Vijayasiri News
ದಾವಣಗೆರೆ

ಹುಟ್ಟುಹಬ್ಬದ ಸಮಾರಂಭಗಳು ನಮ್ಮ ಬದುಕಿನ ಆದರ್ಶಗಳ ಸಂಕೇತಗಳಾಗಬೇಕು: ಬಿ. ವೀರಣ್ಣ.

ವಿಜಯಸಿರಿನ್ಯೂಸ್.ಕಾಂ/ ದಾವಣಗೆರೆ
ಜನ್ಮದಿನಾಚರಣೆಯ ಸಮಾರಂಭಗಳು ನಮ್ಮ ಬದುಕಿನ ಆದರ್ಶಗಳನ್ನು ಬಿಂಬಿಸುವ ಮತ್ತು ಆ ಆದರ್ಶಗಳು ಇತರರಿಗೂ ಸ್ಫೂರ್ತಿದಾಯಕವಾಗಿರಂತೆ ಇರಬೇಕಾದ ಅವಶ್ಯಕತೆ. ಹಾಗಾದಾಗ ಮಾತ್ರ ಇಂಥಹ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಖ್ಯಾತ ದಲ್ಲಾಲಿಮಂಡಿ ವರ್ತಕ ದೊಗ್ಗಳ್ಳಿ ಮಲ್ಲಿಕಾರ್ಜುನ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಅವರಿಗೆ ಶುಭಕೋರಿ ಅವರು ಮಾತನಾಡಿದರು.
ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್ ಅವರು ಮಾತನಾಡಿ, ಹುಟ್ಟುಹಬ್ಬಗಳು ಒಂದು ನೆಪಮಾತ್ರ. ಆ ಮೂಲಕ ನಮ್ಮ ಬದುಕು, ನಡೆ, ನುಡಿಯ ಜತೆಗೆ, ಮಾನವೀಯಮೌಲ್ಯಗಳ ಆದರ್ಶಗಳು ಇನ್ನೊಬ್ಬರ ಬದುಕಿಗೆ ಸ್ಫೂರ್ತಿಯ ಸೆಲೆಯಾದರೆ, ನಮ್ಮ ಬದುಕಿಗೆ ನೈಜವಾದ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ದೊಗ್ಗಳ್ಳಿ ಮಲ್ಲಿಕಾರ್ಜುನ ಅವರು ಒಬ್ಬ ಅತ್ಯುತ್ತಮ ವ್ಯಾಪಾರಿಯಾಗಿರುಗ ಜತೆಗೆ, ಇತರರಿಗೂ ಮಾದರಿಯ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿಯೇ ಅವರ ಅಭಿಮಾನಿಗಳ ಬಳಗ ಪ್ರತಿವರ್ಷ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ, ಮುಖಂಡರಾದ ಬಿಸ್ಲೇರಿ ಶಂಕ್ರಣ್ಣ, ಆರ್.ಜಿ. ಸುನೀಲ್‌ಕುಮಾರ್, ಎಚ್.ಬಿ. ಯೋಗೇಶ್, ಇಟ್ಟಿಗುಡಿ ಮಂಜುನಾಥ, ಶಿವಾಲಿ ಶಿವಣ್ಣ, ಬಿ.ಟಿ. ಸುಪುತ್ರ, ಬಿ. ರಾಜ್ ಉಪಸ್ಥಿತರಿದ್ದರು.

Related posts

ಮೂಗ ಮತ್ತು ಕಿವುಡ ಸ್ನೇಹಿತರ ಮಾದರಿ ಗಣೇಶ ಪ್ರತಿಷ್ಠಾಪನೆ, ವಿಶೇಷಚೇತನರ ವೈಭವದ ಉತ್ಸವಕ್ಕೆ ಈಗ ದಶಮಾನದ ಸಂಭ್ರಮ

Vijayasiri News

ಡಿಜೆ ನಿಷೇಧಿಸಿರುವ ಕ್ರಮ ಸ್ವಾಗತಾರ್ಹ: ಜಿಲ್ಲಾಡಳಿತದ ಕ್ರಮದಲ್ಲಿ ರಾಜಕಾರಣ ಬೇಡ: ಬಿ. ವೀರಣ್ಣ

Vijayasiri News
error: Content is protected !!