ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ತಾಲೂಕಿನ ಅರಸೀಕೆರೆ ಹೋಬಳಿಯ ಅತಿದೊಡ್ಡ ಗ್ರಾಮವಾದ ಹಾಗೂ ನಿತ್ಯವೂ ನೂರಾರು ಪ್ರಯಾಣಿಕರ ಪ್ರಯಾಣಿಸುತ್ತಿರುವ ಕಂಚಿಕೆರೆ ಬಸ್‌ನಿಲ್ದಾಣಕ್ಕೆ ಸೂಕ್ತ ಮೂಲಸೌಕರ್ಯಗಳ ಕೊರತೆಯಿಂದಾಗಿ, ಪ್ರಯಾಣಿಕರು ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ದಿಶಾ ಕಮಿಟಿ ಸದಸ್ಯ ರೆಡ್ಡಿ ಶಾಂತಕುಮಾರ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.
ಸೋಮವಾರ ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನಿಯೋಗ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಿದೆ.
ಅರಸೀಕೆರೆ ಹೋಬಳಿಯ ಅತಿದೊಡ್ಡ ಗ್ರಾಮವಾದ ಕಂಚಿಕೆರೆ ತಾಲೂಕು ಕೇಂದ್ರ ಹರಪನಹಳ್ಳಿ, ಹೋಬಳಿ ಕೇಂದ್ರಸ್ಥಾನ ಹಾಗೂ ದಾವಣಗೆರೆ ಜಿಲ್ಲಾ ಕೇಂದ್ರಕ್ಕೂ ಸಂಪರ್ಕ ಬೆಸೆಯುವ ಪ್ರಮುಖ ಗ್ರಾಮವಾಗಿದೆ. ಬ್ಯಾಂಕ್ ವ್ಯವಹಾರ, ವಾರದ ಸಂತೆ, ದಿನಸಿ ಖರೀದಿ ಹಾಗೂ ಆಸ್ಪತ್ರೆ ಸೇರಿದಂತೆ ವಿವಿಧ ದೈನಂದಿನ ಕೆಲಸ ಕಾರ್ಯಗಳಿಗಾಗಿ, ನಿತ್ಯವೂ ನೂರಾರು ಜನ ಸಾರ್ವಜನಿಕರು, ಗ್ರಾಮಕ್ಕೆ ಬಂದು ಹೋಗುತ್ತಾರೆ. ಜತೆಗೆ, ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ಖಾಸಗೀ ಶಾಲಾ- ಕಾಲೇಜುಗಳು ಇರುವುದರಿಂದ ನೂರಾರು ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗಾಗಿ ವ್ಯಾಸಂಗಕ್ಕೆ ಬರುತ್ತಿದ್ದಾರೆ. ಅರಸೀಕೆರೆ ಹೋಬಳಿಯೂ ಸೇರಿದಂತೆ ಪಕ್ಕದ ತೆಲಿಗಿ ಹೋಬಳಿಯ ಜನರು ಕಂಚಿಕೆರೆ ಗ್ರಾಮವನ್ನು ವಿವಿಧ ಕೆಲಸ- ಕಾರ್ಯಗಳಿಗಾಗಿ ಅವಲಂಭಿಸಿದ್ದಾರೆ. ಇಂಥಹ ಜನನಿಬಿಡ ಅತಿದೊಡ್ಡ ಗ್ರಾಮದಲ್ಲಿರುವ ಬಸ್‌ನಿಲ್ದಾಣ ಸೂಕ್ತ ಸೌಲಭ್ಯಗಳಿಲ್ಲದೆ, ತೊಂದರೆ, ಅನುಭವಿಸುತ್ತಿದ್ದಾರೆ. ಬಸ್‌ನಿಲ್ದಾಣಕ್ಕೆ ಸೂಕ್ತ ಕಂಪೌAಡ್ ಇಲ್ಲದ ಪರಿಣಾಮ, ಪಾಳುಬಿದ್ದಿದೆ. ಹೀಗಾಗಿ, ಕೂಡಲೇ ಕಂಪೌAಡ್ ನಿರ್ಮಿಸಿ, ಪ್ರಯಾಣಿಕರಿಗೆ ಸೂಕ್ತ ಸೌಕರ್ಯ ಒದಗಿಸುವಂತೆ ನಿಯೋಗದ ಸದಸ್ಯರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ವಿವಿರಿಸಿದ್ದಾರೆ.
ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜ್ ಕೊಠಡಿ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ, ಅಗತ್ಯ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಮೌಲಸೌಕರ್ಯ ಕಲ್ಪಿಸಬೇಕು. ಜತೆಗೆ, ಗ್ರಾಮದ ಸಮೀಪದಲ್ಲಿರುವ ಹಳ್ಳಿಕೆರೆ ಕಂದಾಯ ಗ್ರಾಮದಲ್ಲಿ ಗ್ರಾಮ ಆಡಳಿತ ಅಧಿಕಾರಿ ಕಚೇರಿ ತೆರೆಯಬೇಕು. ಈ ಕಂದಾಯ ಗ್ರಾಮಕ್ಕೆ ಹೊಂದಿಕೊAಡಿರುವ ಕೋಡಿತಾಂಡಾ, ವಡೇರಹಳ್ಳಿ, ಹೊನ್ನೇನಹಳ್ಳಿ, ಕೊರಚರಹಟ್ಟಿ ಹಾಗೂ ಶ್ರೀನಗರ ಕ್ಯಾಂಪ್ ಸೇರಿದಂತೆ ವಿವಿಧ ಹಳ್ಳಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಸೌಕರ್ಯ ಇಲ್ಲದೇ ಇಲ್ಲಿನ ಜನ ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಸಂಬAಧಿಸಿದ ಅಧಿಕಾರಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಕಾರ್ಯಾಚರಣೆ ಆರಂಭಿಸಲು ಸೂಕ್ತ ನಿರ್ದೇಶನ ನೀಡುವಂತೆಯೂ ನಿಯೋಗ ಮನವಿಯಲ್ಲಿ ಕೋರಿದೆ.
ಸುನೀಲ್‌ಕುಮಾರ್ ಬಿದ್ರಿ, ಜಾತಪ್ಪ, ಕರಿಬಸಯ್ಯ ಹಾಗೂ ನಾಗರಾಜ್ ಅವರು ನಿಯೋಗದಲ್ಲಿ ಹಾಜರಿದ್ದರು.

