Vijayasiri News
ಕೂಡ್ಲಿಗಿವಿಜಯನಗರ

||ಚಪ್ಪಲಿಯಿಂದ ಹೊಡೆದು; ಅಶ್ಲೀಲ ಪದಗಳಿಂದ ನಿಂದಿಸಿದ ಪೇದೆ ಮಂಜುನಾಥ || ಕರ್ತವ್ಯನಿರತ ಬಸ್ ಚಾಲಕನ ಮೇಲೆ ಪೊಲೀಸ್ ಮುಖ್ಯ ಪೇದೆ ಗೂಂಡಾಗಿರಿ…!

ವಿಜಯಸಿರಿನ್ಯೂಸ್.ಕಾಂ/ಕೂಡ್ಲಿಗಿ
ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರ ಮೇಲೆ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಒಬ್ಬ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗಜಾಪುರ ಗ್ರಾಮದ ಬಳಿ ಗುರುವಾರ ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರದಿಂದ ಕೂಡ್ಲಿಗಿ, ಸಂಡೂರು ಮಾರ್ಗವಾಗಿ ಬಳ್ಳಾರಿ ಕಡೆ ಚಲಿಸುತ್ತಿದ್ದ ಬಸ್, ಕೊಟ್ಟೂರುನಿಂದ ನಿರ್ಗಮಿಸಿದ ನಂತರ, ಮಲ್ಲನಾಯಕಹಳ್ಳಿ ಸಮೀಪದಲ್ಲಿ ಅದೇ ಮಾರ್ಗದಲ್ಲಿ ಬಸ್ ಮುಂದೆ ಚಲಿಸುತ್ತಿದ್ದ, ಬೈಕ್ ಅನ್ನು ಹಿಂದಿಕ್ಕಲು ಬಸ್ ಚಾಲಕ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಎದುರಗಡೆಯಿಂದ ಕಾರೊಂದು ವೇಗವಾಗಿ ಬಂದಿದೆ. ಕೂಡಲೇ ಬಸ್ ಚಾಲಕ ರಾಮಲಿಂಗಪ್ಪ ಅವರು, ಬಸ್‌ಅನ್ನು ರಸ್ತೆ ಮೇಲೆ ತಿರುಗಿಸಿಕೊಂಡಿದ್ದಾರೆ. ಈ ವೇಳೆ, ಹಿಂದೆ ಇದ್ದ ಬೈಕ್ ಸವಾರ ಪೊಲೀಸ್ ಪೇದೆ ಸಡನ್ ಆಗಿ, ನಿಯಂತ್ರಣಕ್ಕೆ ತಂದುಕೊಂಡಿದ್ದಾನೆ. ಇದರಿಂದ ಕುಪಿತಗೊಂಡ, ಪೊಲೀಸ್ ಪೇದೆ ಮಂಜುನಾಥ, ಬಸ್ ಅನ್ನು ಬೆನ್ನಟ್ಟಿ, ಗಜಾಪುರ ಗ್ರಾಮದ ಬಳಿ ಬರುತ್ತಿದ್ದಂತಿಯೇ, ಅಡ್ಡಗಟ್ಟಿ, ಚಾಲಕನ ಮೇಲೆ ತನ್ನ ಪರಾಕ್ರಮ ತೋರಿಸಲು ಮುಂದಾಗಿದ್ದಾನೆ.

ಚಾಲಕ ರಾಮಲಿಂಗಪ್ಪ ಅವರು, ನಡೆದ ಘಟನೆಯನ್ನು ತಿಳಿಹೇಳಿ, ತಪ್ಪಾಗಿದೆ ಕ್ಷಮಿಸಿ ಸರ್ ಎಂದು ಪರಿಪರಿಯಾಗಿ ಬೇಡಿಕೊಂಡರು, ಸುಮ್ಮನಾಗದ ಪೊಲೀಸ್ ಪೇದೆ ಮಂಜುನಾಥ ಥೇಟ್ ಪುಡಿ ರೌಡಿಯಂತೆ ಬಸ್ ಒಳಗೆ ನುಗ್ಗಿ, ಚಾಲಕನ ಮೇಲೆ ಮನಬಂದಂತೆ ಥಳಿಸಿದ್ದಾನೆ. ಜತೆಗೆ, ಚಪ್ಪಲಿಯಿಂದಲೂ ಎಲ್ಲೆಂದರಲ್ಲಿ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಸಹ, ಹೊಡೆಯಬೇಡಿ ಸರ್ ಎಂದರು, ಕೇಳದ ಪೊಲೀಸ್ ಪೇದೆ ಮಂಜುನಾಥ, ಯಾರ ಮಾತಿಗೂ, ಬೆಲೆ ಕೊಡದೇ, ಮನಸೋಇಚ್ಛೆ ಥಳಿಸಿದ್ದಾನೆ. ಜತೆಗೆ, ಚಾಲಕನ ರಾಮಲಿಂಗಪ್ಪನ ತಾಯಿ, ಹೆಂಡತಿ ಪದಪ್ರಯೋಗಿಸಿ, ತೀರ ಅಶ್ಲೀಲವಾಗಿ ಬಾಯಿಗೆ ಬಂದಂತೆ ಬೈದಿದ್ದಾನೆ.
ಒಂದು ವೇಳೆ ಬಸ್ ಚಾಲಕ ತಪ್ಪೆಸಗಿದ್ದರೇ, ಕೂಡಲೇ ಚಾಲಕನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ, ಕಾನೂನು ಕ್ರಮ ಅನುಸರಿಸಬೇಕಿತ್ತು. ಆದರೆ, ತಾನೊಬ್ಬ ಪೊಲೀಸ್ ಎಂಬ ಏಕೈಕ ಕಾರಣಕ್ಕಾಗಿ, ಸಾರ್ವಜನಿಕವಾಗಿ, ಒಬ್ಬ ಕರ್ತವ್ಯನಿರತ ಬಸ್ ಚಾಲಕನ ಮೇಲೆ ಮನಸೋಇಚ್ಛೆ ಥಳಿಸಿರುವ, ಚಪ್ಪಲಿಯಿಂದ ಹೊಡೆದಿರುವ ಪೊಲೀಸ್ ಪೇದೆ ಮಂಜುನಾಥ ನಡೆ, ತೀರ ಉದ್ದಟತನದಿಂದ ಕೂಡಿದೆ. ಈತನಿಗೆ ಹೀಗೆ ಹೊಡೆಯುವ ಅಧಿಕಾರವನ್ನ ಕೊಟ್ಟವರು ಯಾರು…? ಎಂಬುದು ಸಾರ್ವಜನಿಕರ ಪ್ರಶ್ನೆ.


ಚಾಲಕನ ಮೇಲೆ ರೌಡಿಯಂತೆ ವರ್ತಿಸಿ, ಹೊಡೆಯುತ್ತಿರುವ ದೃಶ್ಯ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಕುರಿತು, ಸಂಬಂಧಿಸಿದ ಮೇಲಧಿಕಾರಿಗಳ ಜತೆ ಮಾತನಾಡಿದ ಬಸ್ ಚಾಲಕ, ರಾಮಲಿಂಗಪ್ಪ ಅವರು, ಕೂಡ್ಲಿಗಿ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸ್ ಮುಖ್ಯಪೇದೆ ಮಂಜುನಾಥ ವಿರುದ್ಧ ಪ್ರಕರಣ ದಾಖಲಾಗಿದೆ.

Related posts

ಕಂಚಿಕೆರೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗೆ ಮನವಿ

admin

ವಿಜಯನಗರ: ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ವಕೀಲ ಬಸವರಾಜ ಸಂಗಪ್ಪನವರ್ ನೇಮಕ

Vijayasiri News

ಅರಸೀಕೆರೆ: ಕಲುಷಿತ ಕುಡಿಯುವ ನೀರು ಪೂರೈಕೆ; ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ, ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ಕೊರೆಯಿಸಿ ಕೊಡುವುದಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಭರವಸೆ; ಪ್ರತಿಭಟನೆ ಸ್ಥಗಿತ

Vijayasiri News

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News

ಭಾವೈಕ್ಯತ ತಪೋಭೂಮಿ ಚೌಕಿಮಠದಲ್ಲಿ ಮಹಾ ಕಾರ್ತೀಕೋತ್ಸವ ಹಾಗೂ ದೀಪೋತ್ಸವ

Vijayasiri News

ಹೂವಿನಹಡಗಲಿ ಮೂಲದ ಎಎಸ್‌ಐ ಹೃದಯಾಘಾತದಿಂದ ಸಾವು

Vijayasiri News
error: Content is protected !!