Vijayasiri News
ಜಿಲ್ಲೆಗಳುತಾಲ್ಲೂಕು ಸುದ್ದಿನಮ್ಮೂರ ಸುದ್ದಿಹರಪನಹಳ್ಳಿ ಸುದ್ದಿ

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ನಗರದ ಪ್ರಮುಖ ರಸ್ತೆಯ ವಿಭಜಕದ ಮಧ್ಯೆ ಬೆಳೆಸಲಾಗಿದ್ದ ಅಲಂಕಾರಿಕ ಗಿಡಗಳನ್ನು ಬೀದಿದೀಪಗಳ ಅಳವಡಿಕೆಯ ಹಿನ್ನೆಲೆಯಲ್ಲಿ ನೆಲಕ್ಕೆ ಉರುಳಿಸಲಾಗಿದ್ದು, ಒಂದೆಡೆ ನಗರದ ಸೌಂದರ್ಯವನ್ನು ವಿರೂಪಗೊಳಿಸಲಾಗಿದ್ದು, ಮತ್ತೊಂದೆಡೆ ಇಲ್ಲಿ ಸಂಚರಿಸುವ ಮೂಲಕ ಪ್ರಾಕೃತಿಕ ಆಮ್ಲಜನಕವನ್ನು ಸವಿಯುತ್ತಿದ್ದ ಪಾದಚಾರಿಗಳ ಪ್ರಾಣವಾಯುವನ್ನು ಮಲೀನಗೊಳಿಸುವಲ್ಲಿ ನಗರಸಭೆ ಮುಂದಾಗಿರುವುದು ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ
ನಗರವನ್ನು ಸೀಳಿ ಹೋಗಿರುವ ಶಿವಮೊಗ್ಗ- ಮರಿಯಮ್ಮನಹಳ್ಳಿ ರಾಜ್ಯಹೆದ್ದಾರಿಯನ್ನು ಕಳೆದ ದಶಕದ ಹಿಂದೆ ರಸ್ತೆ ಅಗಲೀಕರಣದ ಉದ್ದೇಶದೊಂದಿಗೆ ಹೆಮ್ಮರವಾಗಿ ಬೆಳೆದನಿಂತಿದ್ದ ನೂರಾರು ಬೃಹತ್ ಮರಗಳನ್ನು ಹರಣ ಮಾಡಲಾಗಿತ್ತು. ನಾಲ್ಕಾರು ದಶಕಗಳ ಕಾಲ ಸಹಸ್ರಾರು ಪ್ರಾಣಿ- ಪಕ್ಷಿಗಳಿಗೆ ಆಶ್ರಯ ನೀಡಿದ್ದ ಹಾಗೂ ರಣಬಿಸಿಲಿನ ಧಗೆಯನ್ನು ನಿಯಂತ್ರಿಸುತ್ತಿದ್ದ ಮರಗಳನ್ನು ನಿರ್ಣಾಮ ಮಾಡಲಾಗಿತ್ತು. ಆ ಘಟನೆ ಕಾಲಾನುಕ್ರಮೇಣ ಕಣ್ಮರೆಯಾಗುತ್ತಿದ್ದಂತಿಯೇ, ಅದರ ಪರ್ಯಾಯ ರೂಪದಲ್ಲಿ ನಡೆಲಾಗಿದ್ದ ಅಲಂಕಾರಿಕ ಗಿಡಗಳು ಬೆಳೆದುನಿಲ್ಲುವ ಮೂಲಕ ನಗರದ ನಿವಾಸಿಗಳು ಸೇರಿದಂತೆ ಇಲ್ಲಿನ ಪಾದಚಾರಿಗಳಿಗೆ ಒಂದಿಷ್ಟು ನೆಮ್ಮದಿ ಮೂಡಿಸಿದ್ದವು. ಆದರೆ, ಈಗ, ನಗರಸಭೆ ಬೀದಿದೀಪಗಳ ಅಳವಡಿಕೆಯ ಹೆಸರಿನಲ್ಲಿ ಆ ಅಲಂಕಾರಿಕ ಗಿಡಗಳನ್ನು ಬುಡಮೇಲು ಮಾಡುತ್ತಿರುವ ಪರಿಣಾಮ, ನಗರದ ನಿವಾಸಿಗಳನ್ನ, ಪಾದಾಚಾರಿಗಳನ್ನು ಹಾಗೂ ಪರಿಸರ ಪ್ರಿಯರನ್ನು ರೊಚ್ಚಿಗೆಬ್ಬಿಸಿದೆ.


ಈ ಹೆದ್ದಾರಿಯೇ ನಗರದ ಪ್ರಮುಖ ರಸ್ತೆ. ಇಲ್ಲಿ ನಿತ್ಯವೂ ನೂರಾರು ಭಾರೀ ವಾಹನಗಳ ಸಂಚಾರವೂ ಸೇರಿದಂತೆ ಸಹಸ್ರಾರು ವಾಹನಗಳ ದಟ್ಟಣೆಯಿಂದ ನಿತ್ಯವೂ ಗಿಜಿಗುಡುತ್ತಿರುತ್ತದೆ. ಭಾರೀ ವಾಹನಗಳು ಸೇರಿದಂತೆ ದ್ವಿಚಕ್ರವಾಹನ, ಕಾರು, ಆಟೋಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸಡ್ ಅನ್ನು ಈ ಅಲಂಕಾರಿಕ ಗಿಡಗಳು, ಹೀರಿಕೊಳ್ಳುವ ಮೂಲಕ, ನಗರದ ನಿವಾಸಿಗಳು ಸೇರಿದಂತೆ ಇಲ್ಲಿನ ಪಾದಚಾರಿಗಳಿಗೆ ಪ್ರಾಕೃತಿಕವಾದ ಆಮ್ಲಜನಕ ಒದಗಿಸುವ ಮೂಲಕ ಆರೋಗ್ಯದ ಸಮತೋಲನಕ್ಕೂ ಮಹತ್ವದ ಪಾತ್ರವಹಿಸಿದ್ದವು. ಜತೆಗೆ, ನಗರದ ಸೌಂದರ್ಯದ ಮುಕುಟಮಣಿಯಂತೆ ಕಣ್ಣಿಗೆ ರಾಚುತ್ತಿದ್ದವು. ಇಂಥಹ ಅಮೂಲ್ಯ ಸಸ್ಯ ಸಂಪತ್ತಿಗೆ ಕೊಡಲಿ ಹಾಕುವ ಮೂಲಕ, ಸಾಮಾಜಿಕ ಅರಣ್ಯೀಕರಣದ ವಿನಾಶಕ್ಕೆ ನಗರಸಭೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಗರದ ನಿವಾಸಿ, ವಕೀಲರೂ ಆದ ಕೆ. ಉಚ್ಚೆಂಗಪ್ಪ.
ಪರಿಸರ ಸಂರಕ್ಷಣೆ, ವನಮಹೋತ್ಸವ ಸೇರಿದಂತೆ ಆಯಾ ವೇದಿಕೆಗಳಲ್ಲಿ ಮಾರುದ್ದ ಭಾಷಣ ಬಿಗಿಯುವ ನಗರಸಭೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ಹಾಡುಹಗಲಲ್ಲೇ, ರಾಜರೋಷವಾಗಿ ನೆಲಕ್ಕುರುಳಿಸುತ್ತಿರುವ ಗಿಡಗಳನ್ನು ಸಂರಕ್ಷಿಸದಿರುವುದು ದುರಂತದ ಸಂಗತಿ.
ಬೀದಿದೀಪಗಳಂತ ಸಣ್ಣಪುಟ್ಟ ಕಾಮಗಾರಿ ಅನಷ್ಠಾನಗೊಳಿಸುವಿಕೆಗೂ ಅಮೂಲ್ಯ ಸಸ್ಯಸಂಪತ್ತನ್ನು ವಿನಾಶಪಡಿಸಲಾಗುತ್ತಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ, ಬೀದಿದೀಪಗಳ ಅಳವಡಿಕೆಗೆ ನಗರಸಭೆ ಮುಂದಾಗಬೇಕು. ಈಗಾಗಲೇ ನೆಲಕ್ಕೆ ಉರುಳಿಸಿರುವ ಗಿಡಗಳನ್ನು ಕೂಡಲೇ, ಮರುನವೀಕರಣ ಕೈಗೆತ್ತಿಕೊಳ್ಳುವ ಮೂಲಕ ಹಸಿರ ಅಂದವನ್ನು ಮರುನಿರ್ಮಾಣ ಮಾಡಬೇಕು ಎಂಬುದು ಪರಿಸರ ಪ್ರಿಯರ ಒತ್ತಾಯ.

Related posts

|| ಹರಪನಹಳ್ಳಿ: ಸಿಪಿಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ || ಉಚ್ಚಂಗಿದುರ್ಗದ ಆಶ್ರಯ ಪ್ಲಾಟ್ ನಿವಾಸಿಗಳಿಗೆ ಖಾಸಗೀ ವ್ಯಕ್ತಿಯ ಕಿರುಕುಳ ಆರೋಪ

Vijayasiri News

|| ತೆಲಿಗಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ || ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾನ ಶಿಕ್ಷಣದಿಂದ ಮಾತ್ರ ಮಗುವಿನ ಸಮಗ್ರ ಬೆಳವಣಿಗೆ ಸಾಧ್ಯ

Vijayasiri News

ತೆಲಗಿಯಲ್ಲಿ ನಾಳೆ ಬೆಸ್ಕಾಂ ಗ್ರಾಹಕರ ಸಂವಾದ ಸಭೆ

Vijayasiri News

ಹೊರಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಮನವಿ ಒಂಭತ್ತು ತಿಂಗಳಿನಿಂದಲೂ ಕೈಸೇರದ ವೇತನ; ಬೀದಿಗೆ ಬಿದ್ದ ಕಾರ್ಮಿಕರ ಬದುಕು: ನಿಯೋಗದ ಆಕ್ರೋಶ

admin

ಅಣಜಿಗೆರೆ ಗ್ರಾಮದಲ್ಲಿ ರಕ್ತದಾನ ಶಿಬಿರ

admin

|| ಕೆರೆಗುಡಿಹಳ್ಳಿ: ಗ್ರಾಮಸ್ಥರ ಪಾಲಿಗೆ ಕಂಟಕವಾಗಿದ್ದ ಹೂಳು ತುಂಬಿದ ಚರಂಡಿ || ಕೊನೆಗೂ ಹೂಳು ತೆರೆವುಗೊಳಿಸಲು ಮುಂದಾದ ಪಂಚಾಯ್ತಿ ಸದಸ್ಯ

Vijayasiri News
error: Content is protected !!