Vijayasiri News
ಜಿಲ್ಲೆಗಳುನಮ್ಮೂರ ಸುದ್ದಿ

|| ವಲಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭ || ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವ ಹೆಚ್ಚಾಗಲಿ: ವೈ.ಡಿ. ಲಕ್ಷ್ಮೀದೇವಿ ಅಣ್ಣಪ್ಪ

ವಿಜಯಸಿರಿನ್ಯೂಸ್.ಕಾಂ/ಅರಸೀಕೆರೆ
ಆಟದ ಮೈದಾನದ ಅಖಾಡಕ್ಕಿಳಿಯುವ ಪ್ರತಿಯೊಬ್ಬ ಕ್ರೀಡಾಪಟುವಿಗೂ, ಗೆಲುವಿನ ಜಯಭೇರಿ ಬಾರಿಸಬೇಕೆಂಬ ಅದಮ್ಯ ಆಕಾಂಕ್ಷೆ ಸಹಜ. ಆದರೆ, ‘ವಿಜಯಪತಾಕೆ’ ಒಬ್ಬರಿಗೆ ಇಲ್ಲವೇ; ಒಂದು ತಂಡದ ಪಾಲಾಗುವುದು ಸ್ಪರ್ಧೆಯ ನಿಯಮ. ಹೀಗಾಗಿ, ಕ್ರೀಡೆಯಲ್ಲಿ ಸೋಲು; ಗೆಲುವುಗಳಿಗಿಂತ, ಪಾಲ್ಗೊಳ್ಳುವುದೇ ಒಂದು ದೊಡ್ಡ ಹಿರಿಮೆಯ ಸಂಗತಿ ಎಂದು ಸ್ಥಳೀಯ ಲಕ್ಷ್ಮೀನರಸಿಂಹ ಸೌಹಾರ್ದ ಬ್ಯಾಂಕ್ ಅಧ್ಯಕ್ಷೆ ವೈ.ಡಿ. ಲಕ್ಷ್ಮೀದೇವಿ ಅಣ್ಣಪ್ಪ ಅಬಿಪ್ರಾಯಪಟ್ಟರು.
ಬುಧವಾರ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಜ್ಞಾನಜ್ಯೋತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಲಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಪತ್ರ ವಿತರಿಸಿ ಅವರು ಮಾತನಾಡಿದರು.
ಆಟೋಟಗಳನ್ನು ಒಂದು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು. ಇಲ್ಲಿ ವಿಜಯಪತಾಕೆ ಹಾರಿಸಿದವರು, ಮುಂದಿನ ರಣರಂಗದ ಸ್ಪರ್ಧೆಗೆ ಹೋಗುವ ತವಕದಲ್ಲಿರುತ್ತಾರೆ. ಆದರೆ, ಸೋಲಿನ ಸೆಳವಿಗೆ ಸಿಲುಕಿದ ಸ್ಪರ್ಧಿ ಇಲ್ಲವೇ; ತಂಡ ಸೋಲನ್ನೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ, ಮುಂದಿನ ಆಟದ ಅಂಕಣದಲ್ಲಿ ವಿಜಯದ ನಗೆ ಬೀರಲು ಸನ್ನದ್ಧರಾಗಬೇಕೇ ಹೊರತು, ಸೋಲಿನಿಂದ ಹತಾಶರಾಗಬಾರದು ಎಂದು ವೈ.ಡಿ. ಲಕ್ಷ್ಮೀದೇವಿ ಅಣ್ಣಪ್ಪ ಅವರು, ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಗ್ರಾಮಾಂತರ ಪ್ರದೇಶದಲ್ಲಿನ ಎಷ್ಟೋ ಮಕ್ಕಳು, ಎಲ್ಲಾ ರೀತಿಯ ಪ್ರತಿಭೆಗಳಿದ್ದರೂ, ಅವರಿಗೆ ಸೂಕ್ತ ಮಾರ್ಗದರ್ಶನ, ತರಬೇತಿಯ ಕೊರತೆಯಿಂದ ಅವರಲ್ಲಿನ ಅತ್ಯುತ್ತಮ ‘ಕ್ರೀಡಾಪಟು’ ಕಮರಿಹೋಗುವ ಅಪಾಯ ಇರುತ್ತದೆ. ಹೀಗಾಗಿ, ಅಂಥಹ ಉದಯೋನ್ಮುಖ ಕ್ರೀಡಾಪಟುಗಳನ್ನು ಗುರುತಿಸುವ ಮೂಲಕ ಅವರನ್ನು ನಾಡಿನ ಅತ್ಯುತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುವ ಗುರುತರ ಹೊಣೆಗಾರಿಕೆ ನಮ್ಮ ಶಿಕ್ಷಕ ಸಮುದಾಯದ ಬಂಧುಗಳ ಮೇಲಿದೆ. ಇದರಲ್ಲಿ ಪಾಲಕರ ಪಾತ್ರವೂ ಅಷ್ಟೇ ಜವಾಬ್ದಾರಿತನದಿಂದ ಕೂಡಿರುತ್ತದೆ ಎಂದ,ವೈ.ಡಿ. ಲಕ್ಷ್ಮೀದೇವಿ ಅಣ್ಣಪ್ಪ ಅವರು, ವಿಜೇತ ಕ್ರೀಡಾಪಟುಗಳಿಗೆ ಶುಭಕೋರಿ, ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿಯೂ ಗೆಲುವಿನ ನಗೆ ನಿಮ್ಮದಾಗಲಿ ಎಂದು ಶಭಕೋರಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಖಾಜಾಹುಸೇನ್, ಮುಖಂಡರಾದ ಐ. ಸಲಾಂಸಾಹೇಬ್, ಪಿ. ಹಾಲೇಶ್, ವಿ. ವೆಂಕಟೇಶ್, ನಿಂಗಪ್ಪ, ಭರ್ಕತ್, ಮುಖ್ಯೋಪಾಧ್ಯಾಯ ಮಾಲತೇಶ್ ಪಾಟೀಲ್, ಉ. ಜಗದೀಶಯ್ಯ, ಸುಜಾತಾ, ಉಪನ್ಯಾಸಕ ಹಾದಿಮನಿ ರಮೇಶ್, ಪ್ರದೀಪ್, ಶಿಕ್ಷಕರಾದ ಪರಶುರಾಮ್, ಬಸವರಾಜ್, ಎಲ್. ಮೂರ್ತಿನಾಯ್ಕ್, ಬಂದಮ್ಮ, ರೇಣುಕಮ್ಮ, ಪೂರ್ಣಿಮಾ, ಸುನಂದಾ, ಗಿರಿಜಾ, ರೇಖಾದೇವಿ, ಅಜ್ಜಯ್ಯ, ಪವನಕುಮಾರಿ, ಅನುಷಾ, ತರಬೇತುದಾರರಾದ ಬಸವರಾಜ್, ಸಂತೋಷ್ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಾಥಮಿಕ ಶಾಲೆಗಳ ಅರಸೀಕೆರೆ ವಲಯಮಟ್ಟದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರ ವಿವರ:
ಥ್ರೋಬಾಲ್ ಬಾಲಕರ ವಿಭಾಗದಲ್ಲಿ ಅರಸೀಕೆರೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ತಂಡ ಪ್ರಥಮ ಸ್ಥಾನ ಪಡೆದಿದೆ.
ಕಬ್ಬಡ್ಡಿ ಬಾಲಕಿಯರ ವಿಭಾಗದಲ್ಲಿ ಇದೇ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಥಮಸ್ಥಾನವನ್ನು ಮುಡಿಗೇರಿಸಿಕೊಂಡರೆ, ಬಾಲಕರ ವಿಭಾಗದಲ್ಲಿ ಕಮ್ಮತ್ತಹಳ್ಳಿ ಗ್ರಾಮದ ವೇದಿಕ್ ವಿದ್ಯಾಲಯದ ತಂಡ ಪ್ರಥಮಸ್ಥಾನ ಮುಡಿಗೇರಿಸಿಕೊಂಡಿದೆ.

ಕೊಕ್ಕೊ ಹಾಗೂ ವಾಲಿಬಾಲ್ ಸ್ಪರ್ಧೆಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಎರಡು ಸ್ಪರ್ಧೆಗಳಲ್ಲಿಯೂ ಪ್ರಥಮ ಸ್ಥಾನವನ್ನು ಅರಸೀಕೆರೆಯ ಶಾಂತಪ್ರಕಾಶ್ ನಗರದ ಶಾಲೆಯ ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದಾರೆ.
ಗುAಡು ಎಸೆತ ವೈಯಕ್ತಿಕ ಬಾಲಕರ ವಿಭಾಗದಲ್ಲಿ ಅರಸೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಉವೇಸ್ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ಶಾಂತಪ್ರಕಾಶ್ ನಗರದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಟಿ.ವಿ. ರಂಗಮ್ಮ ಪ್ರಥಮಸ್ಥಾನವನ್ನು ಪಡೆದಿದ್ದಾರೆ.
೧೦೦ಮೀಟರ್ ಓಟದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಆತಿಥೇಯ ಜ್ಞಾನಜ್ಯೋತಿ ಶಾಲೆ ಎರಡರಲ್ಲಿಯೂ ಪ್ರಥಮ ಸ್ಥಾನ ಪಡೆದಿದೆ. ಬಾಲಕರ ವಿಭಾಗದಲ್ಲಿ ಎ.ಎನ್. ಆದರ್ಶ ಹಾಗೂ ಬಾಲಕಿಯ ವಿಭಾಗದಲ್ಲಿ ಕೃಷ್ಣವೇಣಿ ಪ್ರಥಮಸ್ಥಾನ ಮುಡಿಗೇರಿಸಿಕೊಂಡಿದ್ದಾರೆ.
೨೦೦ಮೀಟರ್ ಓಟದ ಬಾಲಕರ ವಿಭಾಗದಲ್ಲಿ ಇದೇ ಆತಿಥೇಯ ಜ್ಞಾನಜ್ಯೋತಿ ಶಾಲೆಯ ಎ.ಎನ್. ಆದರ್ಶ ಪ್ರಥಮಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಕಮ್ಮತ್ತಹಳ್ಳಿ ಗ್ರಾಮದ ವೇದಿಕ್ ವಿದ್ಯಾಲಯದ ಬಾಲಕಿ ನಾಗವೇಣಿ ಡಿ. ಪ್ರಥಮ ಸ್ಥಾನ ಪಡೆದಿದ್ದಾರೆ.
೪೦೦ಮೀಟರ್ ಓಟದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಆತಿಥೇಯ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿ ಅಜ್ಜಯ್ಯ ಎಂ ಮತ್ತು ಎ.ಆರ್. ದಿವ್ಯಾ ಎರಡು ವಿಭಾಗದಲ್ಲಿ ಕ್ರಮವಾಗಿ ಪ್ರಥಮಸ್ಥಾನ ಪಡೆದುಕೊಂಡಿದ್ದಾರೆ.
೬೦೦ಮೀಟರ್ ಓಟದ ಬಾಲಕರ ವಿಭಾಗದಲ್ಲಿ ಶಾಂತಪ್ರಕಾಶ್ ನಗರದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚೇತನ್ ಪ್ರಥಮಸ್ಥಾನ ಪಡೆದರೆ, ಕಮ್ಮತ್ತಹಳ್ಳಿ ಗ್ರಾಮದ ವೇದಿಕ್ ವಿದ್ಯಾಲಯದ ವಿದ್ಯಾರ್ಥಿನಿ ಯಶಸ್ವಿನಿ ಯು. ಬಾಲಕಿಯರ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದುಕೊಂಡಿದ್ದಾಳೆ.
ಚಕ್ರ ಎಸೆತ ಬಾಲಕರ ವಿಭಾಗದಲ್ಲಿ ತೌಡೂರು ತಾಂಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ತರುಣ್ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಯರಬಳ್ಳಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಲಿಖಿತಾ ಪ್ರಥಮಸ್ಥಾನ ಪಡೆದುಕೊಂಡಿದ್ದಾಳೆ.
ಉದ್ದ ಜಿಗಿತ ಸ್ಪರ್ಧೆಯ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಆತಿಥೇಯ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿ ಹೇಮಂತ್ ಎಂ. ಮತ್ತು ದಿವ್ಯಾ ಅವರು ಕ್ರಮವಾಗಿ ಎರಡು ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ.
ರಿಲೇ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಶಾಂತಪ್ರಕಾಶ್ ನಗರದ ಪ್ರಾಥಮಿಕ ಶಾಲೆಯ ತಂಡ ಪ್ರಥಮಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಆತಿಥೇಯ ಜ್ಞಾನಜ್ಯೋತಿ ಶಾಲೆಯ ಬಾಲಕಿಯರ ತಂಡ ಪ್ರಥಮಸ್ಥಾನ ಗಳಿಸಿದೆ.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಊರಿನ ಪ್ರಮುಖರು ಹೃದಯಸ್ಪರ್ಶಿಯಾಗಿ ಅಭಿನಂದಿಸಿ, ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿಯೂ ಮೇಲುಗೈ ಸಾಧಿಸಲಿ ಎಂದು ಶುಭಹಾರೈಸಿದ್ದಾರೆ.

Related posts

ಎಸ್‌ಯುಜೆಎಂ ಕಾಲೇಜಿನಲ್ಲಿ ನಡೆದ ಅಭಿಯಾನ || ಹರಪನಹಳ್ಳಿ: ನಶಾಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಬೋಧನೆ ||

Vijayasiri News

ಹರಪನಹಳ್ಳಿ: ಒಳಮೀಸಲಾತಿ ಹಂಚಿಕೆಯಲ್ಲಿ ಘೋರ ಅನ್ಯಾಯ, ಬಲಾಢ್ಯ ಸಮುದಾಯಗಳ ಪಟ್ಟಿಯಲ್ಲಿ ಅಲೆಮಾರಿಗಳ ಸೇರ್ಪಡೆ, ಜೀವಿಸುವ ಹಕ್ಕನ್ನೂ ಕಸಿದ ಸರ್ಕಾರ: ಪ್ರತಿಭಟನಾಕಾರರ ಆಕ್ರೋಶ

Vijayasiri News

|| ಯು. ಕಲ್ಲಹಳ್ಳಿ: ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿಗೆ || ಅಧ್ಯಕ್ಷರಾಗಿ ಚನ್ನಬಸಪ್ಪ- ಉಪಾಧ್ಯಕ್ಷರಾಗಿ ಲಿಂಗರಾಜ ಆಯ್ಕೆ

Vijayasiri News

ಕೊನ್ನಾಪುರ ಚೌಡೇಶ್ವರಿದೇವಿ ಕಾಪಾಡಮ್ಮ…ಈ ದೇವಸ್ಥಾನಕ್ಕೆ ತಲುಪಲು ರಸ್ತೆಯೋ… ಇಲ್ಲವೇ ಕೆಸರು ಗದ್ದೆಯೋ…?

admin

ಹರಪನಹಳ್ಳಿ: ಕೆಜಿವಿಎಸ್‍ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

Vijayasiri News

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News
error: Content is protected !!