್ನೊಂದು ವರ್ಷದ ಅರ್ನವಿ ಹಾಗೂ ಯಶ್(20) ಯುವಕ ಸಾವನ್ನಪ್ಪಿರುವ ದುರ್ದೈವಿಗಳು. ಮೃತರ ಹಾಗು ಗಾಯಾಳುಗಳ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ. ಬಸ್ಸಿನಲ್ಲಿದ್ದ ಇನ್ನುಳಿದ 29 ಜನ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹಾವೇರಿಯ ಜಿಲ್ಲಾಸ್ಪತ್ರೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮಹಾರಾಷ್ಟçದ ಸಾಂಗ್ಲಿಯಿಂದ ತಮಿಳುನಾಡು ಕಡೆ ಹೊರಟಿದ್ದ ಖಾಸಗೀ ಬಸ್ ಮೊಟೇಬೆನ್ನೂರು ಬಳಿ ಚಲಿಸುತ್ತಿದ್ದಂತಿಯೇ ಮುಂದೆ ಇದ್ದ ಕಾರು ಅಡ್ಡ ಬಂದಿದ್ದರಿಂದ, ಕಾರ್‌ಗೆ ಅಪಘಾತವಾಗುವುದನ್ನ ತಪ್ಪಿಸಲು ಹೋದಾಗ, ಈ ದುರ್ಘಟನೆ ನಡೆದಿದೆ. ಮೊದಲು, ರಸ್ತೆಯಲ್ಲಿನ ವಿಭಜಕಕ್ಕೆ ಡಿಕ್ಕಿ ಹೊಡೆದ ಬಸ್, ಬಳಿಕ, ನಿಯಂತ್ರಣ ಕಳೆದುಕೊಂಡು, ಉರುಳಿಬಿದ್ದಿದೆ.
ಘಟನಾ ಸ್ಥಳಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪೊಲೀಸರು, ಅಗ್ನಿಶಾಮಕ ಹಾಗೂ ತುರ್ತುಸೇವಾ ಸಿಬ್ಬಂದಿ ಹಾಗೂ ಗಾಯಾಳುಗಳ ತುರ್ತು ರಕ್ಷಣಾ ಕಾರ್ಯಕ್ಕೆ ಮುಂದಾದರು. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

|| ಬ್ಯಾಡಗಿ: ಬನ್ನಿಹಟ್ಟಿ ಗ್ರಾಮದಲ್ಲಿ ಮರಡಿಬಸವೇಶ್ವರ ಸಮುದಾಯಭವನ ಲೋಕಾರ್ಪಣೆ || ದೇವಾಲಯಗಳು ನಮ್ಮ ಧಾರ್ಮಿಕ- ಸಾಂಸ್ಕೃತಿಕ ಪರಂಪರೆ ಪ್ರತೀಕ: ಶಾಸಕ ಶಿವಣ್ಣವರ

Vijayasiri News

ಪ್ರಥಮಪೂಜಿತ ವಿಘ್ನೇಶ್ವರನ ಉತ್ಸವಕ್ಕೆ ಕ್ಷಣಗಣನೆ, ಬ್ಯಾಡಗಿ: ಕಲಾವಿದರ ಕೈಚಳಕದಲ್ಲಿ ಅರಳಿರುವ ಅಲಂಕಾರಿಕ ಗಣೇಶಮೂರ್ತಿಗಳು

Vijayasiri News

ಬ್ಯಾಡಗಿ|| ಸಮ ಸಮಾಜದ ಸಾಮಾಜಿಕ ವ್ಯವಸ್ಥೆಗೆ ನುಲಿಯ ಚಂದಯ್ಯ ಬದುಕು; ಬರಹ ಸಾರ್ವಕಾಲಿಕ ಮಾದರಿ: ಶಾಸಕ ಶಿವಣ್ಣವರ

Vijayasiri News

ಬ್ಯಾಡಗಿ: ಬೆಳೆಯಲ್ಲಿ ನಿಯಂತ್ರಣಕ್ಕೆ ಬಾರದ ಕಳೆ, ಮೆಕ್ಕೆಜೋಳದ ಬೆಳೆಯಲ್ಲಿ ಮಹಾಮಾರಿ ‘ಮುಳ್ಳುಸಜ್ಜೆ’ ಕಳೆ: ಕಂಗಾಲಾದ ಅನ್ನದಾತ

Vijayasiri News

ಬ್ಯಾಡಗಿ: ಸಂಕಷ್ಟಕ್ಕೆ ಸಿಲುಕಿದ ರೈತಾಪಿ ಸಮುದಾಯ, ಕಾಡುಹಂದಿಗಳ ದಾಳಿ; ಕಾಳುಕಟ್ಟುವ ಹಂತದಲ್ಲಿದ್ದ ಗೋವಿನಜೋಳ ಬೆಳೆ ನಾಶ

Vijayasiri News

|| ಬ್ಯಾಡಗಿ: ಕಲ್ಲೆದೇವರ ಗ್ರಾಮದಲ್ಲಿ ಗ್ರಂಥಾಲಯ ಪಿತಾಮಹ ಡಾ. ರಂಗನಾಥನ್ ಜಯಂತ್ಯುತ್ಸವ ||ಪುಸ್ತಕಗಳಿಂದ ದೊರೆಯುವ ಜ್ಞಾನದ ಮುಂದೆ ಇನ್ನಾವ ಸಾಧನೂ ಸರಿಸಾಟಿಯಾಗಲಾರದು: ಪ್ರವೀಣ

Vijayasiri News
error: Content is protected !!