Vijayasiri News
ವಿಜಯನಗರಹರಪನಹಳ್ಳಿ ಸುದ್ದಿ

ಅರಸೀಕೆರೆ ಗ್ರಾ.ಪಂ. ಅಧ್ಯಕ್ಷರ ಚುನಾವಣೆ: ಪಿ. ಕೆಂಚಮ್ಮ ಅವಿರೋಧ ಆಯ್ಕೆ

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಮೂರನೇ ವಾರ್ಡ್ ಸದಸ್ಯೆ ಪಿ. ಕೆಂಚವ್ವ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಹಾಲಮ್ಮ ನಾಗರಾಜ್ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಪಂಚಾಯ್ತಿ ಕಚೇರಿಯ ಸಭಾಂಗಣದಲ್ಲಿ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಗಿರೀಶ್‌ಬಾಬು ಅವರು ಚುನಾವಣೆ ಪ್ರಕ್ರಿಯೆ ಆರಂಭಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆ ಬಯಸಿ ಮೂರನೇ ವಾರ್ಡಿನ ಸದಸ್ಯೆ ಪಿ. ಕೆಂಚವ್ವ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದವರೆಗೂ, ಬೇರೆ ಯಾವೊಬ್ಬ ಸದಸ್ಯರು, ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಹಾಗೂ ಕೆಂಚವ್ವ ಅವರು ಸಲ್ಲಿಸಿದ ನಾಮಪತ್ರ ಕ್ರಮಬದ್ಧವಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಗಿರೀಶ್‌ಬಾಬು ಅವರು ಪಿ. ಕೆಂಚವ್ವ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಕೆಂಚವ್ವ ಅವರನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆದ, ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ವೈ.ಡಿ. ಅಣ್ಣಪ್ಪ ಅವರು, ಅಭಿನಂದಿಸಿ, ಎಲ್ಲಾ ಸದಸ್ಯರ ಹಾಗೂ ಅಧಿಕಾರಿಗಳ ಸಮನ್ವಯತೆಯೊಂದಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ವಾರ್ಡ್ಗಳಲ್ಲಿ ಸಮರ್ಪಕ ಕುಡಿಯುವ ನೀರು, ಚರಂಡಿಗಳ ಸ್ವಚ್ಛತೆ ಹಾಗೂ ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಮುಂದಾಗಬೇಕು. ಜತೆಗೆ, ಕೆಂಚವ್ವ ಅವರಿಗೆ ಸದಸ್ಯರೂ, ಅಭಿವೃದ್ಧಿಯಲ್ಲಿ ಪರಸ್ಪರ ಕೈಜೋಡಿಸುವ ಮೂಲಕ, ವಾರ್ಡ್ಗಳ ಅಭಿವೃದ್ಧಿಗೆ ಸಹಕರಿಸುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಅಧಿಕಾರವಹಿಸಿಕೊಂಡ ನೂತನ ಅಧ್ಯಕ್ಷ ಕೆಂಚವ್ವ ಅವರು ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕರಿಸುವಂತೆ ಮನವಿ ಮಾಡಿ, ಮಾದರಿ ಪಂಚಾಯ್ತಿ ನಿರ್ಮಾಣಕ್ಕೆ ತಾವು ಶ್ರಮಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಕೆಂಚವ್ವ ಅವರನ್ನು ಗ್ರಾಮದ ಯುವಮುಖಂಡರಾದ ಪ್ರಶಾಂತ್ ಪಾಟೀಲ್ ಹಾಗೂ ಸದಸ್ಯರು ಅಭಿನಂದಿಸಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಕೆಂ. ನಂದ್ಯೆಮ್ಮ ದಂಡೆಪ್ಪ, ಅಭಿವೃದ್ಧಿ ಅಧಿಕಾರಿ ಅಂಜಿನಪ್ಪ, ಸದಸ್ಯರಾದ ಕೆ. ಆನಂದಪ್ಪ, ವಿ.ಟಿ. ಮಲ್ಲೇಶ್, ಫರ್ಜಾನಾಬಾನು, ವೈ. ರೇಖಾ, ಲಕ್ಷಿö್ಮÃವೆಂಕಟೇಶ್, ಕೆ. ಮಹಾಂತೇಶ್, ಎಂ. ಚಂದ್ರಪ್ಪ, ಇನಾಯತ್ ಉಲ್ಲಾ, ಡಿ. ಅಕ್ಕಮ್ಮ, ಅಡ್ಡಿ ಚನ್ನವೀರಪ್ಪ, ಮುತ್ತಿಗಿ ಹನುಮಂತಪ್ಪ, ಆದಮ್‌ಸಾಹೇಬ್, ಟಿ. ವಿಶಾಲಾ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಕೀಲ ವೈ.ಟಿ. ಕೊಟ್ರೇಶ್, ಮುಖಂಡರಾದ ಐ. ಸಲಾಂಸಾಹೇಬ್, ಪೂಜಾರ್ ಮರಿಯಪ್ಪ, ಕೆ. ಯೋಗೇಶ್, ರಂಗಪ್ಪ, ಮುಗೇಶ್, ಹೆಚ್. ನವೀನ್ ಸೇರಿದಂತೆ ವಿವಿಧ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

Related posts

|| ಕೆರೆಗುಡಿಹಳ್ಳಿ: ಗ್ರಾಮಸ್ಥರ ಪಾಲಿಗೆ ಕಂಟಕವಾಗಿದ್ದ ಹೂಳು ತುಂಬಿದ ಚರಂಡಿ || ಕೊನೆಗೂ ಹೂಳು ತೆರೆವುಗೊಳಿಸಲು ಮುಂದಾದ ಪಂಚಾಯ್ತಿ ಸದಸ್ಯ

Vijayasiri News

ಕೋಟ್ಯಂತರ ಮೌಲ್ಯದ ಆಸ್ತಿಯ ಕಾನೂನುಬಾಹಿರ ಮಂಜೂರಾತಿ.!, ಹರಪನಹಳ್ಳಿ: ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈಗ ವಾಣಿಜ್ಯ ವಹಿವಾಟಿನ ಘಾಟು…!!!

Vijayasiri News

ಜೋಕುಮಾರಮೂರ್ತಿಯ ಮೇಲೆ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರಾಧನೆ ಸ್ಥಗಿತ; ಅಂದಿನಿಂದಲೇ ಊರ ಹೆಸರು ನಾಮಾಂಕಿತ, ಹುಲಿಕಟ್ಟೆ: ಈ ಊರಲ್ಲಿ ಜೋಕುಮಾರಸ್ವಾಮಿ ಆರಾಧನೆ ನಿಷಿದ್ಧ!

Vijayasiri News

ವಿಜಯನಗರ ಜಿಲ್ಲೆಯಲ್ಲೊಂದು ಮಾದರಿ ಸಮಾರಂಭ: ಧ್ವಜಾರೋಹಣ ನೆರವೇರಿಸಿದ ಅಲೆಮಾರಿ ಸಮಾಜದ 98ರ ವಯೋವೃದ್ಧೆ ಮರಿಯಮ್ಮ

Vijayasiri News

|| ನ್ಯಾ. ನಾಗಮೋಹನದಾಸ್ ವರದಿ ಅನುಷ್ಠಾನ ಬೇಡ: ಸ್ವಾಮೀಜಿ|| ಅವೈಜ್ಞಾನಿಕ ವರದಿ ಜಾರಿಗೆ ಮುಂದಾದರೆ ಸಮುದಾಯದ ಶಾಪಕ್ಕೆ ಗುರಿಯಾಗಬೇಕಾದೀತು: ಸೇವಾಲಾಲ್ ಸ್ವಾಮೀಜಿ ಎಚ್ಚರಿಕೆ

Vijayasiri News

₹. 50ಲಕ್ಷ ವೆಚ್ಚದ ಮೊತ್ತದಲ್ಲಿ ನಿರ್ಮಾಣವಾಗಿರುವ ಆಕರ್ಷಕ ಬೆಳ್ಳಿಪಲ್ಲಕ್ಕಿ, ಹರಪನಹಳ್ಳಿ: ಅರಸೀಕೆರೆ ಕೋಲಶಾಂತೇಶ್ವರಸ್ವಾಮಿ ಬೆಳ್ಳಿಪಲ್ಲಕ್ಕಿ ಪುರ ಪ್ರವೇಶ; ಭರ್ಜರಿ ಮೆರವಣಿಗೆ

Vijayasiri News
error: Content is protected !!