Vijayasiri News
ನಮ್ಮೂರ ಸುದ್ದಿವಿಜಯನಗರ

|| ಕೆರೆಗುಡಿಹಳ್ಳಿ: ಗ್ರಾಮಸ್ಥರ ಪಾಲಿಗೆ ಕಂಟಕವಾಗಿದ್ದ ಹೂಳು ತುಂಬಿದ ಚರಂಡಿ || ಕೊನೆಗೂ ಹೂಳು ತೆರೆವುಗೊಳಿಸಲು ಮುಂದಾದ ಪಂಚಾಯ್ತಿ ಸದಸ್ಯ

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಅದು ನಿತ್ಯವೂ ಜನಸಂದಣಿಯಿಂದ ಕೂಡಿದ ತಾಲ್ಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಆಯಕಟ್ಟಿನ ಪ್ರಮುಖ ಪ್ರದೇಶ. ಇದೇ ಆಯಕಟ್ಟಿನ ಕೇಂದ್ರದಲ್ಲಿಯೇ ಬಸ್‌ನಿಲ್ದಾಣವೂ ಇದೆ. ಹೀಗಾಗಿಯೇ, ಈ ಪ್ರದೇಶವನ್ನು ಬಹುತೇಕರು ಅವಲಂಬಿಸಿಕೊಂಡೇ ತಮ್ಮ ಕೆಲಸ; ಕಾರ್ಯಗಳಿಗೆ ಹೋಗುತ್ತಾರೆ. ಆದರೆ, ಈ ಪ್ರದೇಶದಲ್ಲಿ ಹಾದುಹೋಗಿರುವ ಚರಂಡಿಯ ಹೂಳನ್ನು ಸಂಬಂಧಿಸಿದ ಗ್ರಾಮಪಂಚಾಯ್ತಿ ಅಧಿಕಾರಿಗಳು ಕಾಲಕಾಲಕ್ಕೆ ಶುಚಿಗೊಳಿಸದ ಹಿನ್ನೆಲೆಯಲ್ಲಿ ಚರಂಡಿ ಕೆಟ್ಟವಾಸನೆ ಹೊರಸೂಸುವ ಅನೈರ್ಮಲ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಮಧ್ಯೆ, ಇದೇ ಚರಂಡಿಯಲ್ಲಿ ಬೀದಿ ನಾಯಿಯೊಂದು ಸತ್ತುಬಿದ್ದ ಪರಿಣಾಮ ಈ ಪ್ರದೇಶವೆಂಬುದು ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿ ರೂಪಾಂತರವಾಗಿತ್ತು, ಇಲ್ಲಿನ ಸಂಚರಿಸುವವರ ಪಾಲಿಗೆ ನರಕಯಾತನೆ ಅನುಭವಿಸುವ ಸ್ಫಾಟ್‌ನಂತೆ ಮಾರ್ಪಾಡಾಗಿತ್ತು…..!
ದೈನಂದಿನ ಕೆಲಸ; ಕಾರ್ಯಗಳಿಗೆ ಹೊರಡುವ ಸಾರ್ವಜನಿಕರು, ಬಸ್‌ಗಾಗಿ ಕಾಯುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈ ಪ್ರದೇಶ ಸಮೀಪಿಸುತ್ತಿದ್ದಂತಿಯೇ, ಮುಖವಸ್ತç ಇಲ್ಲವೇ ಟವೆಲ್‌ಗಳಿಂದ ಮೂಗುಮುಚ್ಚಿಕೊಂಡು, ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು, ಹೊಸಕೋಟೆ ಪಂಚಾಯ್ತಿ ಕಚೇರಿಗೆ ತಿಳಿಸಿದರೂ, ತಿಳಿಸಿದರೂ, ಪಂಚಾಯ್ತಿ ಆಡಳಿತ ಮಂಡಳಿ ಸಕಾಲದಲ್ಲಿ ಸ್ಪಂದಿಸಿರಲಿಲ್ಲ. ಹೀಗಾಗಿ, ಚರಂಡಿಯ ಪರಿಸ್ಥಿತಿಯನ್ನು ಪಂಚಾಯ್ತಿ ಸದಸ್ಯ ಕಬ್ಬಳ್ಳಿ ನಾಗರಾಜ ಅವರ ಕಿವಿಗೆ ಹಾಕುತ್ತಿದ್ದಂತಿಯೇ, ಕೂಡಲೇ ಕಾರ್ಯೋನ್ಮುಖರಾದ ನಾಗರಾಜ ಅವರು, ಪಂಚಾಯ್ತಿ ಸಿಬ್ಬಂದಿಗೆ ದೂರವಾಣಿ ಕರೆಮಾಡುವ ಮೂಲಕ ಗ್ರಾಮಸ್ಥರು, ಅನುಭವಿಸುತ್ತಿರುವ ಯಾತನೆಯನ್ನು ವಿವರಿಸಿ, ಕಾರ್ಮಿಕರನ್ನು ಕಳುಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಸದಸ್ಯ ನಾಗರಾಜ ಅವರು ಸೂಚಿಸುತ್ತಿದ್ದಂತಿಯೇ ಫುಲ್ ಅಲರ್ಟ್ ಆದ ಅಧಿಕಾರಿಗಳು, ಕೂಡಲೇ, ಕಾರ್ಮಿಕರನ್ನು ಕೆರೆಗುಡಿಹಳ್ಳಿ ಗ್ರಾಮಕ್ಕೆ ಕಳುಹಿಸಿದ್ದಾರೆ. ಬಳಿಕ, ಸದಸ್ಯ ಕಬ್ಬಳ್ಳಿ ನಾಗರಾಜ ಅವರು, ಕಾರ್ಮಿಕರನ್ನು ಆ ಪ್ರದೇಶಕ್ಕೆ ಕರೆದೊಯ್ದು, ಚರಂಡಿಯಲ್ಲಿ ಸತ್ತು ಬಿದ್ದಿದ್ದ ಬೀದಿ ನಾಯಿಯ ದೇಹವನ್ನು ಊರ ಹೊರಗೆ ಸಾಗಿಸಿದ್ದಾರೆ. ಆ ನಂತರ, ಚರಂಡಿಯನ್ನು ಶುಚಿಗೊಳಿಸಿ, ಅಕ್ಕಪಕ್ಕದಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಂಟೆ ಹಾಗೂ ಕಸವನ್ನು ತೆರವುಗೊಳಿಸಿ, ಮಲೀನ ನೀರು ಸಾರಾಗವಾಗಿ ಹರಿದುಹೋಗುವಂತೆ ಕ್ರಮವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಕಬ್ಬಳ್ಳಿ ನಾಗರಾಜ, ಕೆಲ ಸಮಸ್ಯೆಗಳು ನಮಗೆ ಮಾಹಿತಿ ಬರದಂತೆ ಮರೆಯಾಗಿಬಿಡುತ್ತವೆ. ಹೀಗಾಗಿ, ನಮ್ಮ ಗ್ರಾಮದ ಸಣ್ಣ ಮಗುವಿನಿಂದ ಹಿಡಿದು, ಯಾರೇ ಆಗರಲಿ, ತಕ್ಷಣ ಮಾಹಿತಿ ಒದಗಿಸಬೇಕು ಎಂದು ಕೋರಿದ ಅವರು, ನಾನು ಈ ಕೆರೆಗುಡಿಹಳ್ಳಿ ಗ್ರಾಮದ ಮಗ. ಇಲ್ಲಿನ ಸಮಸ್ಯೆಗೆ ಸಂಬಂಧಿಸಿದಂತೆ ಮಧ್ಯರಾತ್ರಿಯಲಿ ಫೋನ್ ಕರೆಮಾಡಿದರೂ, ಆ ಕ್ಷಣದಲ್ಲಿ ನಾನು ಅಲ್ಲಿರುತ್ತೇನೆ. ಇದರಲ್ಲಿ ಅನುಮಾನವೇ ಬೇಡ. ಹೀಗಾಗಿಯೇ, ಜನ ನನ್ನ ಮೇಲೆ ನಂಬಿಕೆ ಇಟ್ಟು ಗ್ರಾಮದ ಸೇವೆಯನ್ನು ಮಾಡಲು ಅವಕಾಶ ಕೊಟ್ಟಿದ್ದಾರೆ. ಗ್ರಾಮಸ್ಥರು ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುವುದು ನನ್ನ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪಿ.ಎಸ್. ವೀರೇಶ್, ಪಿ. ತಿಪ್ಪೇಶ್, ವಕೀಲ ಎನ್. ನಾಗರಾಜ್ ಸೇರಿದಂತೆ ಇತರರು ಇದ್ದರು.

Related posts

ಹೂವಿನಹಡಗಲಿ: ನಾಡಕಚೇರಿಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಸಾರ್ವಜನಿಕರ ಅಹವಾಲು ಸ್ವೀಕಾರ: ನಿವೇಶನರಹಿತ ಕುಟುಂಬಗಳಿಗೆ ನಿವೇಶನ ಒದಗಿಸಲು ಕ್ರಮಕ್ಕೆ ಸೂಚನೆ

Vijayasiri News

ಎಸ್‌ಯುಜೆಎಂ ಕಾಲೇಜಿನಲ್ಲಿ ನಡೆದ ಅಭಿಯಾನ || ಹರಪನಹಳ್ಳಿ: ನಶಾಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಬೋಧನೆ ||

Vijayasiri News

ವಿಜಯನಗರ: ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ವಕೀಲ ಬಸವರಾಜ ಸಂಗಪ್ಪನವರ್ ನೇಮಕ

Vijayasiri News

ಜೋಕುಮಾರಮೂರ್ತಿಯ ಮೇಲೆ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರಾಧನೆ ಸ್ಥಗಿತ; ಅಂದಿನಿಂದಲೇ ಊರ ಹೆಸರು ನಾಮಾಂಕಿತ, ಹುಲಿಕಟ್ಟೆ: ಈ ಊರಲ್ಲಿ ಜೋಕುಮಾರಸ್ವಾಮಿ ಆರಾಧನೆ ನಿಷಿದ್ಧ!

Vijayasiri News

ತೆಲಗಿಯಲ್ಲಿ ನಾಳೆ ಬೆಸ್ಕಾಂ ಗ್ರಾಹಕರ ಸಂವಾದ ಸಭೆ

Vijayasiri News

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಹೊಲಿಗೆ ತರಬೇತಿ ಸಮಾರೋಪ|| ಕುಟುಂಬದ ಆರ್ಥಿಕ ಸದೃಢತೆಗೆ ಸ್ವ- ಉದ್ಯೋಗ ಸಹಕಾರಿ: ಸತೀಶ್‍ಶೆಟ್ಟಿ

Vijayasiri News
error: Content is protected !!