Vijayasiri News
ನಮ್ಮೂರ ಸುದ್ದಿಹರಪನಹಳ್ಳಿ ಸುದ್ದಿ

₹. 50ಲಕ್ಷ ವೆಚ್ಚದ ಮೊತ್ತದಲ್ಲಿ ನಿರ್ಮಾಣವಾಗಿರುವ ಆಕರ್ಷಕ ಬೆಳ್ಳಿಪಲ್ಲಕ್ಕಿ, ಹರಪನಹಳ್ಳಿ: ಅರಸೀಕೆರೆ ಕೋಲಶಾಂತೇಶ್ವರಸ್ವಾಮಿ ಬೆಳ್ಳಿಪಲ್ಲಕ್ಕಿ ಪುರ ಪ್ರವೇಶ; ಭರ್ಜರಿ ಮೆರವಣಿಗೆ

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ನೆಲೆಸಿರುವ ಪವಾಡಪುರುಷ, ಮಹಾ ಕಾಯಕಯೋಗಿ, ಧಾರ್ಮಿಕ ಸುಧಾರಣೆಯ ಶರಣ, ಪಂಚಗಣಾಧೀಶ ಪರಂಪರೆ ಪ್ರಮುಖರಾದ ಕೋಲಶಾಂತೇಶ್ವರಸ್ವಾಮಿಯ ರಥೋತ್ಸವ ಹಾಗೂ ಧಾರ್ಮಿಕ ಉತ್ಸವಗಳ ಆಚರಣೆಗಾಗಿ ನಿರ್ಮಾಣವಾಗಿರುವ ಬೆಳ್ಳಿಪಲ್ಲಕ್ಕಿ ಪುರ ಪ್ರವೇಶಿದ ಹಿನ್ನೆಲೆಯಲ್ಲಿ ಭಕ್ತಸಮೂಹ ಪಲ್ಲಕ್ಕಿಯನ್ನು ಭರ್ಜರಿಯಾಗಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಕರೆತಂದರು.
ಹಿAದೂ ದಾರ್ಮಿಕ ಆಚರಣೆಯ ಯುಗಾದಿಯ ಹೊಸವರ್ಷದ ನಂತರದಲ್ಲಿ ಆಚರಿಲ್ಪಡುವ ಕೋಲಶಾಂತೇಶ್ವರಸ್ವಾಮಿಯ ಮಹಾರಥೋತ್ಸವ ಸೇರಿದಂತೆ ಇತರೆ ಧಾರ್ಮಿಕ ಸಮಾರಂಭದಲ್ಲಿ ಜರಗಲಿರುವ ಸ್ವಾಮಿಯ ಉತ್ಸವಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ₹.. 50ಲಕ್ಷ ಮೊತ್ತದಲ್ಲಿ ನಿರ್ಮಾಣವಾಗಿರುವ ಬೆಳ್ಳಿಪಲ್ಲಕ್ಕಿಯೂ ಆಕರ್ಷಕ ಶೈಲಿ ಹಾಗೂ ಸೂಕ್ಷ್ಮ ಕಲಾತ್ಮಕವಾಗಿ ನಿರ್ಮಾಣಗೊಂಡಿದೆ.
ಬೆಳ್ಳಿಪಲ್ಲಕ್ಕಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಶ್ರೀಮಠದ ಪೀಠಾಧೀಪತಿ ಶಾಂತಲಿಂಗದೇಶಿಕೇಂದ್ರ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಸಕಲ ಧಾರ್ಮಿಕ ಪೂಜಾ ವಿಧಿ-ವಿಧಾನದ ಕಾರ್ಯಕ್ರಮಗಳನ್ನು ಸಹ ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ವೈ. ದೇವೇಂದ್ರಪ್ಪ ಅವರು ಮಾತನಾಡಿ, ನಮ್ಮ ಕೋಲಶಾಂತೇಶ್ವರಮಠಕ್ಕೆ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ ಅವರು ಪೀಠಾಧೀಪತಿಯಾಗಿ ಪಟ್ಟಾಧಿಕಾರವಹಿಸಿಕೊಂಡ ಬಳಿಕ, ಶ್ರೀಮಠ ಧಾರ್ಮಿಕ ಸುಕ್ಷೇತ್ರವಾಗಿ ಮಹತ್ವದ ಬೆಳವಣಿಗೆಯ ಜೊತೆಯಲ್ಲಿಯೇ, ಅನ್ನದಾಸೋಹ ಹಾಗೂ ಅಕ್ಷರದ ದಾಸೋಹಗಳಂತಹ ಸಮಾಜಮುಖಿ ಚಟುವಟಿಕೆಗಳನ್ನು ಸಹ ನಿರಂತರವಾಗಿ ನಡೆಸಿಕೊಂಡು ಹೋಗುವ ಮೂಲಕ ಶ್ರೀಮಠದಲ್ಲಿ ಅಭಿವೃದ್ಧಿ ಹೊಸ ಮನ್ವಂತರವನ್ನೇ ಸೃಷ್ಟಿಮಾಡಿದ್ದಾರೆ. ನಿಜಕ್ಕೂ ನಮ್ಮ ಗ್ರಾಮದ ಆರಾಧ್ಯದೈವವಾದ ಕೋಲಶಾಂತೇಶ್ವರ ಮಠಕ್ಕೆ ಶಾಂತಲಿಂಗದೇಶಿಕೇಂದ್ರ ಮಹಾಸ್ವಾಮೀಜಿ ಅವರು ಆಗಮಿಸಿರುವುದು ನಮ್ಮೆಲ್ಲರ ಸುದೈವ ಎಂದರು.


ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳ ಆಭರಣಗಳನ್ನು ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿನ ದೇವರಮೂರ್ತಿ, ಬಾಗಿಲ ಚೌಕಟ್ಟು ಹಾಗೂ ಗೋಪುರದ ಕಳಸದಂತ ಆಭರಣಗಳಿಗೆ ಮಾಡಿಸಿರುವ ಉದಾಹರಣೆಗಳನ್ನು ನಾವು ಕೇಳುತ್ತಿದ್ದೇವು. ಆದರೆ, ಕೋಲಶಾಂತೇಶ್ವರಸ್ವಾಮಿಯ ಉತ್ಸವಕ್ಕೆ ಬೆಳ್ಳಿಯ ಪಲ್ಲಕ್ಕಿಯನ್ನು ನಿರ್ಮಾಣ ಮಾಡುವ ಮೂಲಕ ನಮ್ಮ ಸ್ವಾಮೀಜಿ ಅವರು, ಅರಸೀಕೆರೆ ಕೋಲಶಾಂತೇಶ್ವರನ ಮಹಿಮೆಯನ್ನು ಮತ್ತಷ್ಟು ಪ್ರಖರಗೊಳಿಸಿದ್ದಾರೆ ಎಂದು ಕೋಲಶಾಂತೇಶ್ವರಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಮದ ಮುಖಂಡ, ಅಕ್ಷರ ಸೀಡ್ಸ್ ಕಂಪೆಯ ಮಾಲೀಕರು ಆದ ಎನ್. ಕೊಟ್ರೇಶ್ ಅವರು ಮಾತನಾಡಿ, ಅರಸೀಕೆರೆಯ ಕೋಲಶಾಂತೇಶ್ವರಮಠಕ್ಕೆ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ ಅವರು ಪೀಠಾಧೀಪತಿಗಳಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಅವರ ಆಗಮನದಿಂದಾಗಿ, ಈ ಕ್ಷೇತ್ರ ಪಾವನವಾಗಿದೆ. ಮಾತಿಗಿಂತಲೂ ಕೃತಿಯಲ್ಲಿಯೇ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿರುವ ಶ್ರೀಗಳು, ಕೋಲಶಾಂತೇಶ್ವರಸ್ವಾಮಿ ಅವರ, ಕಾಯಕ ಪರಂಪರೆಯನ್ನು ಅಕ್ಷರಶಃ ಕಾರ್ಯಗತ ಮಾಡಿಕೊಳ್ಳುವ ಮೂಲಕ ಗ್ರಾಮದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದ್ದಾರೆ. ಈಗ್ಗೆ ನಾಲ್ಕಾರು ತಿಂಗಳ ಕೆಳಗೆ, 108ಪರಮ ಪೂಜ್ಯರನ್ನು ಗ್ರಾಮಕ್ಕೆ ಆಮಂತ್ರಿಸುವ ಮೂಲಕ ನಮ್ಮಲ್ಲಿ ದಾರ್ಮಿಕಪ್ರಜ್ಞೆಯನ್ನು ಜಾಗೃತಿಗೊಳಿಸುವ ಹಾಗೂ ಸೌಹಾರ್ದತೆಯ ಬದುಕಿಗೆ ಮಾರ್ಗದರ್ಶನ ಮಾಡಿಸಿದ ಮಹಾತ್ಮರಾಗಿದ್ದಾರೆ ಎಂದರು.
ಇದಕ್ಕೂ ಮುನ್ನ ಊರಹೊರಗಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದಿಂದ ಆರಂಭವಾದ ಬೆಳ್ಳಿಪಲ್ಲಕ್ಕಿ ಮೆರವಣಿಗೆ ಅದ್ಧೂರಿ ಉತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕೋಲಶಾಂತೇಶ್ವರಮಠಕ್ಕೆ ತಲುಪಿತು. ಸಮಾಳ, ನಂದಿಕೋಲು, ಹಲಗೆವಾದನ, ಡೊಳ್ಳುಕುಣಿತ ಹಾಗೂ ಭಜನೆ ಕಲಾವಿದರು, ಪಲ್ಲಕ್ಕಿಯ ಉತ್ಸವದ ಮೆರವಣಿಗೆ ಮೆರಗು ನೀಡಿದರು. ಪಲ್ಲಕ್ಕಿ ಉತ್ಸವ ಎಂಬುದು ಇಡೀ ಊರಲ್ಲಿ ಹಬ್ಬದ ಸಂಭ್ರಮವನ್ನು ಉಂಟುಮಾಡಿತ್ತು.
ಶ್ರೀಮಠದ ಶಾಂತಲಿಂಗದೇಶಿಕೇಂದ್ರಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಉತ್ಸವದಲ್ಲಿ ಬಿಜೆಪಿ ಜಿಲ್ಲಾಘಟಕದ ಮಾಜಿ ಅಧ್ಯಕ್ಷ ಚನ್ನಬಸವನಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಯುವಮುಖಂಡ ಪ್ರಶಾಂತ್ ಪಾಟೀಲ್, ಮಲ್ಲಿಕಾರ್ಜುನಗೌಡ, ಬಿ. ರಾಮಣ್ಣ, ಪೂಜಾರ್ ಮರಿಯಪ್ಪ, ಇಟಿಗಿಹಳ್ಳಿ ಬಸವರಾಜ, ಐ. ಸಲಾಂಸಾಹೇಬ್, ಗುರುಶಾಂತನಗೌಡ, ಎನ್. ಭರತ್, ಪ್ರಭುಗೌಡ ಹಾಗೂ ಗ್ರಾಮದ ಮತ್ತು ಅಕ್ಕಪಕ್ಕದ ಗ್ರಾಮದ ಭಕ್ತರು, ಪ್ರಮುಖರು ಭಾಗವಹಿಸಿದ್ದರು.

Related posts

ರಸಗೊಬ್ಬರದ ಕೃತಕ ಅಭಾವ ಸೃಷ್ಟಿ; ಬಿಜೆಪಿ ಆರೋಪ, ರೈತರ ನೆರವಿಗೆ ಧಾವಿಸದ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ: ಲಿಂಬ್ಯಾನಾಯ್ಕ್

Vijayasiri News

ಹರಪನಹಳ್ಳಿಯಲ್ಲಿ ಜೈನಧರ್ಮದ ಸಂಘದ ನೇತೃತ್ವದಲ್ಲಿ ಪ್ರತಿಭಟನೆ, ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹ

Vijayasiri News

ಹರಪನಹಳ್ಳಿ: ನಾಳೆ ಬೆಸ್ಕಾಂ ಗ್ರಾಹಕರ ಸಂವಾದ ಸಭೆ

Vijayasiri News

ಭಾವೈಕ್ಯತ ತಪೋಭೂಮಿ ಚೌಕಿಮಠದಲ್ಲಿ ಮಹಾ ಕಾರ್ತೀಕೋತ್ಸವ ಹಾಗೂ ದೀಪೋತ್ಸವ

Vijayasiri News

|| ಹರಪನಹಳ್ಳಿ: ಸಿಪಿಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ || ಉಚ್ಚಂಗಿದುರ್ಗದ ಆಶ್ರಯ ಪ್ಲಾಟ್ ನಿವಾಸಿಗಳಿಗೆ ಖಾಸಗೀ ವ್ಯಕ್ತಿಯ ಕಿರುಕುಳ ಆರೋಪ

Vijayasiri News

ಹೊರಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಮನವಿ ಒಂಭತ್ತು ತಿಂಗಳಿನಿಂದಲೂ ಕೈಸೇರದ ವೇತನ; ಬೀದಿಗೆ ಬಿದ್ದ ಕಾರ್ಮಿಕರ ಬದುಕು: ನಿಯೋಗದ ಆಕ್ರೋಶ

admin
error: Content is protected !!